More

    ದೀಪಾವಳಿ ಹಬ್ಬದಂದು ‘ಬ್ಯಾಡ್​ ಮ್ಯಾನರ್ಸ್​’ ಸರಪಟಾಕಿ ! ಢಂ ಢಂ ಸೌಂಡ್​ ನಡುವೆ ಅಭಿ​ ಡಿಶುಂ ಡಿಶುಂ ಫೈಟ್​

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾ ‘ಬ್ಯಾಡ್ ಮ್ಯಾನರ್ಸ್‌’. ಅಭಿಷೇಕ್ ಅಂಬರೀಷ್, ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ, ನೈಜ ಘಟನೆಗಳಿಂದ ಸ್ಫೂರ್ತಿ ಪಡೆದಿರುವ ಚಿತ್ರವಿದು. ಇತ್ತೀಚೆಗಷ್ಟೆ ದೀಪಾವಳಿ ಹಬ್ಬದ ಶುಭಸಂದರ್ಭದಲ್ಲಿ ಚಿತ್ರದ ಟ್ರೇಲರ್ ರಿಲೀಸ್ ಮಾಡಲಾಯಿತು. ವಿನೋದ್ ಪ್ರಭಾಕರ್, ಧನ್ವೀರ್, ವಿಕ್ರಮ್ ರವಿಚಂದ್ರನ್, ರಾಕ್‌ಲೈನ್ ವೆಂಕಟೇಶ್ ಉಪಸ್ಥಿತರಿದ್ದು, ಚಿತ್ರತಂಡಕ್ಕೆ ಶುಭಕೋರಿದರು.

    ಇದನ್ನೂ ಓದಿ : ಅಲ್ಲು ಅರ್ಜುನ್.. ಅದನ್ನು ಮಾಡುವುದು ಸುಲಭವಲ್ಲ: ಪಾಯಲ್ ರಜಪೂತ್

    ದೀಪಾವಳಿ ಹಬ್ಬದಂದು 'ಬ್ಯಾಡ್​ ಮ್ಯಾನರ್ಸ್​' ಸರಪಟಾಕಿ ! ಢಂ ಢಂ ಸೌಂಡ್​ ನಡುವೆ ಅಭಿ​ ಡಿಶುಂ ಡಿಶುಂ ಫೈಟ್​

    ಚಿತ್ರದ ಟ್ರೇಲರ್ ರಿಲೀಸ್ ಮಾಡಿದ ನಟ ದರ್ಶನ್, ‘ಇಂದು ಸಮಾಜದಲ್ಲಿ ನಡೆಯುತ್ತಿರುವ ವಿಷಯಗಳನ್ನೇ ಚಿತ್ರದಲ್ಲಿ ತೋರಿಸಲಾಗಿದೆ. ಇದರ ಹೆಸರು ಮಾತ್ರ ‘ಬ್ಯಾಡ್ ಮ್ಯಾನರ್ಸ್‌’. ಆದರೆ, ಒಳ್ಳೆಯ ಮ್ಯಾನರ್ಸ್‌ ಇಂದ ಮಾಡಿರುವ ಸಿನಿಮಾ. ಜತೆಗೆ ಅಭಿಷೇಕ್ ಅಂಬರೀಷ್ ಮೊದಲನೇ ಸಿನಿಮಾದಿಂದ ಈ ಸಿನಿಮಾಗೆ ಬಹಳಷ್ಟು ಬದಲಾಗಿದ್ದಾರೆ. ನಿರ್ದೇಶಕ ಸೂರಿ, ‘ಅಭಿ ಈ ಸಿನಿಮಾದಲ್ಲಿ ವಿಭಿನ್ನ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದು, ಬೇರೆ ರೀತಿಯಲ್ಲೇ ರಂಜಿಸುತ್ತಾರೆ’ ಎಂದು ಹೇಳಿಕೊಂಡರು. ಇನ್ನು ನಾಯಕ ಅಭಿಷೇಕ್ ಅಂಬರೀಷ್, ‘ಚಿತ್ರದ ನಿರ್ಮಾಣದಲ್ಲಿ ಶ್ರಮ ಹಾಕಿದ ನಿರ್ದೇಶಕ ಹಾಗೂ ಇಡೀ ಚಿತ್ರತಂಡಕ್ಕೆ ಧನ್ಯವಾದ’ ಎಂದು ಹೇಳಿದರು.

    ಇದನ್ನೂ ಓದಿ : ‘ಬಾಂದ್ರಾ’ ಋಣಾತ್ಮಕ ವಿಮರ್ಶೆ; 7 ಯೂಟ್ಯೂಬರ್‌ಗಳ ವಿರುದ್ಧ ಕೇಸ್ ದಾಖಲಿಸಲು ಮುಂದಾದ ನಿರ್ಮಾಪಕ

    ದೀಪಾವಳಿ ಹಬ್ಬದಂದು 'ಬ್ಯಾಡ್​ ಮ್ಯಾನರ್ಸ್​' ಸರಪಟಾಕಿ ! ಢಂ ಢಂ ಸೌಂಡ್​ ನಡುವೆ ಅಭಿ​ ಡಿಶುಂ ಡಿಶುಂ ಫೈಟ್​

    ಅಭಿ, ರಚಿತಾ ಜತೆ ಚಿತ್ರದಲ್ಲಿ ತಾರಾ ಅನುರಾಧ, ದತ್ತಣ್ಣ, ಶರತ್ ಲೋಹಿತಾಶ್ವ, ಕುರಿ ಪ್ರತಾಪ್, ಮಿತ್ರ, ಮೋಹನ್ ಜುನೇಜ ಪ್ರಮುಖ ತಾರಾಗಣದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಮಾಸ್ತಿ ಸಂಭಾಷಣೆ, ರವಿವರ್ಮ ಸಾಹಸ ಸಂಯೋಜನೆ, ದೀಪು ಎಸ್. ಕುಮಾರ್ ಸಂಕಲನವಿರಲಿದೆ. ಅಂದಹಾಗೆ, ಇದೇ ತಿಂಗಳ 24ಕ್ಕೆ ಚಿತ್ರ ತೆರೆಗೆ ಬರಲು ಸಿನಿಮಾ ರೆಡಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts