ಆದಿಪುರುಷನಾಗಿ ಪ್ರಭಾಸ್​; ಕನ್ನಡದಲ್ಲೂ ಬರಲಿದೆ ಈ 3ಡಿ ಸಿನಿಮಾ!

collage (16)
Published on

ಈಗಾಗಲೇ ರಾಧೆ ಶ್ಯಾಮ್​ ಸೇರಿ ದೀಪಿಕಾ ಪಡುಕೋಣೆ ಜತೆಗೆ ಸಿನಿಮಾ ಮಾಡುವ ಬಗ್ಗಿ ಅಧಿಕೃತವಾಗಿ ಹೇಳಿಕೊಂಡಿರುವ ಪ್ರಭಾಸ್​, ಸದ್ದಿಲ್ಲದೆ ಮತ್ತೊಂದು ಸಿನಿಮಾ ಘೋಷಣೆ ಮಾಡಿದ್ದಾರೆ. ಅಷ್ಟೇ ಅಲ್ಲ ಚಿತ್ರದ ಶೀರ್ಷಿಕೆಯನ್ನೂ ರಿವೀಲ್​ ಮಾಡಿದ್ದಾರೆ. ಚಿತ್ರದ ಹೆಸರು ‘ಆದಿಪುರುಷ್​’

ಬಾಲಿವುಡ್ ಚಿತ್ರ ನಿರ್ಮಾಪಕ ಭೂಷಣ್ ಕುಮಾರ್ ಅವರ ಟಿ ಸಿರೀಸ್​ ಬ್ಯಾನರ್ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದು, ತಾನಾಜಿ; ದಿ ಅನ್​ಸಂಗ್​ ವಾರಿಯರ್​ ಚಿತ್ರ ನಿರ್ದೇಶನ ಮಾಡಿದ್ದ ಓಂ ರಾವತ್, ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್​ ಹೇಳಲಿದ್ದಾರೆ.

ಸೋಮವಾರ ರಾತ್ರಿ ವಿಶೇಷ ಘೋಷಣೆ ಇದೆ ಎಂದು ಹಿಂಟ್ ಕೊಟ್ಟಿದ್ದ ನಟ ಪ್ರಭಾಸ್​ ಮತ್ತು ಚಿತ್ರತಂಡ, ಮಂಗಳವಾರ ಬೆಳಗ್ಗೆ 7.11ಕ್ಕೆ ಆದಿಪುರುಷ್ ಚಿತ್ರ ಕೈಗೆತ್ತಿಕೊಂಡ ಬಗ್ಗೆ ಹೇಳಿಕೊಂಡಿದೆ.

ಹಿಂದಿ ಮತ್ತು ತೆಲುಗಿನಲ್ಲಿ 3ಡಿಯಲ್ಲಿ ಮೂಡಿಬರಲಿರುವ ಈ ಚಿತ್ರ ಕನ್ನಡ, ತಮಿಳು, ಮಲಯಾಳಂ ಸೇರಿ ಹಲವು ವಿದೇಶಿ ಭಾಷೆಗೂ ಈ ಚಿತ್ರ ಡಬ್​ ಆಗಲಿದೆ. 2021ಕ್ಕೆ ಸೆಟ್ಟೇರಲಿರುವ ಈ ಚಿತ್ರ 2022ಕ್ಕೆ ಬಿಡುಗಡೆ ಮಾಡಿಕೊಳ್ಳಲು ಪ್ಲಾನ್​ ಮಾಡಿಕೊಂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net