More

    ರಾಹುಲ್​ಗೆ ದೇವಸ್ಥಾನಕ್ಕೆ ನೋ ಎಂಟ್ರಿ: ನಾನು ಮಾಡಿದ ತಪ್ಪಾದ್ರೂ ಏನು? ಬೇಸರ ಹೊರಹಾಕಿದ ರಾಗಾ

    ನವದೆಹಲಿ: ಅಸ್ಸಾಂನ 15ನೇ ಶತಮಾನದ ಸಂತ ಮತ್ತು ವಿದ್ವಾಂಸ ಶ್ರೀಮಂತ ಶಂಕರದೇವ ಅವರ ಜನ್ಮಸ್ಥಳ ನಾಗಾನ್​ನಲ್ಲಿರುವ ಬಟದ್ರವ ಸತ್ರ ದೇವಸ್ಥಾನ ಪ್ರವೇಶಿಸಲು ನನಗೆ ಅವಕಾಶ ನೀಡಲಿಲ್ಲ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

    ನಾನು ದೇವಸ್ಥಾನಕ್ಕೆ ಹೋಗಲು ಬಯಸಿದ್ದೆ. ಆದರೆ, ಅಸ್ಸಾಂನ ಅಧಿಕಾರಿಗಳು ನನಗೆ ನಿರ್ಬಂಧ ವಿಧಿಸಿದರು. ನಾನು ದೇವಸ್ಥಾನಕ್ಕೆ ಭೇಟಿ ನೀಡಬಾರದು ಎಂದಾದರೆ, ನಾನು ಮಾಡಿದ ಅಪರಾಧವಾದರೂ ಏನು? ಎಂದು ರಾಹುಲ್​ ಪ್ರಶ್ನೆ ಮಾಡಿದರು. ಅಲ್ಲದೆ, ನಾವು ಯಾವುದೇ ಸಮಸ್ಯೆಗಳನ್ನು ಸೃಷ್ಟಿಸಲು ಬಯಸುವುದಿಲ್ಲ, ನಾವು ಕೇವಲ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಲು ಮಾತ್ರ ಬಯಸುತ್ತೇವೆ ಎಂದು ಹೇಳಿದ್ದಾರೆ.

    ದೇವಾಲಯಕ್ಕೆ ಯಾರು ಭೇಟಿ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರೇ ಈಗ ನಿರ್ಧರಿಸುತ್ತಾರೆ. ಒಬ್ಬ ವ್ಯಕ್ತಿ ಮಾತ್ರ ದೇವಾಲಯಕ್ಕೆ ಮುಕ್ತವಾಗಿ ಪ್ರವೇಶಿಸಬಹುದು ಎನ್ನುವ ಮೂಲಕ ಪರೋಕ್ಷವಾಗಿ ಪ್ರಧಾನಿ ಮೋದಿ ವಿರುದ್ಧ ರಾಹುಲ್​ ಗಾಂಧಿ ಟೀಕಾ ಪ್ರಹಾರ ನಡೆಸಿದರು.

    ದೇವಸ್ಥಾನ ಪ್ರವೇಶ ನಿರ್ಬಂಧಿಸಿದ್ದಕ್ಕೆ ರಾಹುಲ್​ ಗಾಂಧಿ ಮತ್ತು ಕಾಂಗ್ರೆಸ್​ ನಾಯಕರು ನಾಗಾನ್​ನಲ್ಲಿ ಧರಣಿ ಕುಳಿತರು. ಇತ್ತ ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆ ಸಮಾರಂಭ ಹಿನ್ನೆಲೆಯಲ್ಲಿ ಸಂಭಾವ್ಯ ಗಲಾಟೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ್​ ಬಿಸ್ವಾ ಶರ್ಮಾ, ತಮ್ಮ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಮಾರ್ಗವನ್ನು ಬದಲಾಯಿಸುವಂತೆ ರಾಹುಲ್​ ಗಾಂಧಿ ಅವರನ್ನು ಒತ್ತಾಯಿಸಿದ್ದಾರೆ. ಒಂದು ವೇಳೆ ಘರ್ಷಣೆ ಸಂಭವಿಸಿದರೆ, ಅಸ್ಸಾಂ ಹೆಸರಿಗೆ ಧಕ್ಕೆಯಾಗುತ್ತದೆ ಎಂದಿದ್ದಾರೆ.

    ಮಾಧ್ಯಮಗಳು ಒಂದೆಡೆ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭ ಹಾಗೂ ಮತ್ತೊಂದೆಡೆ ಮಹಾಪುರುಷ ಶ್ರೀಮಂತ ಶಂಕರದೇವರ ಜನ್ಮಸ್ಥಳಕ್ಕೆ ನಿಮ್ಮ (ರಾಹುಲ್​ ಗಾಂಧಿ) ಭೇಟಿಯನ್ನು ಪ್ರಸಾರ ಮಾಡುವುದರಿಂದ ರಾಮಮಂದಿರ ಮತ್ತು ಬಟದ್ರವ ಸತ್ರದ ನಡುವೆ ಪೈಪೋಟಿ ಇದೆ ಎಂಬ ಕಲ್ಪನೆಯನ್ನು ನೀವು ಹುಟ್ಟು ಹಾಕಬೇಡಿ ಎಂದು ರಾಹುಲ್ ಗಾಂಧಿಗೆ ಮನವಿ ಮಾಡುತ್ತೇನೆ. ಇದರಿಂದ ಅಸ್ಸಾಂಗೆ ಒಳ್ಳೆಯದಾಗುವುದಿಲ್ಲ ಎಂದು ಶರ್ಮಾ ತಿಳಿಸಿದ್ದಾರೆ.

    ಅಸ್ಸಾಂನಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಬೆಂಗಾವಲು ಪಡೆಗಳ ಮೇಲೆ ಯೋಜಿತ ದಾಳಿ ನಡೆದಿದೆ ಎಂದು ಆರೋಪಿಸಿ ಕಾಂಗ್ರೆಸ್ ಇಂದು ಸಂಜೆ ರಾಷ್ಟ್ರವ್ಯಾಪಿ ಪ್ರತಿಭಟನೆಗಳನ್ನು ಘೋಷಿಸಿದೆ. ಬಿಜೆಪಿ ನೇತೃತ್ವದ ಸರ್ಕಾರದಿಂದ ಅಸ್ಸಾಂನಲ್ಲಿ “ಪ್ರಜಾಪ್ರಭುತ್ವದ ಮೇಲಿನ ಆಕ್ರಮಣ” ಎಂದಿರುವ ಕಾಂಗ್ರೆಸ್​ ನಾಯಕ ವೇಣುಗೋಪಾಲ್​, ದೇಶಾದ್ಯಂತ ದೊಡ್ಡ ಪ್ರಮಾಣದ ಪ್ರತಿಭಟನೆಗಳಿಗೆ ಕರೆ ನೀಡಿದ್ದಾರೆ.

    ನಿನ್ನೆ ನಡೆದ ರೋಡ್ ಶೋನಲ್ಲಿ ರಾಹುಲ್​ ಗಾಂಧಿಯವರು ನಾಗಾಂವ್‌ನ ರಸ್ತೆಬದಿಯ ಉಪಾಹಾರ ಗೃಹದಲ್ಲಿ ಒಂದು ಗುಂಪಿನೊಂದಿಗೆ ಮುಖಾಮುಖಿಯಾದರು. ಈ ವೇಳೆ ರಾಹುಲ್​ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ‘ಅನ್ಯಯ್ ಯಾತ್ರಾ’ ಮತ್ತು ‘ರಾಕಿಬುಲ್ ಗೋ ಬ್ಯಾಕ್’ ಎಂಬ ಸಂದೇಶಗಳ ಫಲಕಗಳನ್ನು ಪ್ರದರ್ಶಿಸಲಾಯಿತು. ಈ ವೇಳೆ ಸ್ಥಳದಲ್ಲಿ ಘರ್ಷಣೆ ಉಂಟಾಯಿತು. (ಏಜೆನ್ಸೀಸ್​)

    ರಾಮೋತ್ಸವ: ಜೈ ಶ್ರೀರಾಮ್ ಬರಹದೊಂದಿಗೆ ಜಗಮಗಿಸಿದ ಮುಕೇಶ್​ ಅಂಬಾನಿಯ ಅಂಟಿಲಿಯಾ ನಿವಾಸ

    ನನ್ನ ಜೀವನದಲ್ಲೇ ರಾಮ ಮಂದಿರ ನಿರ್ಮಾಣವಾಗುತ್ತದೆ ಎಂದು ಅಂದುಕೊಂಡಿರಲಿಲ್ಲ: ಅಯೋಧ್ಯೆ ರಾಜನ ಸಂಭ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts