ನಮ್ಮ ಮೆಟ್ರೊ: ಇಂದಿನಿಂದ ಕೆಂಗೇರಿ ಟರ್ಮಿನಲ್ ಕಾರ್ಯಾರಂಭ; ರೈಲುಗಳ ವಿವರ ಇಲ್ಲಿದೆ

kengeriterminal
Published on

ಬೆಂಗಳೂರು: ನಮ್ಮ ಮೆಟ್ರೊ ನೇರಳೆ ಮಾರ್ಗದ 7.5 ಕಿಲೋಮೀಟರ್​​ ವಿಸ್ತೃತ ಮಾರ್ಗವು ಇಂದಿನಿಂದ ವಾಣಿಜ್ಯ ಕಾರ್ಯಾಚರಣೆ ಆರಂಭಿಸಿದೆ. ಪಶ್ಚಿಮ ವಿಸ್ತರಣೆ ಕಾರ್ಯಾಚರಣೆ ಮಾರ್ಗದಲ್ಲಿ ಮೈಸೂರು ರಸ್ತೆ ನಿಲ್ದಾಣದ ನಂತರ 6 ಹೊಸ ನಿಲ್ದಾಣಗಳು ಸೇರ್ಪಡೆಯಾಗಿವೆ – ನಾಯಂಡನಹಳ್ಳಿ, ರಾಜರಾಜೇಶ್ವರಿ ನಗರ, ಜ್ಞಾನಭಾರತಿ, ಪಟ್ಟಣಗೆರೆ, ಕೆಂಗೇರಿ ಬಸ್ ಟರ್ಮಿನಲ್​ ನಿಲ್ದಾಣ ಮತ್ತು ಕೆಂಗೇರಿ ಮೆಟ್ರೋ ನಿಲ್ದಾಣಗಳು.

ಕೆಂಗೇರಿ ಟರ್ಮಿನಲ್​ನಿಂದ ಪ್ರಯಾಣಿಕರು ಟೋಕನ್ ಪಡೆದು ಸಂಚಾರ ಮಾಡುತ್ತಿದ್ದಾರೆ. ಇಂದು ಕೆಂಗೇರಿ ಮೆಟ್ರೊ ಸ್ಟೇಷನ್ನಿಗೆ ಬಂದ ಮೊದಲ ಪ್ರಯಾಣಿಕರನ್ನು ಬಿಎಂಆರ್​ಸಿಎಲ್​ ಸಿಬ್ಬಂದಿ ಹೂವು ನೀಡಿ ಸ್ವಾಗತಿಸಿದರು. ಮೆಟ್ರೊ ರೈಲು ಸಂಚಾರದ ವಿವರಗಳು ಈ ಕೆಳಗಿನಂತಿದೆ.

1. ರೈಲುಗಳ ಅಂತರ:
i) ಎಲ್ಲಾ ಕೆಲಸದ ದಿನಗಳಲ್ಲಿ -
ಜನದಟ್ಟಣೆ ಸಮಯದಲ್ಲಿ :
· ಮೈಸೂರು ರಸ್ತೆ ಮತ್ತು ಬೈಯಪ್ಪನಹಳ್ಳಿ ವಿಭಾಗ: 5 ನಿಮಿಷಗಳು
· ಕೆಂಗೇರಿ ಮತ್ತು ಬೈಯಪ್ಪನಹಳ್ಳಿ ವಿಭಾಗ: 10 ನಿಮಿಷಗಳು
ಜನದಟ್ಟಣೆ ಇಲ್ಲದ ಸಮಯದಲ್ಲಿ :
· ಕೆಂಗೇರಿ ಮತ್ತು ಬೈಯಪ್ಪನಹಳ್ಳಿ ವಿಭಾಗ: 10 ನಿಮಿಷಗಳು
ii) ಭಾನುವಾರ ಮತ್ತು ರಜಾದಿನಗಳಲ್ಲಿ ರೈಲುಗಳ ಅಂತರ:
· ಕೆಂಗೇರಿ ಮತ್ತು ಬೈಯಪ್ಪನಹಳ್ಳಿ ವಿಭಾಗ: 10 ನಿಮಿಷಗಳು

2. ಎಲ್ಲಾ ದಿನಗಳಲ್ಲಿ ಟರ್ಮಿನಲ್ ನಿಲ್ದಾಣಗಳಿಂದ ರೈಲು ಹೊರಡುವ ಸಮಯ:
· ಟರ್ಮಿನಲ್​​ಗಳಾದ ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ ಮತ್ತು ಸಿಲ್ಕ್​ ಇನ್ಸ್​ಸ್ಟಿಟ್ಯೂಟ್​ ನಿಂದ ಮೊದಲ ರೈಲು ಬೆಳಿಗ್ಗೆ 07:00 ಗಂಟೆಗೆ ಹೊರಡುತ್ತದೆ.
· ಟರ್ಮಿನಲ್​​ ನಿಲ್ದಾಣಗಳಿಂದ ಕೊನೆಯ ರೈಲು ನಿರ್ಗಮನ -
i) ಬೈಯಪ್ಪನಹಳ್ಳಿಯಿಂದ ರಾತ್ರಿ 08:05 ಗಂಟೆಗೆ, ಕೆಂಗೇರಿಯಿಂದ ರಾತ್ರಿ 08:00 ಗಂಟೆಗೆ.
ii) ನಾಗಸಂದ್ರದಿಂದ ರಾತ್ರಿ 08:05 ಗಂಟೆಗೆ, ಸಿಲ್ಕ್​ ಇನ್​​ಸ್ಟಿಟ್ಯೂಟ್​ನಿಂದ ರಾತ್ರಿ 08.00 ಗಂಟೆಗೆ.
iii) ಕೆಂಪೇಗೌಡ ಮೆಜೆಸ್ಟಿಕ್ ನಿಲ್ದಾಣದಿಂದ ಎಲ್ಲಾ ನಿಲ್ದಾಣಗಳಿಗೆ ಕೊನೆಯ ರೈಲು ರಾತ್ರಿ 08:30 ಗಂಟೆಗೆ ಹೊರಡುತ್ತದೆ.

3. ಪ್ರಯಾಣ ದರ, ಅವಧಿ:
ಬೈಯಪ್ಪನಹಳ್ಳಿಯಿಂದ ಕೆಂಗೇರಿಗೆ ಪ್ರಯಾಣ ದರ ರೂ. 56/-
ಮತ್ತು ತುಂಬಾ ಉದ್ದದ ಪ್ರಯಾಣ ಕೆಂಗೇರಿಯಿಂದ ಸಿಲ್ಕ್​ ಇನ್​​ಸ್ಟಿಟ್ಯೂಟ್​​ಗೆ ರೂ. 60/-
ಬೈಯಪ್ಪನಹಳ್ಳಿಯಿಂದ ಕೆಂಗೇರಿಗೆ ಪ್ರಯಾಣದ ಸಮಯ 52 ನಿಮಿಷಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net