More

  2ಡಿ, 3ಡಿ ಅಲ್ಲ ಇದು 5ಡಿ! ಎಸ್ಸ್​​. ನಾರಾಯಣ್​ 50ನೇ ಹಾಗೂ ನಟ ಆದಿತ್ಯ 25ನೇ ಸಿನಿಮಾ

  ವಿಜಯವಾಣಿ ಸುದ್ದಿಜಾಲ ಬೆಂಗಳೂರು

  ‘ಸೂರ್ಯವಂಶ’, ‘ಚೆಲುವಿನ ಚಿತ್ತಾರ’ ಸೇರಿ ಹಲವು ಸಿನಿಮಾಗಳಿಗೆ ಆೃಕ್ಷನ್-ಕಟ್ ಹೇಳಿರುವ ನಿರ್ದೇಶಕ ಎಸ್. ನಾರಾಯಣ್ ಐದು ವರ್ಷಗಳ ಬಳಿಕ ‘5ಡಿ’ ನಿರ್ದೇಶಕರ ಕುರ್ಚಿಯಲ್ಲಿ ಕುಳಿತಿದ್ದಾರೆ. ಇದು ಎಸ್. ನಾರಾಯಣ್ ನಿರ್ದೇಶಿಸುತ್ತಿರುವ 50ನೇ ಸಿನಿಮಾ ಎಂಬುದು ವಿಶೇಷ. ಮತ್ತೊಂದು ವಿಶೇಷವೆಂದರೆ ಚಿತ್ರಕ್ಕೆ ಆದಿತ್ಯಾ ನಾಯಕನಾಗಿದ್ದು ಇದು ಅವರ 25ನೇ ಸಿನಿಮಾ. ಇತ್ತೀಚೆಗಷ್ಟೆ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದ್ದು, ವೈದ್ಯಕೀಯ ಪ್ರಪಂಚದಲ್ಲಿ ನಡೆಯುವ ಬ್ಲಡ್ ಮಾಫಿಯಾ ಸುತ್ತ ಸುತ್ತುವ ಸಸ್ಪೆನ್ಸ್ ಕಥಾಹಂದರದ ಚಿತ್ರವಿದು.

  ಇದನ್ನೂ ಓದಿ : ದಾಖಲೆ ನಿರ್ಮಿಸಿದ ಕಿಂಗ್ ಖಾನ್! 2023ರಲ್ಲಿ ‘ಪಠಾಣ್’, ‘ಜವಾನ್’, ‘ಡಂಕಿ’ ವೀಕ್ಷಿಸಿದ್ದು ಎಷ್ಟು ಕೋಟಿ ಜನ ಗೊತ್ತೇ? ಇಲ್ಲಿದೆ ವಿವರ

  2ಡಿ, 3ಡಿ ಅಲ್ಲ ಇದು 5ಡಿ! ಎಸ್ಸ್​​. ನಾರಾಯಣ್​ 50ನೇ ಹಾಗೂ ನಟ ಆದಿತ್ಯ 25ನೇ ಸಿನಿಮಾ

  ಎಸ್. ನಾರಾಯಣ್, ‘ನನ್ನ ಮೊದಲ ಸಿನಿಮಾ ೆಬ್ರವರಿಯಲ್ಲೇ ರಿಲೀಸ್ ಆಗಿತ್ತು. ಆಶ್ಚರ್ಯ ಹುಟ್ಟಿಸುವ ಕಥಾವಸ್ತು ಈ ಸಿನಿಮಾದಲ್ಲಿದೆ. ಡೈಲಾಗ್ ಇಲ್ಲದೆಯೇ ನಟಿಸಿ ಪ್ರೇಕ್ಷಕರನ್ನು ಗೆಲ್ಲುವುದು ಕಷ್ಟ. ಆದರೆ, ಆದಿತ್ಯ ಆ ಪ್ರಯತ್ನ ಮಾಡಿದ್ದಾರೆ’ ಎಂದು ಮಾಹಿತಿ ಹಂಚಿಕೊಂಡರು. ಆದಿತ್ಯ ‘ಈ ಚಿತ್ರದಲ್ಲಿ ಯಾರೂ ಊಹೆ ಮಾಡದ ಕ್ಲೈಮ್ಯಾಕ್ಸ್ ಇದೆ, ಅದು ನನ್ನ ಫೇವರಿಟ್. ಒಬ್ಬ ಬೋರ್‌ವೆಲ್ ಕಂಟ್ರ್ಯಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದು ಹೇಳಿಕೊಂಡರು.

  ಇದನ್ನೂ ಓದಿ : ‘ಪುಷ್ಪ 2’ ರಿಲೀಸ್​ ಡೇಟ್​ನಲ್ಲಿ ಬದಲಾವಣೆ? ಈ ಬಗ್ಗೆ ನಿರ್ದೇಶಕರು ಕೊಟ್ರು ಅಧಿಕೃತ ಮಾಹಿತಿ!

  2ಡಿ, 3ಡಿ ಅಲ್ಲ ಇದು 5ಡಿ! ಎಸ್ಸ್​​. ನಾರಾಯಣ್​ 50ನೇ ಹಾಗೂ ನಟ ಆದಿತ್ಯ 25ನೇ ಸಿನಿಮಾ

  ಮುಖ್ಯ ಪಾತ್ರವೊಂದರಲ್ಲಿ ಅಭಿನಯಿಸುತ್ತಿರುವ ಯೋಗಿ, ‘ನಾರಾಯಣ್ ಸರ್ ಮೊದಲು ಒಂದು ಸಣ್ಣ ಪಾತ್ರ ಇದೆ ಮಾಡುತ್ತೀರಾ? ಎಂದು ಕೇಳಿದ್ದರು. ನಾನು ಖುಷಿಯಿಂದ ಒಪ್ಪಿಕೊಂಡೆ. ಶೂಟಿಂಗ್‌ಗೆ ಹೋದಾಗ ನನ್ನನ್ನು ನೋಡಿ ಇನ್ನೊಂದು ಮುಖ್ಯ ಪಾತ್ರವಿದೆ ಎಂದು ಹೇಳಿ ಒಳ್ಳೆಯ ಅವಕಾಶ ನೀಡಿದ್ದಾರೆ. ಚಿತ್ರ ಅದ್ಭುತವಾಗಿ ಮೂಡಿಬಂದಿದೆ’ ಎಂದರು. ಇನ್ನು ಆದಿತ್ಯಾಗೆ ಜೋಡಿಯಾಗಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಕುಮಾರಗೌಡ ಅವರ ಛಾಯಾಗ್ರಹಣ, ಶಿವಪ್ರಸಾದ್ ಸಂಕಲನವಿರಲಿದೆ. ಅಂದಹಾಗೆ, ‘5ಡಿ’ ಫೆ. 9ಕ್ಕೆ ರಿಲೀಸ್ ಆಗಲಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts