ಸಿನಿಮಾ

ಕಾರು​ ಖರೀದಿಸಿದ ಸಂಭ್ರಮದಲ್ಲಿ ಕುಣಿದು ಕುಪ್ಪಳಿಸಿದ ಕುಟುಂಬ; ಇದೇ ನಿಜವಾದ ಪ್ರತಿಫಲ ಎಂದ ಆನಂದ್​ ಮಹೀಂದ್ರಾ

ನವದೆಹಲಿ: ಮನುಷ್ಯ ಜೀವನದಲ್ಲಿ ಏನನಾದರೂ ಸಾಧಿಸಿದಾಗ ಅಥವಾ ನಾವು ಇಷ್ಟಪಟ್ಟ ವಸ್ತುಗಳನ್ನು ದುಡಿದು ಸಂಪಾದಿಸಿದಾಗ ಖುಷಿಗೆ ಪಾರವೇ ಇರುವುದಿಲ್ಲ.

ಇದೀಗ ಇದೇ ರೀತಿಯ ಕಥೆ ಒಂದರಲ್ಲಿ ಕುಟುಂಬವೊಂದು ಕಾರ್​ ಖರೀದಿಸಿದ ಖುಷಿಗೆ ಕುಣಿದು ಕುಪ್ಪಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ವಿಡಿಯೋದಲ್ಲಿ ಏನಿದೆ?

ಕುಟುಂಬ ಒಂದು ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್​ ಖರೀದಿಸಿದ ಖುಷಿಯಲ್ಲಿ ಕಾರ್​ ಶೋ ರೂಂನಲ್ಲೇ ಕುಣಿದು ಕುಪ್ಪಳಿಸಿ ಸಂಭ್ರಮಿಸುತ್ತಾರೆ ಮತ್ತು ಟ್ವಿಟರ್​ನಲ್ಲಿ ಈ ವಿಡಿಯೋ ವೈರಲ್​ ಆಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಉದ್ಯಮಿ ಆನಂದ್​ ಮಹೀಂದ್ರಾ ಈ ವಿಡಿಯೋವನ್ನು ಮಹೀಂದ್ರಾ ಕಂಪನಿ ಮುಖ್ಯಸ್ಥ ಆನಂದ್​ ಮಹೀಂದ್ರಾ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು ಇದು ನಿಜವಾದ ಪ್ರತಿಫಲ ಎಂದು ಅಡಿಬರಹ ನೀಡಿದ್ದಾರೆ.

Latest Posts

ಲೈಫ್‌ಸ್ಟೈಲ್