

ಕೋಟ: ಕಲೆ ಮತ್ತು ಶಿಕ್ಷಣ ಸಂಯೋಜಿಸಿ ಮಾಡುತ್ತಿರುವಂಥ ಈ ಸಂವಾದ ಕಾರ್ಯಕ್ರಮ ಅತ್ಯುತ್ತಮವಾದ ಕಾರ್ಯ. ಇದರಿಂದ ಇಂದಿನ ಸಮಾಜಕ್ಕೂ ಮುಂದಿನ ತಲೆಮಾರಿಗೂ ಕಲೆ ಮತ್ತು ಶಿಕ್ಷಣದ ಮಹತ್ವಿಕೆ ತಿಳಿಸುವಲ್ಲಿ ಇದು ಸಹಕರಿಸುತ್ತದೆ ಎಂದು ಯಕ್ಷಗಾನ ಕಲಾವಿದ ಕೃಷ್ಣಮೂರ್ತಿ ಉರಾಳ ಹೇಳಿದರು.
ರಸರಂಗ ಕೋಟ ಯಶಸ್ವಿ ಕಲಾವೃಂದ ತೆಕ್ಕಟ್ಟೆ ಸಹಕಾರದೊಂದಿಗೆ, ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ‘ಕಲೆ ಮತ್ತು ಶಿಕ್ಷಣ’ ವಿಷಯದ ಮೇಲಿನ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿರಿಯ ರಂಗ ಹಾಗೂ ಸಿನಿಮಾ ನಿರ್ದೇಶಕ ಸದಾನಂದ ಸುವರ್ಣರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ರಂಗಕರ್ಮಿ ರಘು ಪಾಂಡೇಶ್ವರ, ಶಿಕ್ಷಕರಾದ ಸುಧಾ ಆಡುಕೊಳ, ನರೇಂದ್ರ ಕುಮಾರ ಕೋಟ, ಸತೀಶ್ ವಡ್ಡರ್ಸೆ, ರಾಘವೇಂದ್ರ ತುಂಗ, ರಂಗಭೂಮಿ ಶ್ರೀಶ ತೆಕ್ಕಟ್ಟೆ ಹಾಗೂ ಸಂಪ್ರದಾಯ ರಂಗಭೂಮಿ ಜಾನ್ಹವಿ ಹೇರಳೆ ತಮ್ಮ ಅಭಿಪ್ರಾಯ ಮಂಡಿಸಿದರು. ಶಿಕ್ಷಕಿ, ರಂಗಕರ್ಮಿ ಅಭಿಲಾಷಾ ಎಸ್., ಸಮನ್ವಯಕಾರರಾದ ಡಾ.ಪ್ರದೀಪ ವಿ.ಸಾಮಗ, ಯಶಸ್ವಿ ಕಲಾವೃಂದದ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ರಸರಂಗದ ಅಧ್ಯಕ್ಷೆ ಸುಧಾ ಮಣೂರು ನಿರೂಪಿಸಿದರು.