ಪರಭಾಷೆಗೆ ಹೊರಟ ಮತ್ತೊಬ್ಬ ಕನ್ನಡದ ಹುಡುಗಿ ! ಕಾಲಿವುಡ್​ನಲ್ಲಿ ಮಿಂಚಲು ರೆಡಿಯಾದ ರಾಬರ್ಟ್​ ನಟಿ ಶುಭ ರಕ್ಷಾ

Shu (2)
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಹಾಸನ ಮೂಲದ ಹುಡುಗಿ ಶುಭಾ ರಕ್ಷಾ, ಮಾಡೆಲಿಂಗ್ ಲೋಕದಲ್ಲಿ ಮಿಂಚಿ ‘ಆ್ಯಪಲ್ ಕೇಕ್’ ಚಿತ್ರದ ಮೂಲಕ 2018ರಲ್ಲಿ ಸಿನಿಮಾರಂಗಕ್ಕೆ ನಾಯಕಿಯಾಗಿ ಪದಾರ್ಪಣೆ ಮಾಡಿದರು. ಬಳಿಕ ‘ಮೂಕವಿಸ್ಮಿತ’, ‘ಹೋಮ್ ಮಿನಿಸ್ಟರ್’, ‘ಮತ್ತೆ ಉದ್ಭವ’, ‘ರಾಬರ್ಟ್’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

ಕ್ರಮೇಣ ತಮಿಳು ಕಿರುತೆರೆಗೆ ಆಯ್ಕೆಯಾದ ಅವರು, ಕಾರ್ತಿಕ್ ನಿರ್ದೇಶಿಸುತ್ತಿರುವ ‘ಕಾರ್ತಿಕೈ ದೀಪಂ’ ಧಾರಾವಾಹಿಯಲ್ಲಿ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಧಾರಾವಾಹಿಯ ಮೂಲಕ ಮನೆ ಮಾತಾದ ಅವರು ಇದೀಗ ತಮಿಳು ಚಿತ್ರವೊಂದಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರಂತೆ.

‘ದಿನಕರನ್ ಅವರು ಈ ಸಿನಿಮಾ ನಿರ್ದೇಶಿಸಲಿದ್ದು, ಮಾಡೆಕ್ಸ್ ಎಂಟರ್‌ಟೇನ್ಮೆಂಟ್ ಬ್ಯಾನರ್‌ನಲ್ಲಿ ನಿರ್ಮಾಣವಾಗಲಿದೆ. ಇನ್ನಷ್ಟೇ ಚಿತ್ರದ ಶೀರ್ಷಿಕೆ ಘೋಷಣೆಯಾಗಬೇಕಿದ್ದು, ಅದರ ಬೆನ್ನಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ. ಜತೆಗೆ ಕನ್ನಡದಲ್ಲೂ ಒಂದು ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಬಹುತೇಕ ಶೂಟಿಂಗ್ ಪೂರ್ಣಗೊಂಡಿದ್ದು, ಕ್ಲೈಮ್ಯಾಕ್ಸ್ ಮಾತ್ರ ಬಾಕಿ ಉಳಿದಿದೆ. ಜತೆಗೆ ಇನ್ನೂ ಎರಡು ಸಿನಿಮಾಗಳ ಮಾತುಕತೆ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಅನೌನ್ಸ್ ಆಗಲಿವೆ’ ಎಂದು ಹೇಳಿಕೊಳ್ಳುತ್ತಾರೆ ಶುಭಾ ರಕ್ಷಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net