ನವದೆಹಲಿ : ಜುಲೈ 1 ರಿಂದ 52 ಲಕ್ಷ ಕೇಂದ್ರ ಸರ್ಕಾರದ ನೌಕರರು ಮತ್ತು 60 ಲಕ್ಷ ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ ಡಿಯರ್ನೆಸ್ ಅಲೊಯೆನ್ಸ್(ಡಿಎ) ಮತ್ತು ಡಿಯರ್ನೆಸ್ ರಿಲೀಫ್(ಡಿಆರ್) ಬೆನೆಫಿಟ್ಟನ್ನು ಪುನಃ ನೀಡಲು ಆರಂಭಿಸಲಾಗುವುದು ಎನ್ನಲಾಗಿದೆ.
2020 ರ ಜನವರಿಯಿಂದ ಈಚೆಗೆ ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಪರಿಷ್ಕರಿಸಲಾಗಿರಲಿಲ್ಲ. ಇದೀಗ ಜನವರಿ 1, 2020 ರಿಂದ ಜನವರಿ 1, 2021 ರವರೆಗಿನ ಡಿಎ ಬಾಕಿ ಮೊತ್ತವನ್ನು ನೌಕರರಿಗೆ 3 ಕಂತುಗಳಲ್ಲಿ ಪಾವತಿಸಲಾಗುವುದು. 7ನೇ ಪೇ ಕಮಿಷನ್ ಶಿಫಾರಸ್ಸಿನ ಆಧಾರದಲ್ಲಿ ಲೆಕ್ಕ ಹಾಕಿ ಡಿಎ ಮೊತ್ತವನ್ನು ಪಾವತಿಸಲಾಗುವುದು ಎನ್ನಲಾಗಿದೆ.
ಇದನ್ನೂ ಓದಿ: ಸ್ಟುಪಿಡ್ ಇಂಡಿಯನ್, ನೀನೂ ಕರಿಯಳು, ನಿನ್ನ ಹೃದಯನೂ ಕಪ್ಪು ಎಂದು ಜೈಲು ಸೇರಿದ ಸಿಂಗಪುರದ ಮಹಿಳೆ!
ಡಿಎ ಮೊತ್ತವನ್ನು ತಿಳಿಯಲು ನೌಕರರು 7ನೇ ವೇತನ ಆಯೋಗದ ಸಂಬಳ ಮತ್ತು ಪಿಂಚಣಿಯ ಮ್ಯಾಟ್ರಿಕ್ಸ್ಅನ್ನು ಪರಿಶೀಲಿಸಬೇಕು. ಹಾಲಿ ಇರುವ ಶೇ. 17 ರ ಡಿಎ, ಶೇ. 28 ರವರೆಗೆ ಏರಿಕೆಯಾಗಲಿದೆ. ಹಾಗಾಗಿ ಜುಲೈ ತಿಂಗಳಿಂದ ಮಾಸಿಕ ಡಿಎ ಬೇಸಿಕ್ ಸ್ಯಾಲರಿಯ ಶೇ.11 ರಷ್ಟು ಏರಿಕೆಯಾಗಲಿದೆ ಎಂದು ನಾಷನಲ್ ಕೌನ್ಸಿಲ್ ಆಫ್ ಜೆಸಿಎಂನ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರ ಹೇಳಿದ್ದಾರೆ. (ಏಜೆನ್ಸೀಸ್)
ಬಿಟ್ಟುಬಿಡಿ ಎಂದರೂ ಕೇಳದೆ ಮತ್ತಿನಲ್ಲಿದ್ದವನನ್ನು ಯದ್ವಾತದ್ವಾ ಥಳಿಸಿದ್ದ ಪಿಎಸ್ಐ ಬಂಧನ