ಅಯ್ಯೋ ಹೆದರಿಸಲು ಬರುತ್ತಿದ್ದಾರೆ ದಿವ್ಯಾ..! ಮಲಯಾಳಂ ನಟಿಯ ಹಾರರ್​ ವೆಬ್​ಸರಣಿ ಯಾವುದು ಗೊತ್ತಾ?

Divya Pillai (2)
Published on

‘ಸೇಫ್​’, ‘ಕಲಾ’, ‘ಶಫೀಕಿಂಟೆ ಸಂತೋಷಮ್’, ತೆಲುಗಿನ ‘ತಗ್ಗೆದೆಲೆ’ ಸೇರಿ 15ಕ್ಕೂ ಅಧಿಕ ಸಿನಿಮಾಗಳಲ್ಲಿ ಮಿಂಚಿರುವ ಖ್ಯಾತಿ ಮಲಯಾಳಂ ನಟಿ ದಿವ್ಯಾ ಪಿಳ್ಳೈಗೆ ಸಲ್ಲುತ್ತದೆ. ಇದಲ್ಲದೇ ಕಿರುತೆರೆ ರಿಯಾಲಿಟಿ ಶೋಗಳು, ವೆಬ್‌ಸರಣಿಗಳಲ್ಲೂ ದಿವ್ಯಾ ಮಿಂಚಿದ್ದಾರೆ. ಈಗಾಗಲೇ ‘ಮಾಸ್ಟರ್‌ಪೀಸ್’ ಎಂಬ ವೆಬ್‌ಸರಣಿ ಬಿಡುಗಡೆಯಾಗಿದ್ದು, ಅದರ ಬೆನ್ನಲ್ಲೇ ಮತ್ತೊಂದು ಸರಣಿ ರಿಲೀಸ್‌ಗೆ ರೆಡಿಯಾಗಿದೆ.

ಹೆಸರು ‘ದಿ ವಿಲೇಜ್’. ಮಿಲಿಂದ್ ರಾವ್ ಆ್ಯಕ್ಷನ್-ಕಟ್ ಹೇಳಿರುವ ಈ ತಮಿಳು ವೆಬ್‌ಸರಣಿ ಮೂಲಕ ಕಾಲಿವುಡ್ ಸ್ಟಾರ್ ನಟ ಆರ್ಯ ಒಟಿಟಿಗೆ ಎಂಟ್ರಿ ಕೊಡುತ್ತಿರುವುದು ವಿಶೇಷ. ಅವರಿಗೆ ನಾಯಕಿಯಾಗಿ ದಿವ್ಯಾ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗಷ್ಟೆ ಈ ಹಾರರ್ ಥ್ರಿಲ್ಲರ್ ಸರಣಿಯ ಟೀಸರ್ ಬಿಡುಗಡೆಯಾಗಿದ್ದು, ಕುತೂಹಲ ಮೂಡಿಸುವಂತಿದೆ.

ಮೂವರು ಗೆಳೆಯರು ತಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಲು ದುಷ್ಟ ಶಕ್ತಿಗಳ ವಿರುದ್ಧ ಹೇಗೆಲ್ಲ ಹೋರಾಡುತ್ತಾರೆ ಎಂಬುದೇ ‘ದಿ ವಿಲೇಜ್’ ಕಥೆ ಎನ್ನಲಾಗಿದೆ. ಆರ್ಯ, ದಿವ್ಯ ಜತೆ ಆಲಿಯಾ, ನರೇನ್, ಜಾರ್ಜ್ ಮರಿಯನ್, ಪೂಜಾ ರಾಮಚಂದ್ರನ್, ಮುತ್ತುಕುಮಾರ್, ಜಾನ್ ಕೊಕ್ಕೇನ್ ಪ್ರಮುಖ ತಾರಾಗಣದಲ್ಲಿದ್ದಾರೆ. ‘ದಿ ವಿಲೇಜ್’ ಇದೇ ತಿಂಗಳ 24ರಂದು ಅಮೇಜಾನ್ ಪ್ರೈಮ್‌ನಲ್ಲಿ ರಿಲೀಸ್ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net