144ಲೀ ಮದ್ಯ ವಶ, ಒಬ್ಬನ ಬಂಧನ

Alcohal-Web
Published on

ಕಾಸರಗೋಡು: ಕುಂಬಳೆ ಸನಿಹದ ಬಂಬ್ರಾಣ ಮತ್ತು ಕಯ್ಯರಿನಲ್ಲಿ ಅಬಕಾರಿ ದಳ ಅಧಿಕಾರಿಗಳು ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ 144.9ಲೀ. ಮದ್ಯ ವಶಪಡಿಸಿಕೊಂಡು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಬಂಬ್ರಾಣ ಸನಿಹದ ಕಟ್ಟತ್ತಡ್ಕದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 129.6ಲೀ. ಮದ್ಯ ವಶಪಡಿಸಿಕೊಂಡು, ಮಂಜೇಶ್ವರ ಕುಳೂರು ಚಾರ್ಲ ನಿವಾಸಿ ಚಂದ್ರಶೇಖರ ಎಂಬಾತನನ್ನು ಬಂಧಿಸಿದ್ದಾರೆ. ಮದ್ಯ ಸಾಗಾಟಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಕುಂಬಳೆ ರೇಂಜ್ ಅಬಕಾರಿ ದಳ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಮಂಗಲ್ಪಾಡಿ ಪಂಚಾಯಿತಿ ಕಯ್ಯರಿನ ಹಿತ್ತಿಲೊಂದರಲ್ಲಿ ಅವಿತಿರಿಸಲಾಗಿದ್ದ 15.3ಲೀ ಸಾರಾಯಿ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಪತ್ತೆಯಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net