ಬೆಳ್ಳಾರಿ: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಸಹಚರರು ಜೈಲು ಸೇರಿದ್ದು, ಪೊಲೀಸರು ತನಿಖೆ ಪೂರ್ತಿಗೊಳಿಸಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. ಸದ್ಯದ ಬೆಳವಣಿಗೆ ಗಮನಿಸಿದರೆ ದರ್ಶನ್ ಮತ್ತು ಸಹಚರರಿಗೆ ಬೇಲ್ ಸಿಗೋದು ಡೌಟ್ ಎಂದು ಹೇಳಲಾಗಿದ್ದು, ದಾಸನಿಗೆ ಮುಂದಿನ ಕೆಲ ವರ್ಷಗಳ ಕಾಲ ಜೈಲೂಟ ಫಿಕ್ಸ್ ಎಂದು ಹೇಳಲಾಗಿದೆ.
ಇತ್ತ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ಪ್ರಸಾರ ಮಾಡದಂತೆ ಮತ್ತು ಮುದ್ರಿಸದಂತೆ ಕರ್ನಾಟಕ ಹೈಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಕರೆ ಮಾಡಿ ಮಾತನಾಡಿದ್ದು, ಸೆಕ್ಯುರಿಟಿ ಸೆಲ್‌ನಲ್ಲೇ ಪತ್ನಿಯೊಂದಿಗೆ ಮಾತುಕತೆ ನಡೆಸಿದ್ದಾರೆ. ದರ್ಶನ್ ಸೇರಿದಂತೆ ನಾಲ್ವರು ಖೈದಿಗಳಿಗೆ ಈ ವ್ಯವಸ್ಥೆ ಮಾಡಲಾಗಿದ್ದು, ಭದ್ರತೆ ದೃಷ್ಟಿಯಿಂದ ಹೈ ಸೆಕ್ಯುರಿಟಿ ಕಾಲ್ ವ್ಯವಸ್ಥೆ ಮಾಡಲಾಗಿದೆ.
ಪ್ರಿಸನ್ ಕಾಲ್ ಸಿಸ್ಟಮ್ನಲ್ಲಿ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರ ನಂಬರ್ಅನ್ನು ಸೇವ್ ಮಾಡಲಾಗಿದ್ದು, ಐದು ನಿಮಿಷಗಳ ಕಾಲ ಪತ್ನಿಯೊಂದಿಗೆ ದರ್ಶನ್ ಮಾತುಕತೆ ನಡೆಸಿದ್ದಾರೆ. ಇಂದಿನ ಬೆಳವಣಿಗೆ ಸೇರಿದಂತೆ ಹಲವು ವಿಚಾರಗಳ ಕುರಿತು ಸಿಕ್ಕ ಸಮಯದಲ್ಲಿ ದರ್ಶನ್ ಮಾತನಾಡಿದ್ದು, ಪತ್ನಿ ಜೊತೆ ಮಾತನಾಡುವಾಗ ಭಾವುಕರಾಗಿದ್ದಾರೆ.
ಇದನ್ನೂ ಓದಿ: ನಾವು ಭಾರತದ ಈ ಕ್ರೀಡಾಂಗಣಕ್ಕೆ ಇನ್ನೆಂದಿಗೂ ಬರುವುದಿಲ್ಲ; ಬಿಸಿಸಿಐ ವಿರುದ್ಧ ಅಫ್ಘನ್ ಕ್ರಿಕೆಟ್ ಮಂಡಳಿ ಕಿಡಿ
ಮಾತನಾಡುವ ವೇಳೆ ನಾಳೆಯೇ ಜೈಲಿಗೆ ಬರುವಂತೆ ಪತ್ನಿಗೆ ತಿಳಿಸಿದ ದರ್ಶನ್ ಜೊತೆಗೆ ತಾಯಿ ಮೀನಾರನ್ನು ಕರೆದುಕೊಂಡು ಬರುವಂತೆ ಹೇಳಿರುವ ದರ್ಶನ್. ಈ ಬಗ್ಗೆ ಕುಟುಂಬಸ್ಥರು ಮಾಹಿತಿ ಅಧಿಕಾರಿಗಳಿಗೆ ನೀಡಿದ್ದು ನಾಳೆ (ಸೆಪ್ಟೆಂಬರ್ 10) ಸಂಜೆ 4 ಗಂಟೆ ಸುಮಾರಿಗೆ ಜೈಲಿಗೆ ಭೇಟಿ ನೀಡುವುದಾಗಿ ಹೇಳಿರುವ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ದರ್ಶನ್ ಹಾಗೂ ವಿಜಯಲಕ್ಷ್ಮಿ ನಡುವಿನ ಸಂಭಾಷಣೆಯನ್ನು ನಿಯಮದ ಪ್ರಕಾರ ಜೈಲಧಿಕಾರಿಗಳು ರೆಕಾರ್ಡ್ ಮಾಡಿದ್ದು, ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಜೈಲಿನಲ್ಲಿ ರಾಜಾತಿಥ್ಯ ಪಡೆದ ಆರೋಪದ ಮೇಲೆ ನಟ ದರ್ಶನ್ರನ್ನು ಪರಪ್ಪನ ಅಗ್ರಹಾರದಿಂದ ಬಳ್ಳಾರಿಗೆ ಸ್ಥಳಾಂತರಿಸಲಾಗಿದ್ದು, ಉಳಿದ ಆರೋಪಿಗಳನ್ನು ತುಮಕೂರು, ಶಿವಮೊಗ್ಗ, ಮೈಸೂರು, ವಿಜಯಪುರ, ಧಾರವಾಡ ಹಾಗೂ ಬೆಳಗಾವಿಗೆ ಸ್ಥಳಾಂತರಿಸಲಾಗಿದೆ.