ಈ ರಾಶಿಯವರಿಗಿಂದು ಮಕ್ಕಳಿಂದ ಧನಾಗಮನ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಕೌಟುಂಬಿಕ ಕಲಹದ ಸಾಧ್ಯತೆ. ಸಭೆ- ಸಮಾರಂಭದಲ್ಲಿ ಉಪಸ್ಥಿತಿ. ಆಪ್ತಸ್ನೇಹಿತರೊಂದಿಗೆ ಸಮಾಲೋಚನೆ ನಡೆಸುವಿರಿ. ಶುಭಸಂಖ್ಯೆ: 9

ವೃಷಭ: ವಿದ್ಯಾರ್ಥಿಗಳಿಗೆ ಏಕಾಗ್ರತೆ ಇಲ್ಲದೇ ವಿದ್ಯಾಭ್ಯಾಸಕ್ಕೆ ತೊಂದರೆ. ದೇವತಾದರ್ಶನ ಮಾಡುವಿರಿ. ಆರೋಗ್ಯದಲ್ಲಿ ಸಮಸ್ಯೆ. ಶುಭಸಂಖ್ಯೆ: 5

ಮಿಥುನ: ಕೈಗೊಂಡ ಕಾರ್ಯದಲ್ಲಿ ಪ್ರಗತಿಯಾಗಿ ಮಾನಸಿಕ ನೆಮ್ಮದಿ. ದುಂದು ವೆಚ್ಚವನ್ನು ನಿಯಂತ್ರಿಸುವುದು ಕ್ಷೇಮಕರ. ಸ್ಥಿರಾಸ್ತಿ ನಷ್ಟ. ಶುಭಸಂಖ್ಯೆ: 1

ಕಟಕ: ಸಹೋದ್ಯೋಗಿಗಳಿಂದ ವಿರೋಧ ಎದುರಾಗಬಹುದು. ಕೈಗಾರಿಕಾ ರಂಗದವರಿಗೆ ಶುಭ ಸುದ್ದಿ. ಮಾನಸಿಕವಾಗಿ ಅಶಾಂತಿ. ಶುಭಸಂಖ್ಯೆ: 6

ಸಿಂಹ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ ದೊರೆಯುವುದು. ಸಾಹಿತಿ, ಕವಿಗಳಿಗೆ ಗೌರವ ಪ್ರಾಪ್ತಿ. ಆರ್ಥಿಕವಾಗಿ ಹಿನ್ನಡೆ ಆಗುವ ಸಾಧ್ಯತೆ. ಶುಭಸಂಖ್ಯೆ: 2

ಕನ್ಯಾ: ಮನೋ ವೈರಾಗ್ಯ. ವ್ಯಾಪಾರದಲ್ಲಿ ಮೋಸವಾಗುವ ಸಾಧ್ಯತೆ ಇದೆ, ಎಚ್ಚರದಿಂದಿರಿ. ಬಂಧುಮಿತ್ರರ ಆಗಮನವಾಗಿ ಸಂತಸ. ಶುಭಸಂಖ್ಯೆ: 3

ತುಲಾ: ಅತಿಯಾದ ಕೆಲಸದ ಒತ್ತಡ. ಎಲ್ಲವನ್ನೂ ಸಮಾಧಾನ ದಿಂದ ನಿಭಾಯಿಸುವಿರಿ. ಭೂ ವ್ಯವಹಾರಗಳಲ್ಲಿ ಅಭಿವೃದ್ಧಿ. ದೇಹಾಲಸ್ಯ. ಶುಭಸಂಖ್ಯೆ: 6

ವೃಶ್ಚಿಕ: ಕೆಲವು ಗೊಂದಲಗಳ ನಿವಾರಣೆಯಾಗಿ ಮನಸ್ಸಿಗೆ ನಿರಾಳ ಭಾವ. ಹಣದ ಒಳಹರಿವು ಹೆಚ್ಚಲಿದೆ. ಹಿತಶತ್ರುಗಳಿಂದ ತೊಂದರೆ. ಶುಭಸಂಖ್ಯೆ: 9

ಧನುಸ್ಸು: ವಿದ್ಯಾರ್ಜನೆಗಾಗಿ ಪ್ರಯಾಣ ಮಾಡಬೇಕಾಗುವುದು. ವೈದ್ಯರಿಗೆ ಶುಭದಾಯಕವಾದ ದಿನ. ಮಕ್ಕಳಿಂದ ತೊಂದರೆಯಾಗಬಹುದು. ಶುಭಸಂಖ್ಯೆ: 2

ಮಕರ: ಸಾಲ ಮರುಪಾವತಿ ಮಾಡಿ ನಿರಾಳರಾಗುವಿರಿ. ಶ್ರಮಕ್ಕೆ ತಕ್ಕ ಲಾಭ ಬಂದು ಖುಷಿ. ಹಿರಿಯರೊಂದಿಗೆ ಅನವಶ್ಯಕ ಜಗಳ ಬೇಡ. ಶುಭಸಂಖ್ಯೆ: 5

ಕುಂಭ: ಮಕ್ಕಳ ನಡವಳಿಕೆಯಲ್ಲಿ ಬದಲಾವಣೆ ಸಾಧ್ಯತೆ. ಉದ್ಯೋಗದಲ್ಲಿ ಪ್ರಗತಿಯಾಗುವುದು. ಆರ್ಥಿಕ ಅನುಕೂಲವಾಗಿ ಸಮಾಧಾನ. ಶುಭಸಂಖ್ಯೆ: 3

ಮೀನ: ಮಕ್ಕಳಿಂದ ಧನಾಗಮನವಾಗುವುದು. ಮಾತಿನಿಂದ ಸಮಸ್ಯೆ ಉಂಟಾಗಬಹುದು. ಆರೋಗ್ಯದ ವಿಷಯದಲ್ಲಿ ಜಾಗ್ರತೆ ವಹಿಸಿ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net