ವಿದ್ಯಾರ್ಥಿಗಳ ಅನ್ನದಾನ ನಿಧಿಗೆ ದೇಣಿಗೆ

donation
ಚೇತನಾ ವಿಶೇಷ ಶಾಲೆ ಶಾಶ್ವತ ಅನ್ನದಾನ ನಿಧಿಯನ್ನು ಹಸ್ತಾಂತರಿಸಲಾಯಿತು
Published on

ಕಾರ್ಕಳ: ಉದ್ಯಮಿ ದಿ.ಜಿ.ವಿಪುಲ್ ಕಿಣಿಯವರು ಇತ್ತೀಚೆಗೆ ನಿಧನರಾಗಿದ್ದು, ಅವರ ಹೆಸರು ಶಾಶ್ವತವಾಗಿ ಉಳಿಯುವ ಪ್ರಯುಕ್ತ ಜೇಸಿ ಆಂಗ್ಲ ಮಾಧ್ಯಮ ಶಾಲೆ ಕ್ಲಾಸ್ ಆಫ್ 92 ಬ್ಯಾಚ್ ವಿದ್ಯಾರ್ಥಿಗಳು ಚೇತನಾ ವಿಶೇಷ ಶಾಲೆ ಕಾರ್ಕಳದಲ್ಲಿ 1,00,001ರೂ.ವನ್ನು ವಿದ್ಯಾರ್ಥಿಗಳ ಅನ್ನದಾನ ನಿಧಿಗೆ ದೇಣಿಗೆ ನೀಡಿದ್ದಾರೆ. ಈ ಮೊತ್ತದಿಂದ ಬರುವ ಬಡ್ಡಿ ಹಣದಿಂದ ವಿದ್ಯಾರ್ಥಿಗಳಿಗೆ ಒಂದು ದಿನದ ಅನ್ನದಾನ ಪ್ರತಿ ವರ್ಷ ಜೂನ್ 28ರಂದು ನೀಡಿವಂತೆ ಶಾಶ್ವತ ಅನ್ನದಾನ ನಿಧಿಯನ್ನು ಇತ್ತೀಚೆಗೆ ಸ್ಥಾಪಿಸಲಾಯಿತು.

ಜೇಸಿ ಶಾಲೆ ಹಳೇ ವಿದ್ಯಾರ್ಥಿಗಳಾದ ಯೋಗೀಶ್ ನಾಯಕ್ ಟಿ., ಸ್ಮಿತಾ ಶೆಣೈ, ಗುರುಪ್ರಸಾದ್ ಶೆಟ್ಟಿಗಾರ್, ನವೀನ್ ಡಿಸೋಜ, ಗೋಕುಲ್‌ದಾಸ್ ಡಿ.ಶೆಟ್ಟಿ ಮತ್ತು ಶಶಿಧರ್ ಹೆಗ್ಡೆ ನಿಧಿಯ ಚೆಕ್ಕನ್ನು ಚೇತನಾ ವಿಶೇಷ ಶಾಲೆ ಸಂಚಾಲಕ ರಘುನಾಥ್ ಶೆಟ್ಟಿಗೆ ಹಸ್ತಾಂತರಿಸಿದರು. ಶಿಕ್ಷಕರು, ಗಣ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net