More

    ರಾಮೋತ್ಸವ: ಜೈ ಶ್ರೀರಾಮ್ ಬರಹದೊಂದಿಗೆ ಜಗಮಗಿಸಿದ ಮುಕೇಶ್​ ಅಂಬಾನಿಯ ಅಂಟಿಲಿಯಾ ನಿವಾಸ

    ಮುಂಬೈ: ಇಡೀ ದೇಶವೇ ಇಂದು ಐತಿಹಾಸಿಕ ಕ್ಷಣವೊಂದಕ್ಕೆ ಸಾಕ್ಷಿಯಾಗಲಿದೆ. ಶತಮಾನಗಳ ಕನಸು ಇಂದು ನನಸಾಗಲಿದೆ. ಹೌದು, ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯವಾದ ಹೊಸ ರಾಮ ಮಂದಿರದಲ್ಲಿ ಮೈಸೂರಿನ ಶಿಲ್ಪಿ ಅರುಣ್​ ಯೋಗಿರಾಜ್​ ಕೆತ್ತನೆಯ ಬಾಲರಾಮ ವಿಗ್ರಹವನ್ನು ಇಂದು ಮಧ್ಯಾಹ್ನ ನಡೆಯಲಿರುವ ಅದ್ಧೂರಿ ಕಾರ್ಯಕ್ರಮದಲ್ಲಿ ಪ್ರಾಣ ಪ್ರತಿಷ್ಠಾ ನೇರವೇರಿಸಲಾಗುತ್ತಿದೆ. ಇಡೀ ಅಯೋಧ್ಯೆಯೇ ಇಂದ್ರ ಲೋಕದಂತೆ ಕಂಗೊಳಿಸುತ್ತಿದೆ. ಈ ಐತಿಹಾಸಿಕ ಕ್ಷಣವನ್ನು ಸ್ಮರಣೀಯವಾಗಿಸಲು ದೇಶದ ಶ್ರೀಮಂತ ಉದ್ಯಮಿ ಮುಕೇಶ್​ ಅಂಬಾನಿ ಕೂಡ ಭರ್ಜರಿ ಆಚರಣೆಯನ್ನು ತಮ್ಮ ನಿವಾಸದಲ್ಲಿ ಕೈಗೊಂಡಿದೆ.

    ಮುಕೇಶ್​ ಅಂಬಾನಿ ಅವರ ಅಂಟಿಲಿಯಾ ನಿವಾಸ ವಿದ್ಯುದಲಂಕಾರದಿಂದ ಜಗಮಗಿಸುತ್ತಿದೆ. ವಿಶೇಷತೆ ಏನೆಂದರೆ, ಇಡೀ ಕಟ್ಟಡವು ಜಯ ಶ್ರೀರಾಮ ಘೋಷಣೆಯೊಂದಿಗೆ ಪ್ರಜ್ವಲಿಸುತ್ತಿದೆ. ಅಲ್ಲದೆ, ಇಡೀ ಕಟ್ಟಡ ಕೇಸರಿಮಯವಾಗಿದೆ. ಮುಕೇಶ್​ ಅಂಬಾನಿ ಅವರ ಅಂಟಿಲಿಯಾ ನಿವಾಸವನ್ನು ಹೊರತುಪಡಿಸಿ, ಹಲವಾರು ಇತರೆ ಸ್ಮಾರಕಗಳು ಮತ್ತು ಸಾರ್ವಜನಿಕ ಕಟ್ಟಡಗಳು ಸಹ ದೇಶಾದ್ಯಂತ ಬೆಳಗುತ್ತಿವೆ.

    ಮುಂಬೈ ಮಾತ್ರವಲ್ಲದೆ ಅಯೋಧ್ಯೆಯ ರಾಮ ಮಂದಿರದ ಮಹಾ ಉದ್ಘಾಟನೆಯನ್ನು ಆಚರಿಸಲು ಹಲವಾರು ನಗರಗಳು, ಸೇತುವೆಗಳು, ದೇವಾಲಯಗಳು ಮತ್ತು ರಸ್ತೆಗಳು ಸಹ ಕಲರ್​ಫುಲ್​ ಲೈಟ್​ಗಳಿಂದ ಕಂಗೊಳಿಸುತ್ತಿವೆ. ಅಯೋಧ್ಯೆಯಲ್ಲಂತೂ ಭೂ ಕೈಲಾಸವೇ ಧರೆಗಿಳಿದಿದೆ. ಈ ಸುದಿನವನ್ನು ಆಚರಿಸಲು ವಿವಿಧ ದೇವಾಲಯಗಳು ಮತ್ತು ಕಟ್ಟಡಗಳನ್ನು ವಿದ್ಯುತ್​ನಿಂದ ಬೆಳೆಗಿಸಲಾಗಿದೆ. ಇಡೀ ಅಯೋಧ್ಯೆ ಪಟ್ಟಣದಲ್ಲಿ ಧಾರ್ಮಿಕ ಉತ್ಸಾಹ ಆಕಾಶ ಮುಟ್ಟಿದೆ.

    ಅಯೋಧ್ಯೆಯ ಬೀದಿಗಳಲ್ಲಿ ‘ರಾಮ್ ಆಯೇಂಗೆ’ ಮತ್ತು ‘ಅವಧ್ ಮೇ ರಾಮ್ ಆಯೇನ್ ಹೈ’ ನಂತಹ ಹಾಡುಗಳು ಮೊಳಗುತ್ತಿವೆ. ಎಲ್ಲೆಡೆ ಕೇಸರಿ ಧ್ವಜಗಳು ಹಾರಾಡುತ್ತಿವೆ. ಜೈ ಶ್ರೀ ರಾಮ್ ಎಂಬ ಉತ್ಸಾಹದ ಘೋಷಣೆಗಳ ನಡುವೆ ಕಳೆದ ಶುಕ್ರವಾರ ರಾಮಮಂದಿರದ ಗರ್ಭಗುಡಿಯಲ್ಲಿ ರಾಮ್ ಲಲ್ಲಾ ಮೂರ್ತಿಯನ್ನು ಇರಿಸಲಾಯಿತು ಮತ್ತು ಹಲವಾರು ಆಚರಣೆಗಳನ್ನು ನಡೆಸಲಾಯಿತು. ಅಂತಿಮ ‘ಪ್ರಾಣ ಪ್ರತಿಷ್ಠಾ’ ಸಮಾರಂಭವು ಇಂದು ಮಧ್ಯಾಹ್ನ 12.30 ರ ಸುಮಾರಿಗೆ ಪ್ರಧಾನಿ ನರೇಂದ್ರ ಮೋದಿ ನೆರವೇರಿಸಲಿದ್ದಾರೆ. ಲಕ್ಷ್ಮೀಕಾಂತ್ ದೀಕ್ಷಿತ್ ನೇತೃತ್ವದ ಪುರೋಹಿತರ ತಂಡದಿಂದ ಮುಖ್ಯ ವಿಧಿವಿಧಾನಗಳು ನಡೆಯಲಿವೆ. (ಏಜೆನ್ಸೀಸ್​)

    ಮ್ಯಾರಥಾನ್​ ಓಟದಲ್ಲಿ ಇಬ್ಬರು ಮೃತ್ಯು! 22 ಮಂದಿ ಆಸ್ಪತ್ರೆಗೆ ದಾಖಲು

    ಅಮಿತಾಭ್, ಚಿರಂಜೀವಿ… ರಾಮದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಯಾರೆಲ್ಲಾ ಸೆಲೆಬ್ರಿಟಿಗಳು ಬಂದ್ರು..?

    ಬಿಲ್ಕಿಸ್ ಬಾನೋ ಪ್ರಕರಣ: ಗೋಧ್ರಾ ಉಪ ಜೈಲಿನಲ್ಲಿ 11 ಅಪರಾಧಿಗಳು ಶರಣು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts