More

    ಕೆಪಿಸಿಸಿ ಅಕಾಡೆಮಿ: ಪಕ್ಷದ ಸಿದ್ಧಾಂತ ಇತಿಹಾಸ ದಾಖಲೀಕರಣದ ಹೊಸ ಪ್ರಯತ್ನ

    ಬೆಂಗಳೂರು: ಡಿ.ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಪಕ್ಷದಲ್ಲಿ ಹೊಸ ಹೊಸ ಪ್ರಯೋಗ ಮಾಡುತ್ತಿದ್ದಾರೆ. ಪಕ್ಷದ ಸಿದ್ಧಾಂತ, ರಾಜಕೀಯ ಇತಿಹಾಸಗಳ ದಾಖಲೀಕರಣದ ಹೊಸ ಪ್ರಯತ್ನವಾಗಿ ಕೆಪಿಸಿಸಿ ಅಕಾಡೆಮಿಯೊಂದು ರಚನೆಯಾಗಿದೆ.

    ರಾಜಕೀಯ ನಾಯಕತ್ವ ಮತ್ತು ಆಡಳಿತ ವಿಚಾರದ ಈ ಅಕಾಡೆಮಿ ಪಕ್ಷದ ಇತಿಹಾಸ, ಕೊಡುಗೆಗಳು, ಜಾರಿಗೆ ತಂದ ನೀತಿಗಳು, ಕಾರ್ಯಕ್ರಮದ ಬಗ್ಗೆ ಈ ಅಕಾಡೆಮಿ ಅಧ್ಯಯನ ಮಾಡಿ ದಾಖಲೀಕರಣ ಮಾಡಲಿದೆ. ಅಷ್ಟೇ ಅಲ್ಲ ಅವುಗಳು ಕಾರ್ಯಕರ್ತರಿಗೆ ಲಭ್ಯವಾಗುವಂತೆ ಮಾಡಿ, ಪಕ್ಷ ಸಂಘಟನೆಯನ್ನು ಬಲಪಡಿಸುವ ಕೆಲಸಕ್ಕೆ ಪೂರಕವಾಗಿ ಅಕಾಡೆಮಿ ಕೆಲಸ ಮಾಡಲಿದೆ.

    ಇದನ್ನೂ ಓದಿ: ಅಯೋಧ್ಯೆಯಲ್ಲಿ ಎರಡು ಗಂಟೆ ಕಾಲ ಇರಲಿದ್ದಾರೆ ಪ್ರಧಾನಿ ಮೋದಿ

    ಈ ಪ್ರಯತ್ನ ಸಿದ್ಧಾಂತದ ಆಧಾರದಲ್ಲಿ ಕೇಡರ್ ರಚನೆ ಮತ್ತು ಪಕ್ಷ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಸಹಾಯ ಮಾಡಲಿದೆ ಎಂದು ಶಿವಕುಮಾರ್ ತಿಳಿಸಿದ್ದಾರೆ. ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಧ್ಯಕ್ಷರಾಗಿರುವ ಅಕಾಡೆಮಿಯಲ್ಲಿ ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್, ಶಾಸಕರಾದ ಕೃಷ್ಣಬೈರೇಗೌಡ, ಯು.ಟಿ. ಖಾದರ್, ಶರಣ ಪ್ರಕಾಶ ಪಾಟೀಲ್, ಸಂಸದ ಡಿ.ಕೆ.ಸುರೇಶ್ ಸೇರಿ 15 ಸದಸ್ಯರು, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ ಮೂವರು ಕನ್ವೀನರ್ ಗಳಿದ್ದಾರೆ. ವಿವಿಧ ಘಟಕಗಳ ಆರು ಮಂದಿ ವಿಶೇಷ ಆಹ್ವಾನಿತರಾಗಿರುತ್ತಾರೆ.

    ಇಂದು ಮಧ್ಯಾಹ್ನ ಮುಂಬೈ ಕಡಲತೀರಕ್ಕೆ ಅಪ್ಪಳಿಸಲಿದೆ 4.51 ಮೀಟರ್ ಎತ್ತರದ ಅಲೆಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts