More

    ನನ್ನ ಜೀವನದಲ್ಲೇ ರಾಮ ಮಂದಿರ ನಿರ್ಮಾಣವಾಗುತ್ತದೆ ಎಂದು ಅಂದುಕೊಂಡಿರಲಿಲ್ಲ: ಅಯೋಧ್ಯೆ ರಾಜನ ಸಂಭ್ರಮ

    ಅಯೋಧ್ಯೆ: ನನ್ನ ಜೀವನದಲ್ಲೇ ರಾಮ ಮಂದಿರ ನಿರ್ಮಾಣವಾಗುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ಆದರೆ, ರಾಮಲಲ್ಲಾ ಪ್ರಾಣ ಪ್ರತಿಷ್ಠಾದಿಂದ ಅಯೋಧ್ಯೆ ಪಟ್ಟಣವೂ ಈವರೆಗೆ ಕಳೆದುಕೊಂಡಿದ್ದ ವೈಭವವು ಮತ್ತೆ ಮರಳಿದೆ ಎಂದು ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ನ ಸದಸ್ಯರೂ ಆಗಿರುವ ಅಯೋಧ್ಯೆಯ ರಾಜ ಬಿಮ್ಲೇಂದ್ರ ಮೋಹನ್ ಪ್ರತಾಪ್ ಮಿಶ್ರಾ ತಿಳಿಸಿದ್ದಾರೆ.

    ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದ ಪ್ರತಾಪ್ ಮಿಶ್ರಾ, ಅಯೋಧ್ಯೆ ನೀರಸವಾಗಿತ್ತು ಮತ್ತು ಅದರ ವೈಭವವೆಲ್ಲ ಮಂಕಾಗಿತ್ತು. ರಾವಣನ ಕೈವಶವಾಗಿದ್ದ ಸೀತಾ ಮಾತೆ ಲಂಕಾದಿಂದ ಮರಳಿದಾಗ ಆಕೆಯನ್ನು ಶೀಲವನ್ನು ಶಂಕಿಸಲಾಯಿತು. ಇದರಿಂದ ಕೋಪಗೊಂಡ ಸೀತೆ ಅಯೋಧ್ಯೆಗೆ ಶಾಪ ನೀಡಿ, ಈ ಪಟ್ಟಣದಲ್ಲಿ ಯಾರೂ ಸಂತೋಷವಾಗಿರುವುದಿಲ್ಲ ಎಂದು ಹೇಳಿ ವನವಾಸಕ್ಕೆ ಹೋದಳು. ಅಂದಿನಿಂದ ಅಯೋಧ್ಯೆ ಪಟ್ಟಣ ತನ್ನ ವೈಭವವನ್ನು ಕಳೆದುಕೊಂಡಿತ್ತು. ಆದರೆ, ಇದೀಗ ಶಾಪ ವಿಮೋಚನೆ ಆದಂತಿದೆ ಎಂದು ಮಿಶ್ರಾ ತಿಳಿಸಿದರು.

    ಇದೀಗ ಅಯೋಧ್ಯೆಯು ಧಾರ್ಮಿಕ ಮತ್ತು ಪ್ರವಾಸಿ ತಾಣಗಳ ದೃಷ್ಟಿಯಿಂದ ವಿಶ್ವದ ಶ್ರೇಷ್ಠ ಸ್ಥಳಗಳಲ್ಲಿ ಒಂದಾಗುವ ಹಾದಿಯಲ್ಲಿದೆ. ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ಅಯೋಧ್ಯೆ ವಿಮಾನ ನಿಲ್ದಾಣದಲ್ಲಿ (MVIAA) ಇಳಿಯುವ ಎಲ್ಲ ವಿಮಾನಗಳು ಭರ್ತಿಯಾಗಿವೆ. ಶೀಘ್ರದಲ್ಲೇ ರಾಜ್ಯ ಸರ್ಕಾರವು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಹೆಲಿಕಾಪ್ಟರ್ ಸೇವೆಯನ್ನು ಪ್ರಾರಂಭಿಸಲಿದೆ. ಯಾತ್ರಿಕರು ಮತ್ತು ಪ್ರವಾಸಿಗರ ಒಳಹರಿವು ವ್ಯಾಪಾರ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ ಎಂದು ಮಿಶ್ರಾ ಹೇಳಿದರು.

    ಪ್ರಾಣ ಪ್ರತಿಷ್ಠಾದ ನಂತರ, ಜನವರಿ 23ರಿಂದ ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಯಾತ್ರಿಕರು ಅಯೋಧ್ಯೆಗೆ ಭೇಟಿ ನೀಡುತ್ತಾರೆ ಎಂದು ಮಿಶ್ರಾ ಹೇಳಿದರು. ಸಾಕಷ್ಟು ಪ್ರವಾಸಿಗರು ಬಂದರೂ ಅದನ್ನು ನಿಭಾಯಿಸಲು, ರಸ್ತೆಗಳನ್ನು ವಿಸ್ತರಿಸಲಾಗಿದೆ, ರೈಲ್ವೆ ನಿಲ್ದಾಣಗಳು ಮತ್ತು ಬಸ್ ಡಿಪೋಗಳನ್ನು ವಿಸ್ತರಿಸಲಾಗಿದೆ ಎಂದು ಮಿಶ್ರಾ ಮಾಹಿತಿ ನೀಡಿದರು.

    ಅಂದಹಾಗೆ ಮಿಶ್ರಾ ಅವರು 2019ರಲ್ಲಿ ಬಹುಜನ ಸಮಾಜ ಪಾರ್ಟಿಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋಲುಂಡರು. (ಏಜೆನ್ಸೀಸ್​)

    ರಾಮೋತ್ಸವ: ಜೈ ಶ್ರೀರಾಮ್ ಬರಹದೊಂದಿಗೆ ಜಗಮಗಿಸಿದ ಮುಕೇಶ್​ ಅಂಬಾನಿಯ ಅಂಟಿಲಿಯಾ ನಿವಾಸ

    ಅಮಿತಾಭ್, ಚಿರಂಜೀವಿ… ರಾಮದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಯಾರೆಲ್ಲಾ ಸೆಲೆಬ್ರಿಟಿಗಳು ಬಂದ್ರು..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts