ಹಿಂದ್ಮಾತಾ, ದಾದರ್ ಟ್ರಾಮ್ ಟರ್ಮಿನಸ್, ವಾಡಲಾದ ಸಕ್ಕರ್ ಪಂಚಾಯ, ಸಿಯೋನ್ನ ಎಸ್ಐಇಎಸ್ ಕಾಲೇಜ್, ಭೆಂಡಿ ಬಜಾರ್ ಜಂಕ್ಷನ್, ಜೆಜೆ ಜಂಕ್ಷನ್, ಠಾಕೂರ್ದ್ವಾರ ನಾಕಾ, ಷನ್ಮುಖಾನಂದ ಹಅಲ್, ವಾಡಲಾದ ಶೇಖ್ ಮಿಸ್ತ್ರಿ ದರ್ಗಾ ರೋಡ್, ಚೆಂಬೂರ್ನ ಪೋಸ್ಟಲ್ ಕಾಲನಿಯಲ್ಲಿ ಅಲರ್ಟ್ ಘೋಷಿಸಲಾಗಿದೆ. ಬಿಎಂಸಿ ಡೇಟಾ ಪ್ರಕಾರ ಕಳೆದ 22 ಗಂಟೆಗಳ ಅವಧಿಯಲ್ಲಿ ಸೋಮವಾರ ಬೆಳಗ್ಗೆ 8 ಗಂಟೆಯಿಂದ ಮಂಗಳವಾರ ಬೆಳಗ್ಗೆ 6 ಗಂಟೆಯ ನಡುವೆ ದಾಖಲೆಯ 23 ಸೆಂಟಿ ಮೀಟರ್ ಮಳೆಯಾಗಿದೆ. ಪಶ್ಚಿಮ ಮತ್ತು ಪೂರ್ವ ಉಪನಗರಗಳಲ್ಲಿ 16.2 ಸೆಂಟಿ ಮೀಟರ್ ಮಳೆಯಾಗಿದೆ. (ಏಜೆನ್ಸೀಸ್)