ಈ ರಾಶಿಯವರ ಮನೋಭಿಲಾಷೆಗಳೆಲ್ಲ ಸಫಲತೆ ಪಡೆಯಲಿವೆ: ನಿತ್ಯ ಭವಿಷ್ಯ

Nitya-Bhavishya-vvani-1-2-1
Published on

ಮೇಷ: ಯಾವುದಾದರೂ ಅಡ್ಡದಾರಿಯಲ್ಲಿ ನಡೆಯಲು ಆಮಿಷಗಳು ಎದುರಾಗಬಹುದು. ಆದರೆ ಅದಕ್ಕೆ ಆಸೆಪಡದೆ ದೃಢವಾಗಿ ಮುನ್ನುಗ್ಗಿ. ಶುಭಸಂಖ್ಯೆ: 5

ವೃಷಭ: ಮನೆಯ ಕಿರಿಯ ಸದಸ್ಯರ ಜತೆಗೆ ವಾದಿಸುವ ಸಂದರ್ಭಗಳು ಬರಬಹುದು. ಅದನ್ನು ಬಿಟ್ಟು ನೇರವಾಗಿಯೇ ಮಾತನಾಡಿ. ಶುಭಸಂಖ್ಯೆ: 9

ಮಿಥುನ: ಖರ್ಚುಗಳನ್ನು ಕಠಿಣವಾಗಿ ನಿಯಂತ್ರಿಸಿ. ಅಂದುಕೊಂಡಿದ್ದಕ್ಕಿಂತ ಹೆಚ್ಚಿನದಾದ ಖರ್ಚು ಮಾಡಬೇಕಾಗಬಹುದು. ಶುಭಸಂಖ್ಯೆ: 7

ಕಟಕ: ಹಳೆಯ ನಷ್ಟದ ವಿಚಾರವನ್ನೇ ಹೆಚ್ಚು ಹೆಚ್ಚಾಗಿ ಯೋಚಿಸುತ್ತಿದ್ದೀರಿ. ಹೊಸ ದಿನವು ಹೊಸದೇ ಭರವಸೆಯನ್ನು ತುಂಬಲಿದೆ. ಶುಭಸಂಖ್ಯೆ: 4

ಸಿಂಹ: ನಿಮ್ಮ ಕೆಲವು ನಿಗೂಢ ವರ್ತನೆಗಳು ಸಂಶಯ ಹುಟ್ಟಿಸಬಹುದು. ಮಾಡುವಂತಹ ಕೆಲಸಗಳಲ್ಲಿ ಪಾರದರ್ಶಕತೆಯ ಸ್ಪಷ್ಟತೆ ಇರಲಿ. ಶುಭಸಂಖ್ಯೆ: 6

ಕನ್ಯಾ: ಮನಸ್ಸಿಗೆ ನೋವಾಗುವ ಮಾತನ್ನು ಹತ್ತಿರದವರೇ ಆಡಬಹುದು. ಆದರೆ ನಿಮ್ಮ ಆತ್ಮಸಾಕ್ಷಿ ಮಾತ್ರ ಶುದ್ಧವಾಗಿರಲಿ. ಹೆದರಿಕೆ ಬೇಡ. ಶುಭಸಂಖ್ಯೆ: 3

ತುಲಾ: ಲಾಟರಿ, ಜೂಜಿನಂತಹ ಅದೃಷ್ಟದ ಆಟಗಳಿಗೆ ಕೈಹಾಕಿದಿರಿ. ಧನನಾಶಕ್ಕೆ ಯಾವುದೇ ಥರದ ಅವಕಾಶಗ ನೀಡದಿರುವುದೇ ಸರಿ. ಶುಭಸಂಖ್ಯೆ: 1

ವೃಶ್ಚಿಕ: ಹಿರಿಯ ವ್ಯಕ್ತಿಗಳಿಂದ ಮಹತ್ವದ ವಿಚಾರಗಳು ಲಭ್ಯವಾಗಲಿವೆ. ಅವರನ್ನು ತುಂಬ ಪ್ರೀತಿಯಿಂದ ಮಾತನಾಡಿಸಿ ಗೌರವ ತೋರಿಸಿ. ಶುಭಸಂಖ್ಯೆ: 8

ಧನುಸ್ಸು: ವಿರೋಧಿಸುವುದಕ್ಕಾಗಿಯೇ ಎಷ್ಟೋ ಜನರು ಸುತ್ತುವರಿಯುತ್ತಾರೆ. ಆದರೆ ಭಯಪಡಬೇಡಿ. ಅಪಾರ ತಾಳ್ಮೆ ನಿಮ್ಮಲ್ಲಿರಲಿ. ಶುಭಸಂಖ್ಯೆ: 2

ಮಕರ: ಶತ್ರುಗಳು ನಿಮ್ಮ ವೈಫಲ್ಯಕ್ಕೆ ಅನೇಕ ಥರದ ತಂತ್ರಗಳನ್ನು ಹೆಣೆಯಬಹುದು. ಅಂತಿಮವಾದ ವಿಜಯವು ನಿಮ್ಮದೇ ಆಗಲಿದೆ. ಶುಭಸಂಖ್ಯೆ: 5

ಕುಂಭ: ಭಗವಾನ್ ಸೂರ್ಯದೇವನನ್ನು ಭಕ್ತಿಯಿಂದ ಧ್ಯಾನ ಮಾಡಿ. ನಿಮ್ಮ ಮನೋಭಿಲಾಷೆಗಳೆಲ್ಲ ಸಫಲತೆಯನ್ನು ಪಡೆಯಲಿವೆ. ಶುಭಸಂಖ್ಯೆ: 9

ಮೀನ: ಮಕ್ಕಳು ನಿಮಗಾಗಿ ಹರ್ಷದಾಯಕ ಸುದ್ದಿಯನ್ನು ನೀಡಲಿದ್ದಾರೆ. ಮನೆಯ ಪರಿಸರದಲ್ಲಿ ಸಂತೋಷ, ಸಮಾಧಾನಗಳೆಲ್ಲ ಪಸರಿಸಲಿವೆ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net