ಸರ್..ಸೊಸೆ ಗುಟ್ಖಾ ತಿಂದು ಎಲ್ಲೆಂದರಲ್ಲಿ ಉಗುಳುತ್ತಾಳೆ: ಪೊಲೀಸರಿಗೆ ದೂರು ನೀಡಿದ ಅತ್ತೆ..

luknow woman
Published on

ಲಕ್ನೋ: ಸಾಮಾನ್ಯವಾಗಿ ಕುಟುಂಬಗಳಲ್ಲಿ ಅತ್ತೆ ಮತ್ತು ಸೊಸೆಯ ನಡುವಿನ ಜಗಳದ ಸುದ್ದಿಗಳು ಮುನ್ನೆಲೆಗೆ ಬರುತ್ತವೆ. ಕೆಲವೆಡೆ ಈ ಜಗಳಕ್ಕೆ ವರದಕ್ಷಿಣೆ ಕಾರಣವಾದರೆ ಮತ್ತೆ ಕೆಲವೆಡೆ ಬೇರೆಯದ್ದೇ ಕಾರಣ. ಆದರೆ ಅತ್ತೆ ಮತ್ತು ಸೊಸೆಯ ನಡುವಿನ ಜಗಳಕ್ಕೆ ಉತ್ತರ ಪ್ರದೇಶದ ಲಕ್ನೋದಿಂದ ವಿಶಿಷ್ಟ ಕಾರಣವೊಂದು ಮುನ್ನೆಲೆಗೆ ಬಂದಿದೆ.

ಹೊಸ ಸೊಸೆಯ ಚೇಷ್ಟೆಯಿಂದ ಸಿಟ್ಟಾದ ಅತ್ತೆ ನೇರವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಉತ್ತರಪ್ರದೇಶದ ಲಕ್ನೋ ಬಳಿ ನಡೆದಿದ್ದು, ಎಲ್ಲರ ಹೆಸರುಗಳನ್ನು ಗುಪ್ತವಾಗಿಡಲಾಗಿದೆ. ಇಲ್ಲಿನ ಮಹಿಳೆಯೊಬ್ಬಳು ತನ್ನ ಮಗನಿಗೆ 5 ತಿಂಗಳಿಗೆ ಮದುವೆಯಾಗಿದೆ. ಸೊಸೆಯು ಆಕೆ ಮನೆಯಲ್ಲಿಯೇ ಗುಟ್ಕಾ ತಿಂದು ಎಲ್ಲೆಂದರಲ್ಲಿ ಉಗುಳುತ್ತಾಳೆ. ಅಲ್ಲದೇ ಕುಟುಂಬಸ್ಥರಿಗೆ 'ಯಾರ್'(ಸ್ನೇಹಿತ) ಎಂಬ ಪದವನ್ನು ಸಂಭಾಷಣೆಯಲ್ಲಿ ಬಳಸುತ್ತಾಳೆ. ಇದರಿಂದಾಗಿ ಪಕ್ಕದ ಮನೆಯವರು ನಮ್ಮ ಮನೆಗೆ ಬರಲು ಹಿಂಜರಿಯುತ್ತಿದ್ದಾರೆ ಎಂದು ದೂರಿದ್ದಾಳೆ.  

ಈ ವೇಳೆ ಸೊಸೆಯ ತಾನು ಇನ್ನು ಮುಂದೆ ಕುಟುಂಬಸ್ಥರಿಗೆ 'ಯಾರ್'​ ಎಂದು ಕರೆಯುವುದಿಲ್ಲ, ಮನೆಯಲ್ಲಿ ಗುಟ್ಕಾ ತಿಂದು ಅಲ್ಲಿ ಇಲ್ಲಿ ಉಗುಳುವುದನ್ನು ಬಿಡುತ್ತೇನೆ ಎಂದು ಹೇಳಿದ್ದಾಳೆ. ಈ ವೇಳೆ ಸೊಸೆ ತಾನು ಗುಟ್ಕಾ ತಿನ್ನುವುದನ್ನು ಮಾತ್ರ ಬಿಡುವುದಿಲ್ಲ ಎಂದು ಅಧಿಕಾರಿಗಳ ಮುಂದೆ ತಿಳಿಸಿದ್ದಾಳೆ. ಕೊನೆಗೆ ಎರಡೂ ಕಡೆಯವರನ್ನು ದೂರುಗಳನ್ನು ಆಲಿಸಿದ ನಂತರ ಅಧಿಕಾರಿಗಳು ಎರಡು ಕಡೆಯವರಿಗೆ ಸಮಾಧಾನ ಹೇಳಿ, ಈ ಬಗ್ಗೆ ಮತ್ತೆ ಪರಿಶೀಲಿಸುವುದಾಗಿ ತಿಳಿಸಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net