ಮಾಕ್​ಟೇಲ್​ ಕೃಷ್ಣ- ಮಿಲನಾ ನಾಗರಾಜ್​ ಕಲ್ಯಾಣ ಯಾವಾಗ ಗೊತ್ತಾ?

cvbvh
Published on

ಈ ವರ್ಷದ ಸೂಪರ್​ ಹಿಟ್​ ಚಿತ್ರಗಳ ಪೈಕಿ ಮದರಂಗಿ ಕೃಷ್ಣ ಅಭಿನಯದ - ನಿರ್ದೇಶನದ ಲವ್​ ಮಾಕ್​ಟೇಲ್​ ಚಿತ್ರ ಸಹ ಒಂದು. ಈ ಚಿತ್ರ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿತ್ತು. ಆದರೆ, ಲಾಕ್​ಡೌನ್​ನಿಂದಾಗಿ ಹೆಚ್ಚು ದಿನ ಪ್ರದರ್ಶನ ಕಾಣುವುದಕ್ಕೆ ಸಾಧ್ಯವಾಗಿರಲಿಲ್ಲ. ಆ ನಂತರ ಅಮೆಜಾನ್ ಪ್ರೈಮ್​ನಲ್ಲಿ ಚಿತ್ರ ಬಿಡುಗಡೆಯಾಗಿ, ಇನ್ನೂ ಹೆಚ್ಚು ಜನಪ್ರಿಯತೆ ಪಡೆಯಿತು. ಈ ಸಿನಿಮಾದಲ್ಲಿ ನಾಯಕ ನಾಯಕಿಯಾಗಿ ಕಾಣಿಸಿಕೊಂಡಿದ್ದ ಕೃಷ್ಣ ಮತ್ತು ಮಿಲನಾ ನಿಜಜೀವನದಲ್ಲೂ ಒಂದಾಗುವುದಾಗಿ ಹೇಳಿಕೊಂಡಿದ್ದರು. ಇದೀಗ ಮದುವೆ ಬಗ್ಗೆ ಮಾತನಾಡಿದ್ದಾರೆ ಕೃಷ್ಣ.

ಸ್ವಾತಂತ್ರ್ಯ ದಿನದ ಪ್ರಯುಕ್ತ ಲವ್​ ಮಾಕ್​ಟೇಲ್​ 2 ಚಿತ್ರದ ಫಸ್ಟ್ ಲುಕ್​ ರಿಲೀಸ್ ಮಾಡಿಕೊಂಡಿರುವ ಡಾರ್ಲಿಂಗ್​ ಕೃಷ್ಣ, ಇನ್ನೇನು ಶೀಘ್ರದಲ್ಲಿ ಶೂಟಿಂಗ್​ ಶುರು ಮಾಡುವುದಾಗಿಯೂ ಹೇಳಿಕೊಂಡಿದ್ದಾರೆ. ಮಾಕ್​ಟೇಲ್​ 2 ಶೂಟಿಂಗ್​ ಮುಗಿಯುತ್ತಿದ್ದಂತೆ ಮದುವೆ ಮಾಡಿಕೊಳ್ಳುವ ಪ್ಲಾನ್​ ಕೃಷ್ಣ ಮತ್ತು ಮಿಲನಾ ಅವರದ್ದಾಗಿದೆ. ಎಲ್ಲ ಅಂದುಕೊಂಡಂತೆ ಆದರೆ, ಡಿಸೆಂಬರ್​ನಲ್ಲಿ ಮದುವೆ ಮಾಡಿಕೊಳ್ಳುವ ಯೋಜನೆ ಇದೆಯಾದರೂ, ಕರೊನಾ ಪ್ಯಾಂಡಮಿಕ್​ ಹಿನ್ನೆಲೆಯಲ್ಲಿ ಮುಂದಿನ ವರ್ಷವೇ ವಿವಾಹ ನೆರವೇರಿಸಿಕೊಳ್ಳಲಿದ್ದಾರೆ.

‘ಪ್ಲಾನ್​ ಪ್ರಕಾರ ಆಗಿದ್ದರೆ ಇಷ್ಟೊತ್ತಿಗಾಗಲೇ ಮದುವೆಯೇ ಆಗಿರಬೇಕಿತ್ತು. ಆದರೆ, ಕರೊನಾ ಹಿನ್ನೆಲೆಯಲ್ಲಿ ಮುಂದೂಡಲಾಯಿತು. ಸದ್ಯಕ್ಕೆ ಲವ್​ ಮಾಕ್​ಟೇಲ್​  ಸೀಕ್ವೆಲ್​ ಶುರುವಾಗಿರುವುದರಿಂದ ಆ ಸಿನಿಮಾ ಮುಗಿದ ಬಳಿಕ ಮದುವೆ ಬಗ್ಗೆ ವಿಚಾರ ಮಾಡಲಿದ್ದೇವೆ. ಇಬ್ಬರ ಕುಟುಂಬ ದೊಡ್ಡದೇ ಇರುವುದರಿಂದ ಅದ್ಧೂರಿಯಾಗಿಯೇ ಮದುವೆ ಮಾಡಿಕೊಳ್ಳಬೇಕು. ಅದಕ್ಕೆ ಸಮಯವೈ ಬೇಕು’ ಎಂದಿದ್ದಾರೆ.

ಸದ್ಯ ಸೀಕ್ವೆಲ್​ನ ಬಹುತೇಕ ಪ್ರಿ ಪ್ರೊಡಕ್ಷನ್​ ಕೆಲಸಗಳು ಮುಗಿದಿದ್ದು, ಈಗಾಗಲೇ ಒಂದಷ್ಟು ಸಣ್ಣ ಪುಟ್ಟ ಭಾಗದ ದೃಶ್ಯಾವಳಿಗಳನ್ನು ಚಿತ್ರೀಕರಿಸಿಕೊಂಡಿದ್ದಾರಂತೆ. ಲವ್​ ಮಾಕ್ಟೇಲ್​ ಎಲ್ಲಿಗೆ ನಿಂತಿತ್ತೋ, ಅದನ್ನು ಅಲ್ಲಿಂದಲೇ ಮುಂದುವರೆಸುವ ಇಂಗಿತ ವ್ಯಕ್ತಪಡಿಸಿದ್ದ ಕೃಷ್ಣ, ಕಥೆ-ಚಿತ್ರಕಥೆ ಬರೆದು ಮುಗಿಸಿದ್ದಾರೆ. ಕರೊನಾ ಹಾವಳಿ ಕಡಿಮೆ ಆಗುತ್ತಿದ್ದಂತೆ ಶೂಟಿಂಗ್​ಗೆ ತೆರಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಪಾತ್ರವರ್ಗದಲ್ಲಿ ಹೊಸದಾಗಿ ಯಾರೆಲ್ಲ ಸೇರ್ಪಡೆಗೊಳ್ಳಲಿದ್ದಾರೆ? ಎಂಬ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಬಹಿರಂಗ ಪಡಿಸಲಿದೆ ತಂಡ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net