More

    ಅಸ್ಸಾಂನಲ್ಲಿ ಒಎನ್​ಜಿಸಿ ಗ್ಯಾಸ್ ಪೈಪ್​ಲೈನ್ ಸ್ಫೋಟ

    ಗುವಾಹಟಿ: ಅಸ್ಸಾಂನ ಗೆಲೆಕಿ ತೈಲನಿಕ್ಷೇಪದಲ್ಲಿ ಒಎನ್​ಜಿಸಿ(ಆಯಿಲ್ ಆ್ಯಂಡ್ ನ್ಯಾಚುರಲ್​ ಗ್ಯಾಸ್​ ಕಾರ್ಪೊರೇಷನ್​)ಗೆ ಸೇರಿದ ಪೈಪ್​ಲೈನ್​ ಸ್ಪೋಟಗೊಂಡಿದ್ದು, ಆ ಪ್ರದೇಶದಲ್ಲಿ ಅನಿಲ ಸೋರಿಕೆಯಾಗಿದ್ದು ಆತಂಕ ಸೃಷ್ಟಿಯಾಗಿದೆ. ಪೈಪ್​ಲೈನ್ ಸ್ಫೋಟವಾದ ಕೂಡಲೇ ಅದರಲ್ಲಿ ಅನಿಲ ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ ಎಂದು ಕಂಪನಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್​ (ಅಸ್ಸಾಂ ಅಸೆಟ್​) ಸಂಜೀವ್​ ಕಾಕ್ರನ್ ತಿಳಿಸಿದ್ದಾರೆ.

    ಗೆಲೆಕಿ ಫೀಲ್ಡ್​ನಲ್ಲಿರುವ ಒಎನ್​ಜಿಸಿಯ ಗ್ಯಾಸ್ ಕಂಪ್ರೆಸಸರ್​ ಘಟಕದ ನಾಲ್ಕು ಇಂಚಿನ ಗ್ಯಾಸ್ ಪೈಪ್​ಲೈನ್​ನಲ್ಲಿ ಸೋಮವಾರ ಮಧ್ಯಾಹ್ನ 12.30ಕ್ಕೆ ಅನಿಲ ಸೋರಿಕೆ ಆಗಿದೆ. ಇದಾಗಿ ಕೆಲವೇ ಹೊತ್ತಿನಲ್ಲಿ ಸಣ್ಣಪ್ರಮಾಣದ ಸ್ಫೋಟ ಸಂಭವಿಸಿದೆ. ಆದಾಗ್ಯೂ, ಅನಿಲ ಸೋರಿಕೆಯಿಂದ ಯಾವುದೇ ಅಗ್ನಿ ಅನಾಹುತ ಸಂಭವಿಸಿಲ್ಲ. ಯಾರಿಗೂ ಪ್ರಾಣ ಹಾನಿ ಆಗಿಲ್ಲ. ಸ್ಪೋಟಗೊಂಡ ಸಂದರ್ಭದಲ್ಲಿ ಅಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಪ್ರಾಣಹಾನಿ ಏನೂ ಆಗಿಲ್ಲ ಎಂದು ಕಾಕ್ರನ್ ಹೇಳಿದ್ದಾರೆ.

    ಇದನ್ನೂ ಓದಿ: ಆದಾಯ ತೆರಿಗೆ ಇಲಾಖೆಗೆ ಇನ್ನು ಭೇಟಿಕೊಡಬೇಕಾಗಿಲ್ಲ…

    ಸ್ಫೋಟಗೊಂಡ ಪೈಪ್​ಲೈನ್​ ಅನ್ನು ಕೂಡಲೇ ಐಸೋಲೇಟ್ ಮಾಡಿ ಅದರಲ್ಲಿದ್ದ ಅನಿಲವನ್ನು ಖಾಲಿಗೊಳಿಸಲಾಗಿದೆ. ಒಎನ್​ಜಿಸಿಯ ದುರಸ್ತಿ ತಂಡ ಅಲ್ಲಿ ಕೆಲಸ ಮಾಡುತ್ತಿದ್ದು, ಪೈಪ್​ಲೈನ್ ದುರಸ್ತಿ ಕಾರ್ಯ ನಡೆದಿದ್ದು ಶೀಘ್ರವೇ ಸರಿಯಾಗಲಿದೆ. ಗೆಲೆಕಿಯಲ್ಲಿರುವ ಎಲ್ಲ ಪೈಪ್​ಲೈನ್​ಗಳನ್ನು ಬದಲಾಯಿಸುವ ಕೆಲಸ ಪ್ರಗತಿಯಲ್ಲಿದೆ. ಕಂಪನಿ ಅದಕ್ಕಾಗಿ 265 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದು, ಈಗಾಗಲೇ ಶೇಕಡ 70 ಕಾಮಗಾರಿ ಪೂರ್ಣಗೊಂಡಿದೆ ಎಂದು ಕಾಕ್ರನ್ ತಿಳಿಸಿದರು.

    ಇದನ್ನೂ ಓದಿ: ರಾಮಲಲ್ಲಾಗೆ ಸಜ್ಜಾಗಿವೆ ವಿಶೇಷ ಉಡುಪುಗಳು; ಚಿನ್ನದ ದಾರದಲ್ಲಿ ಒಂಬತ್ತು ರತ್ನ ಪೋಣಿಸಿದ ಮಖ್ಮಲ್ ವಸ್ತ್ರ, ಹಸಿರು- ಕಿತ್ತಳೆ ಬಣ್ಣದ ಬಟ್ಟೆ

    ಈ ಹಿಂದೆ, ಅಸ್ಸಾಂನ ತಿನ್​ಸುಕಿಯಾ ಜಿಲ್ಲೆಯ ಬಘ್​ಜನ್​ ನಲ್ಲಿ ಆಯಿಲ್ ಇಂಡಿಯಾಗೆ ಸೇರಿದ ತೈಲ ಘಟಕದಲ್ಲಿ ಮೇ 27ಕ್ಕೆ ಸ್ಫೋಟ ಸಂಭವಿಸಿ 69 ದಿನಗಳಿಂದ ಅನಿಯಂತ್ರಿತವಾಗಿ ಹೊತ್ತಿ ಉರಿದಿದೆ. ಜೂನ್ 9ರಂದು ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲಿ ಮೃತಪಟ್ಟ ಘಟನೆಯೂ ವರದಿಯಾಗಿತ್ತು. (ಏಜೆನ್ಸೀಸ್)

    ಜಮ್ಮು-ಕಾಶ್ಮೀರದಲ್ಲಿ ಭದ್ರತೆ ಬಿಗಿ-ಶ್ರೀನಗರದಲ್ಲಿ ಕರ್ಫ್ಯೂ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts