

ನವದೆಹಲಿ: ಬ್ಯಾಟ್ಸ್ಮ್ಯಾನ್-ಬೌಲರ್ಗಳ ಸಂಘಟಿತ ಪ್ರದರ್ಶನದ ಫಲವಾಗಿ ಚೆನ್ನೈ ಸೂಪರ್ಕಿಂಗ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 77ರನ್ಗಳ ಜಯ ಸಾಧಿಸಿ ಪ್ಲೇ ಆಫ್ ಪ್ರವೇಶಿಸಿದೆ.
ನವದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ ಸಿಎಸ್ಕೆ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 223ರನ್ ಗಳಿಸಿತ್ತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಚೆನ್ನೈ ತಂಡವು ಆರಂಭಿಕರಾದ ಋತುರಾಜ್ ಗಾಯಕ್ವಾಡ್(79 ರನ್, 50 ಎಸೆತ, 3 ಬೌಂಡರಿ, 7 ಸಿಕ್ಸರ್), ಡೆವೊನ್ ಕಾನ್ವೇ(87 ರನ್, 52 ಎಸೆತ, 11 ಬೌಂಡರಿ, 3 ಸಿಕ್ಸರ್) ಬಿರುಸಿನ ಜೊತೆಯಾಟದ ಫಲವಾಗಿ 3 ವಿಕೆಟ್ ನಷ್ಟಕ್ಕೆ 20 ಓವರ್ಗಳಲ್ಲಿ 223 ರನ್ ಗಳಿಸಿತ್ತು.
ಡೆಲ್ಲಿ ಪರ ಚೇತನ್ ಸಕಾರಿಯಾ(4-0-36-1), ಎನ್ರಿಚ್ ನೋಕಿಯಾ(4-0-43-1), ಖಲೀಲ್ ಅಹ್ಮದ್(4-0-45-1), ಕುಲದೀಪ್ ಯಾದವ್(3-034-0), ಅಕ್ಷರ್ ಪಟೇಲ್(3-0-32-0), ಲಲಿತ್ ಯಾದವ್(2-0-32-0) ರನ್ ನೀಡಿ ವಿಕೆಟ್ ಪಡೆದಿದ್ದಾರೆ.
ಬೃಹತ್ ಗುರಿ ಬೆನ್ನತ್ತಿದ್ದ ಡೆಲ್ಲಿ ತಂಡಕ್ಕೆ ಚೆನ್ನೈ ಬೌಲರ್ಸ್ ಕಡಿವಾಣದ ಹೊರತ್ತಾಗಿಯೂ ನಾಯಕ ಡೇವಿಡ್ ವಾರ್ನರ್(86 ರನ್, 58 ಎಸೆತ, 7 ಬೌಂಡರಿ, 5 ಸಿಕ್ಸರ್) ಫಲವಾಗಿ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 146 ರನ್ಗಳಿಸಿ ಸೋಲುವ ಮೂಲಕ ಐಪಿಎಲ್ನಲ್ಲಿ ತನ್ನ ಅಭಿಯಾನವನ್ನು ಮುಗಿಸಿತ್ತು.
ಚೆನ್ನೈ ಪರ ದೀಪಕ್ ಚಹರ್(4-0-22-3), ಮಹೀಶ್ ತೀಕ್ಷ್ಣ(4-1-23-2), ಮತೀಶ ಪಥಿರಾಣಾ(4-0-22-2), ತುಷಾರ್ ದೇಶಪಾಂಡೆ(4-0-26-1), ರವೀಂದರ್ರ ಜಡೇಜಾ(4-0-50-1) ಡೆಲ್ಲಿ ಬ್ಯಾಟ್ಸ್ಮ್ಯಾನ್ಗಳಿಗೆ ಕಡಿವಾಣ ಹಾಕುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.