ಕರಿಬೇವಿನ ಎಲೆಗಳನ್ನು ಈ ರೀತಿ ಸೇವಿಸಿ ನೋಡಿ ಬೆಣ್ಣೆಯಂತೆ ಕರಗಿಹೋಗುತ್ತೆ ದೇಹದಲ್ಲಿನ ಬೊಜ್ಜು​!

Curryleaves Benefits

ಊಟದ ಮಧ್ಯದಲ್ಲಿ ಕರಿಬೇವಿನ ಎಲೆಗಳು ಸಿಕ್ಕರೆ ಸಾಕು ಅವುಗಳನ್ನು ತೆಗೆದು ಪಕ್ಕಕ್ಕೆ ಇಡುವವರೇ ಹೆಚ್ಚು. ಆದರೆ, ಇದರ ಪ್ರಯೋಜನಗಳ ಬಗ್ಗೆ ತಿಳಿದು ಕೊಂಡವರು ಹಸಿಯಾಗಿಯೇ ಸೇವಿಸುತ್ತಾರೆ. ನಿಮಗೆ ಕರಿಬೇವಿನ ಎಲೆಗಳನ್ನು ತಿನ್ನುವ ಅಭ್ಯಾಸ ಇಲ್ಲ ಅಂದರೆ ನಿಮ್ಮ ದೇಹಕ್ಕೆ ನೀವು ತುಂಬಾ ನಷ್ಟ ಮಾಡಿಕೊಳ್ಳುತ್ತಿದ್ದೀರಿ ಎಂದರ್ಥ.

ಕರಿಬೇವಿನ ಎಲೆಗಳನ್ನು ದಕ್ಷಿಣ ಭಾರತದ ಪಾಕಪದ್ಧತಿಯಲ್ಲಿ ಎಥೇಚ್ಛವಾಗಿ ಬಳಸಲಾಗುತ್ತದೆ. ಅಡುಗೆಯ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಕರಿಬೇವಿನ ಎಲೆಗಳು ಅನೇಕ ಆರೋಗ್ಯಕರ ಲಾಭಗಳನ್ನು ಒಳಗೊಂಡಿದೆ. ಅನೇಕ ಆರೋಗ್ಯ ಸಮಸ್ಯೆಗಳ ವಿರುದ್ಧ ಕರಿಬೇವು ಉತ್ತಮವಾಗಿ ಕೆಲಸ ಮಾಡುತ್ತದೆ. ಕೊಲೆಸ್ಟ್ರಾಲ್ ಕರಗಿಸಲು ಇದು ಸಹಕಾರಿಯಾಗಿದೆ. ಅಲ್ಲದೆ, ಕೂದಲಿನ ಸಮಸ್ಯೆಗಳನ್ನೂ ದೂರ ಮಾಡುತ್ತದೆ. ನಾವೀಗ ಕರಿಬೇವಿನ ಎಲೆಗಳಿಂದಾಗುವ ಪ್ರಯೋಜನಗಳನ್ನು ವಿವರವಾಗಿ ತಿಳಿಯೋಣ.

ಕೊಲೆಸ್ಟ್ರಾಲ್ ನಿಯಂತ್ರಣ: ಪ್ರತಿನಿತ್ಯ ಕರಿಬೇವಿನ ಸೊಪ್ಪನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಪ್ರಮಾಣ ಸಂಪೂರ್ಣವಾಗಿ ಕಡಿಮೆಯಾಗುತ್ತದೆ ಮತ್ತು ರಕ್ತನಾಳಗಳಲ್ಲಿನ ಕೊಬ್ಬಿನ ಪ್ರಮಾಣ ಕರಗುತ್ತದೆ ಎನ್ನುತ್ತಾರೆ ತಜ್ಞರು. ಕರಿಬೇವಿನ ರಸ ತೆಗೆದು ಕುಡಿಯಬಹುದು. ಇಂದಿನ ಆಧುನಿಕ ಜಗತ್ತಿನಲ್ಲಿ ಕೊಲೆಸ್ಟ್ರಾಲ್​ ಸಮಸ್ಯೆಯು ಅನೇಕರಲ್ಲಿ ಹೆಚ್ಚಾಗಿದೆ. ಕೊಲೆಸ್ಟ್ರಾಲ್ ಅನ್ನು ಅನೇಕ ಔಷಧಿಗಳಿಂದ ನಿಯಂತ್ರಿಸಲಾಗುವುದಿಲ್ಲ. ಈ ಸಂದರ್ಭದಲ್ಲಿ ನೀವು ಕರಿಬೇವಿನ ಎಲೆಗಳನ್ನು ಅವಲಂಬಿಸಬಹುದು. ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಗಳನ್ನು ನೆನೆಸಿದ ನೀರನ್ನು ಕುಡಿಯುವುದರಿಂದ ಕೊಲೆಸ್ಟ್ರಾಲ್ ಕರಗುತ್ತದೆ.

ಕಣ್ಣಿನ ಸಮಸ್ಯೆ ನಿವಾರಣೆ: ಕರಿಬೇವಿನ ಎಲೆಗಳಲ್ಲಿ ವಿಟಮಿನ್ ಎ ಹೇರಳವಾಗಿದೆ. ಕಣ್ಣುಗಳನ್ನು ಆರೋಗ್ಯವಾಗಿ ಇಡಲು ಈ ವಿಟಮಿನ್ ತುಂಬಾ ಉಪಯುಕ್ತವಾಗಿದೆ. ಕರಿಬೇವಿನ ಎಲೆಗಳನ್ನು ನೆನೆಸಿದ ನೀರನ್ನು ಕುಡಿಯುವುದರಿಂದ ಕಣ್ಣುಗಳು ಆರೋಗ್ಯವಾಗಿರುತ್ತವೆ. ದೃಷ್ಟಿ ಸುಧಾರಿಸುತ್ತದೆ. ವಿವಿಧ ಕಣ್ಣಿನ ಸಮಸ್ಯೆಗಳನ್ನು ತಡೆಯುತ್ತದೆ.

ಕೂದಲು ಸಮಸ್ಯೆಗಳು ದೂರ: ಕರಿಬೇವಿನ ಎಲೆಗಳು ಕೂದಲಿಗೆ ತುಂಬಾ ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿದೆ. ಕೂದಲು ಉದುರುವ ಸಮಸ್ಯೆಯನ್ನು ತಕ್ಷಣವೇ ಕಡಿಮೆ ಮಾಡುತ್ತದೆ. ಕರಿಬೇವಿನ ಎಲೆಗಳನ್ನು ಬಳಸುವುದರಿಂದ ಕೂದಲಿಗೆ ಪೋಷಣೆ ಸಿಗುತ್ತದೆ. ನೀರಿನಲ್ಲಿ ನೆನೆಸಿದ ಕರಿಬೇವಿನ ಎಲೆಗಳನ್ನು ನಿತ್ಯವೂ ಸೇವಿಸಿದರೆ, ಕೂದಲು ಉದುರುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಕೂದಲು ದಪ್ಪ ಮತ್ತು ಕಪ್ಪುಗಾಗಲು ಸಹಕಾರಿಯಾಗಿದೆ.

ಲಿವರ್​ ಆರೋಗ್ಯ: ಆರೋಗ್ಯಕರ ಜೀವನ ನಡೆಸಲು ಆರೋಗ್ಯಕರ ಯಕೃತ್ತು ಬಹಳ ಮುಖ್ಯ. ಆದರೆ ಹೊರಗಿನ ಆಹಾರ, ಜೀವನಶೈಲಿ ಬದಲಾವಣೆ ಮತ್ತು ಇತರ ಹಲವು ಕಾರಣಗಳು ಯಕೃತ್ತನ್ನು ಹಾನಿಗೊಳಿಸುತ್ತವೆ. ಲಿವರ್ ಅನ್ನು ಸುಸ್ಥಿತಿಯಲ್ಲಿಡಲು ಕರಿಬೇವಿನ ಎಲೆಗಳನ್ನು ಸೇರಿಸಬೇಕು. ಕರಿಬೇವಿನ ಎಲೆಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಉತ್ಕರ್ಷಣ ನಿರೋಧಕಗಳು ಯಕೃತ್ತಿನ ಹಾನಿಯನ್ನು ತಡೆಯುತ್ತದೆ. ಇದಲ್ಲದೆ, ಕರಿಬೇವು ಯಕೃತ್ತನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತದೆ.

ಉಳಿದಂತೆ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿರುವ ಕರಿಬೇವು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಪರಿಣಾಮವಾಗಿ, ದೇಹವು ವಿವಿಧ ರೋಗಗಳಿಂದ ರಕ್ಷಿಸಲ್ಪಡುತ್ತದೆ. ಪ್ರತಿದಿನ ಕರಿಬೇವಿನ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆಯೂ ಉತ್ತಮಗೊಳ್ಳುತ್ತದೆ. ಕರಿಬೇವಿನ ಎಲೆಗಳನ್ನು ತಿನ್ನುವುದರಿಂದ ಹೃದಯದ ಆರೋಗ್ಯವೂ ಸುಧಾರಿಸುತ್ತದೆ. ಹೊಟ್ಟೆಯಲ್ಲಿನ ಉರಿಯೂತದಿಂದ ಉಪಶಮನವನ್ನು ಪಡೆಯಬಹುದು. ರಕ್ತಹೀನತೆಯ ಸಮಸ್ಯೆ ಸಂಪೂರ್ಣವಾಗಿ ಕಡಿಮೆಯಾಗುತ್ತದೆ. ಜೊತೆಗೆ ಮಹಿಳೆಯರಿಗೆ ರಕ್ತಹೀನತೆಯ ಸಮಸ್ಯೆಗಳು ದೂರವಾಗುತ್ತವೆ. ಮುಟ್ಟಿನ ಸಮಯದಲ್ಲಿ ನೋವು ಕಡಿಮೆಯಾಗುತ್ತದೆ. ಕರಿಬೇವಿನ ಎಲೆಯಲ್ಲಿರುವ ಕಬ್ಬಿಣಾಂಶವು ರಕ್ತವನ್ನು ಹೆಚ್ಚಿಸುತ್ತದೆ. ಮತ್ತು ಇತರ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. (ಏಜೆನ್ಸೀಸ್​)

ಟ್ರೆಂಡ್ ಅನುಸರಿಸಿ ಪೋಸ್ಟ್​ ಹಾಕೋದಲ್ಲ… ಟ್ರೋಲ್​ಗೆ ಹೆದರಿ ಪೋಸ್ಟ್​ ಡಿಲೀಟ್​ ಮಾಡಿದ ರೋಹಿತ್​ ಪತ್ನಿ ರಿತಿಕಾ!

ಕಾಲಿಗೆ ಬಿದ್ದ ಅಭಿಮಾನಿಯ ಆರೋಗ್ಯ ಸಮಸ್ಯೆ ಪತ್ತೆಹಚ್ಚಿದ ಧೋನಿ! ಮೈದಾನದಲ್ಲೇ ಮಹಿ ಕೊಟ್ಟ ಮಾತು ಮನಮುಟ್ಟುತ್ತೆ

Share This Article

ಕೇವಲ 10 ನಿಮಿಷದಲ್ಲಿ ಮನೆಯಲ್ಲೇ ಮಾಡಿ ಬ್ರೆಡ್ ಪಿಜ್ಜಾ; ಇಲ್ಲಿದೆ ಸಿಂಪಲ್​ ವಿಧಾನ | Recipe

ಮನೆಯಲ್ಲಿದ್ದಾಗ ಕೆಲವೊಮ್ಮೆ ಬಹಳ ಹಸಿವಾಗುತ್ತಿರುತ್ತದೆ ಆದರೆ ಆ ಸಮಯದಲ್ಲಿ ಏನು ತಿನ್ನಬೇಕು ಎಂಬುದೆ ನಮಗೆ ತಿಳಿಯುವುದಿಲ್ಲ.…

ಊಟದ ಬಳಿಕ ಬೆಲ್ಲದ ಸೇವನೆಯಿಂದಾಗುವ ಪ್ರಯೋಜನ ಗೊತ್ತಾ?; ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ | Health Tips

ಭಾರತದಲ್ಲಿ ಬೆಲ್ಲವನ್ನು ಸಾಮಾನ್ಯವಾಗಿ ಊಟದ ನಂತರ ತಿನ್ನಲಾಗುತ್ತದೆ. ನಿಮ್ಮ ಹಸಿವನ್ನು ನೀಗಿಸಲು ಇದನ್ನು ಸಿಹಿಯಾಗಿ ಸೇವಿಸಬಹುದು.…

ಟೊಮೆಟೊ ಸೇವನೆ ಕ್ಯಾನ್ಸರ್​ ಅಪಾಯವನ್ನು ಕಡಿಮೆ ಮಾಡುತ್ತದೆಯೇ; ಈ ಬಗ್ಗೆ ತಜ್ಞರು ಹೇಳೋದೇನು? | Health Tips

ಕ್ಯಾನ್ಸರ್ ಚಿಕಿತ್ಸೆಯು ಇನ್ನೂ ಅತ್ಯಂತ ದುಬಾರಿ ಮತ್ತು ಅಸಾಧ್ಯವಾಗಿದೆ. ಇತ್ತೀಚೆಗೆ ಯುವಕರನ್ನೂ ಕಾಡುತ್ತಿರುವ ರೋಗ ಕ್ಯಾನ್ಸರ್​​.…