ಸೈಬರ್​​ ಕ್ರೈಂ ವಿಭಾಗದ ಹೆಡ್​​ ಕಾನ್ಸ್​​ಟೇಬಲ್ ಆತ್ಮಹತ್ಯೆ

constable
Published on

ಬೆಂಗಳೂರು: ನಗರದ ಸೈಬರ್ ಕ್ರೈಂ ಠಾಣೆಯಲ್ಲಿ ಹೆಡ್ ಕಾನ್ಸ್​​ಟೇಬಲ್ ಆಗಿದ್ದ ಸದಾಶಿವ ಎಂಬುವರು ಇಂದು ಬೆಳಿಗ್ಗೆ ತಮ್ಮ ಗಿರಿನಗರದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 47 ವರ್ಷ ವಯಸ್ಸಾಗಿದ್ದ ಸದಾಶಿವ ಅವರ ಆತ್ಮಹತ್ಯೆಗೆ ಕಾರಣವೇನೆಂಬುದು ಇನ್ನೂ ತಿಳಿದುಬಂದಿಲ್ಲ.

ಭಾರತೀಯ ಸೇನೆಯಲ್ಲಿ 17 ವರ್ಷ ಸೇವೆ ಸಲ್ಲಿಸಿದ್ದ ಸದಾಶಿವ ಅವರು ಅಲ್ಲಿ ರಿಟೈರ್ಡ್ ಆದ ಮೇಲೆ ಪೊಲೀಸ್ ಇಲಾಖೆ ಸೇರಿದ್ದರು. ವಿಜಯನಗರ ಠಾಣೆಯಲ್ಲಿ 8 ವರ್ಷ ಕೆಲಸ ಮಾಡಿದ ಬಳಿಕ ಸಿಸಿಬಿ ಸೈಬರ್ ಕ್ರೈಂನಲ್ಲಿ‌ ಕಾರ್ಯ ನಿರ್ವಹಿಸುತ್ತಿದ್ದರು.

ಸದಾಶಿವ ಅವರು ಈ ಹೆಜ್ಜೆ ತೆಗೆದುಕೊಳ್ಳಲು ವೈಯಕ್ತಿಕ ಕಾರಣವೋ ಅಥವಾ ವೃತ್ತಿ ವಿಚಾರವಾಗಿಯೋ ಗೊತ್ತಿಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ. ಗಿರಿನಗರ ಠಾಣೆಯಲ್ಲಿ ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net