ವಾಟ್ಸ್​​ಆ್ಯಪ್ ಡಿಪಿ ನೋಡಿ 1.4 ಲಕ್ಷ ರೂಪಾಯಿ ವರ್ಗಾವಣೆ ಮಾಡಿ ಮೋಸ ಹೋದ್ರು!

WhatsApp1
Published on

ಬೆಂಗಳೂರು: ವಾಟ್ಸ್​ಆಪ್ ಡಿಪಿಗೆ ಗೆಳೆಯನ ಫೋಟೋ ಹಾಕಿ ಸೈಬರ್ ಕಳ್ಳರು ಸಾಫ್ಟ್​ವೇರ್ ಉದ್ಯೋಗಿಗೆ 1.4 ಲಕ್ಷ ರೂ. ವಂಚಿಸಿದ್ದಾರೆ. ಹೆಸರಘಟ್ಟ ರಸ್ತೆಯ ಮಲ್ಲಸಂದ್ರದ ಟೆಕ್ಕಿ ವಂಚನೆಗೆ ಒಳಗಾದವರು. ತಮ್ಮ ಸ್ನೇಹಿತನ ಹೆಸರಿನಲ್ಲಿ ವಾಟ್ಸ್​ಆಪ್​ನಲ್ಲಿ ಸಂದೇಶ ಕಳುಹಿಸಿ ಹಣ ಪಡೆದು ಮೋಸ ಮಾಡಿರುವುದಾಗಿ ದೂರು ನೀಡಿರುವುದಾಗಿ ಉತ್ತರ ವಿಭಾಗ ಸಿಇಎನ್ ಠಾಣೆ ಪೊಲೀಸರು ತಿಳಿಸಿದ್ದಾರೆ.

ಹೈದರಾಬಾದ್ ಮೂಲದ ಸಾಫ್ಟ್​ವೇರ್ ಇಂಜಿನಿಯರ್, ಕುಟುಂಬದ ಜತೆ ಮಲ್ಲಸಂದ್ರದಲ್ಲಿ ವಾಸಿಸುತ್ತಿದ್ದಾರೆ. ಜು. 30ರಂದು ಅವರ ಸ್ನೇಹಿತನ ಹೆಸರಿನಲ್ಲಿ ವಾಟ್ಸ್​ಆಪ್​ನಲ್ಲಿ ಸಂದೇಶ ಬಂದಿದೆ. ‘ಅನಾರೋಗ್ಯ ಸಂಬಂಧ ತುರ್ತಾಗಿ 3 ಲಕ್ಷ ರೂ. ಬೇಕಿದೆ ಎಂದು ಸಂದೇಶವಿತ್ತು. ವಾಟ್ಸ್​ಆಪ್​ನಲ್ಲಿ ಡಿಪಿ ಕಾರಣಕ್ಕೆ ಗೆಳೆಯನದ್ದೇ ಎಂದು ನಂಬಿ 1.4 ಲಕ್ಷ ರೂ. ಗಳನ್ನು ಆತ ನೀಡಿದ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದ್ದಾರೆ.

ಮರುದಿನ ಗೆಳೆಯನ ಯೋಗಕ್ಷೇಮ ವಿಚಾರಣೆಗೆ ಕರೆ ಮಾಡಿದಾಗಲೇ ವಂಚನೆ ನಡೆದಿರುವುದು ಗೊತ್ತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net