ಸುಶಾಂತ್​ ಸಾವಿನ ಬಳಿಕ ಅಪಾರ್ಟ್​​ಮೆಂಟ್​ನಲ್ಲಿ ಕಾಣಿಸಿದ ಆ ಅಪರಿಚಿತ ಯುವತಿ ಯಾರು? ಸಿಸಿಟಿವಿ ದೃಶ್ಯಾವಳಿ ವೈರಲ್​

Sush
Published on

ಸುಶಾಂತ್​ ಸಿಂಗ್​ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇದಿನೆ ಹೊಸ ಹೊಸ ಬೆಳವಣಿಗೆಗಳು ಎದುರಾಗುತ್ತಿದೆ. ಇದೀಗ ಸುಶಾಂತ್​ ಸಾವಿನ ದಿನವೇ ಅಪರಿಚಿತ ಯುವತಿಯೊಬ್ಬರ ಸಿಸಿಟಿವಿ ವಿಡಿಯೋ ಬಹಿರಂಗವಾಗಿದೆ.

ಜೂ. 14ರ ಸುಶಾಂತ್​ ಆತ್ಮಹತ್ಯೆ ಮಾಡಿಕೊಂಡ ದಿನ, ಆ್ಯಂಬುಲೆನ್ಸ್ ಮೂಲಕ ಶವವನ್ನು ಸಾಗಿಸುವ ವೇಳೆ ಸಿಸಿಟಿವಿಯಲ್ಲಿ ಯುವತಿಯ ದೃಶ್ಯಗಳು ಸೆರೆಯಾಗಿದ್ದು, ಆ ಯುವತಿ ಯಾರೆಂಬುದನ್ನು ಪತ್ತೆ ಹಚ್ಚುವ ಕಾರ್ಯ ಸಹ ನಡೆದಿದೆ. ಆದರೆ, ಇಲ್ಲಿಯವರೆಗೂ ಆ ಯುವತಿಯ ಬಗ್ಗೆ ವಿಚಾರಣೆ ನಡೆಸದಿರುವುದು ಪೊಲೀಸ್​ ಇಲಾಖೆಯ ನಿರ್ಲಕ್ಷ್ಯ ಧೋರಣೆ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್​ ಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ.

ಈಗಾಗಲೇ ಆ ಮಹಿಳೆ ರಿಯಾ ಚಕ್ರವರ್ತಿ ಸಹೋದರನ ಪ್ರೇಯಸಿ ಎಂಬ ಮಾತುಗಳು ಕೇಳಿಬಂದಿದ್ದು, ಪೊಲೀಸ್​ ಇಲಾಖೆಯ ಈ ನಿರ್ಲಕ್ಷ್ಯಕ್ಕೆ ಎಲ್ಲೆಡೆ ಖಂಡನೆ ವ್ಯಕ್ತವಾಗುತ್ತಿದೆ. ‘62 ದಿನಗಳಾದರೂ ಮುಂಬೈ ಪೊಲೀಸ್ ಇಲಾಖೆ ಮಾತ್ರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾದ ಆ ಇಬ್ಬರು ವ್ಯಕ್ತಿಗಳು ಯಾರು ಎಂಬುದನ್ನು ಇನ್ನೂ ಪತ್ತೆ ಮಾಡಿಲ್ಲ’ ಎಂದಿದ್ದಾರೆ.

ಸದ್ಯ ಆ ಅನುಮಾನಾಸ್ಪದ ಯುವತಿಯ ಹೆಸರು ಜಮೀಲಾ ಎಂದು ಹೇಳಲಾಗುತ್ತಿದ್ದು, ರಿಯಾ ಸಹೋದರ ಶೌವಿಕ್​ ಅವರ ಸ್ನೇಹಿತೆ. ಸುಶಾಂತ್​ ಸಾವನ್ನಪ್ಪಿದ ದಿನವೇ, ಆತನ ಮೃತದೇಹವನ್ನು ಸಾಗಿಸುವಾಗಲೇ ಅಪಾರ್ಟ್​ಮೆಂಟ್​ ಬಳಿ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದ್ದಾರೆ. ಅಷ್ಟೇ ಅಲ್ಲ ಸುಶಾಂತ್​ ಜತೆಗೂ ಅವರು ಕಾಣಿಸಿಕೊಂಡಿರುವ ಫೋಟೋ ಸಹ ವೈರಲ್​ ಆಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net