

Actor Darshan: ಚಿತ್ರದುರ್ಗದ ರೇಣುಕಸ್ವಾಮಿ ಬರ್ಬರ ಹತ್ಯೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದಿರುವ ಎ2 ಆರೋಪಿ ದರ್ಶನ್ ಮತ್ತು ಎ1 ಆರೋಪಿ ಪವಿತ್ರಾ ಗೌಡ ಸೇರಿದಂತೆ ಒಟ್ಟು 7 ಆರೋಪಿಗಳ ಜಾಮೀನು ಭವಿಷ್ಯ ಇಂದು ಸುಪ್ರೀಂ ಅಂಗಳದಲ್ಲಿ ನಿರ್ಧಾರವಾಗಲಿದೆ.
ಆರೋಪಿಗಳಿಗೆ ಹೈಕೋರ್ಟ್ ನೀಡಿರುವ ಷರತ್ತುಬದ್ಧ ಜಾಮೀನು ರದ್ದುಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ರಾಜ್ಯ ಸರ್ಕಾರ ಪರ ವಕೀಲರು, ದರ್ಶನ್ ಮತ್ತು 7 ಆರೋಪಿಗಳ ಜಾಮೀನನ್ನು ರದ್ದು ಮಾಡುವಂತೆ ನ್ಯಾಯಾಲಯದಲ್ಲಿ ಪ್ರಬಲ ವಾದ ಮಂಡಿಸಿದ್ದಾರೆ. ಈಗಾಗಲೇ ಎರಡು ಕಡೆಯಿಂದ ವಾದ-ಪ್ರತಿವಾದ ಆಲಿಸಿರುವ ಸುಪ್ರೀಂಕೋರ್ಟ್, ಪ್ರಕರಣದ ತೀರ್ಪುನ್ನು ಕಾಯ್ದಿರಿಸಿತ್ತು. ಇಂದು ಈ ಕೇಸ್ನ ಮಹತ್ವದ ತೀರ್ಪು ಹೊರಬೀಳಲಿದ್ದು, ಸದ್ಯ ಹಲವರ ಕುತೂಹಲಕ್ಕೆ ಕಾರಣವಾಗಿದೆ.
ಇನ್ನು ನ್ಯಾಯದ ಭರವಸೆಯಲ್ಲಿರುವ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ, ಸುಪ್ರೀಂಕೋರ್ಟ್ ತೀರ್ಪಿಗೂ ಮುನ್ನವೇ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ, 'ಸತ್ಯ ಎಲ್ಲಕ್ಕಿಂತ ದೊಡ್ಡದು. ನ್ಯಾಯ ಸಿಕ್ಕೇ ಸಿಗುತ್ತದೆ' ಎಂದು ಭರವಸೆಯಲ್ಲಿ ಬರೆದುಕೊಂಡಿದ್ದಾರೆ. ಒಟ್ಟಾರೆ, ದರ್ಶನ್ ಮತ್ತು ಗ್ಯಾಂಗ್ನ ಜಾಮೀನು ಭವಿಷ್ಯ ಏನಾಗಲಿದೆ? ಎಂಬುದು ಇಂದಿನ 'ಸುಪ್ರೀಂ' ತೀರ್ಪಿನಲ್ಲಿ ಅಡಗಿದೆ.