More

    ನಾರ್ಕೋಟಿಕ್ಸ್​ ಅಧಿಕಾರಿಗಳ ಸೋಗಿನಲ್ಲಿ ವೈದ್ಯೆಗೆ 4.47 ಕೋಟಿ ರೂ. ವಂಚನೆ

    ನವದೆಹಲಿ: ನಾವು ಪ್ರತಿನಿತ್ಯ ಸೈಬರ್​ ಕ್ರೈಂ/ವಂಚನೆಗಳ ಬಗ್ಗೆ ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುತ್ತೇವೆ. ಇದರ ಹೊರತ್ತಾಗಿಯೂ ಜನ ಮೋಸ ಹೋಗಿರುವುದನ್ನು ನಾವು ಕೇಳಿರುತ್ತೇವೆ.

    ಇದೀಗ ಪ್ರಕರಣ ಒಂದರಲ್ಲಿ ವೈದ್ಯರೊಬ್ಬರು ಬರೋಬ್ಬರಿ 4.47 ಕೋಟಿ ರೂಪಾಯಿ ಹಣವನ್ನು ಕಳೆದುಕೊಂಡಿದ್ದು ದೇಶದಲ್ಲೇ ನಡೆದಿರಬಹುದಾದ ದೊಡ್ಡ ಮಟ್ಟದ ಸೈಬರ್​ ವಂಚನೆ ಎಂದು ಹೇಳಲಾಗಿದೆ.

    ಅಧಿಕಾರಿ ಸೋಗಿನಲ್ಲಿ ವಂಚನೆ

    ವೃತ್ತಿಯಲ್ಲಿ ವೈದ್ಯೆಯಾಗಿರುವ 34ವರ್ಷದ ಮಹಿಳೆಗೆ ಕರೆ ಮಾಡಿದ ವಂಚಕನೋರ್ವ ತಾನು ಮಹಾರಾಷ್ಟ್ರ ಮಾದಕ ದ್ರವ್ಯ ವಿಭಾಗದ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ.

    ಬಳಿಕ ಮಹಿಳೆಗೆ ಇತ್ತೀಚಿಗೆ ತಾವು ಫೆಡ್​ಎಕ್ಸ್​ ಕೊರಿಯರ್​ನಲ್ಲಿ MDMA ಡ್ರಗ್ಸ್​ ಪತ್ತೆಯಾಗಿರುವುದಾಗಿ ಹೇಳಿದ್ಧಾನೆ. ಬಳಿಕ ಈ ಕೊರಿಯರ್​ ತನಗೆ ಸಂಬಂಧಿಸಿಲ್ಲವೆಂದು ಸಾಬೀತು ಪಡಿಸಲು ತಮ್ಮ ಬ್ಯಾಂಕ್​ ಖಾತೆ, ಐಟಿ ವಿವರ ಹಾಗೂ ಸರ್ಕಾರಿ ಗುರುತಿನ ಚೀಟಿಗಳನ್ನು ವಾಟ್ಸ್​ಆ್ಯಪ್​ ಮೂಲಕ ಕಳೆಸಲು ಸೂಚಿಸಿದ್ದಾರೆ.

    Cyber Fraud

    ಇದನ್ನೂ ಓದಿ: ಸರ್ಕಾರಿ ಕೆಲಸದ ಆಮಿಷವೊಡ್ಡಿ ಮಹಿಳೆ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ; ವಿಡಿಯೋ ಮಾಡಿ ಬೆದರಿಕೆ

    ಆ್ಯಪ್​ ಡೌನ್​ಲೋಡ್​ ಮಾಡುವಂತೆ ಸುಚನೆ

    ಆದರೆ, ವಂಚಕನ ಮಾತಿಗೆ ಕಿವಿಗೊಡದ ಮಹಿಳೆ ತನಗೆ ಸಂಬಂಧಿಸಿದ ಯಾವುದೇ ಕೊರಿಯರ್​ ಬಂದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಆನ್​ಲೈನ್​ ಮೂಲಕ ದೂರು ದಾಖಲಿಸುವಂತೆ ಹೇಳಿ ಸ್ಕೈಪ್​ ಆ್ಯಪ್​ ಡೌನಲೋಡ್​ ಮಾಡುವಂತೆ ಸೂಚಿಸಿದ್ದಾರೆ.

    ಇದನ್ನು ನಂಬಿದ ಮಹಿಳೆ ವಂಚಕರು ಹೇಳಿದಂತೆ ಆ್ಯಪ್​ ಡೌನಲೋಡ್​ ಮಾಡಿದ್ಧಾರೆ ಮತ್ತು ಪಾಟೀಲ್​ ಎಂಬ ಅಧಿಕಾರಿ ಹೆಸರಿನಲ್ಲಿ ಮಹಿಳೆ ಜೊತೆ ಮಾತನಾಡಿ ಕೊರಿಯರ್​ ತಮ್ಮಗೆ ಸಂಬಂಧಿಸಿಲ್ಲ ಎಂದರೆ ಆಧಾರ್​ ಸಂಖ್ಯೆಯನ್ನು ನೀಡುವಂತೆ ಹೇಳಿದ್ದಾರೆ.

    4.47 ಕೋಟಿ ರೂ ವಂಚನೆ

    ಬಳಿಕ ಆಧಾರ್​ ಸಂಖ್ಯೆಯನ್ನು ಪರಿಶೀಲಿಸಿದ ನಂತರ ಮುಂಬೈನಲ್ಲಿ 23 ಬ್ಯಾಂಕ್​ ಖಾತೆಗಳನ್ನು ಹೊಂದಿದ್ದು ಇದೆಲ್ಲವೂ ಅಕ್ರಮ ಹಣ ವರ್ಗಾವಣೆಗೆ ಬಳಸಿರುವುದಾಗಿ ತಿಳಿಸಿದ್ದಾರೆ. ಇದಾ ಕೆಲ ಹೊತ್ತಿನ ಬಳಿಕ ಆಕೆಗೆ ಸಂಬಂಧಿಸಿದ ಬ್ಯಾಂಕ್​ ಖಾತೆಹಾಗೂ ಠೇವಣಿಗಳ ವಿವರವನ್ನು ವಂಚಕರು ಪಡೆದಿದ್ದಾರೆ.

    ಇದಾದ ಬಳಿಕ ಮಹಿಳೆ ಹೆಸರಿನಲ್ಲಿದ್ದ ಠೇವಣಿ ಹಾಗೂ ಬ್ಯಾಂಕ್​ ಖಾತೆಗಳಲ್ಲಿ ಇದ್ದ 4.47 ಕೋಟಿ ರೂಪಾಯಿ ಹಣವನ್ನು ವಂಚಕರು ವೈದ್ಯೆಯಿಂದ ಲಪಟಾಯಿಸಿದ್ದಾರೆ. ಈ ಕುರಿತು ದೂರು ದಾಖಲಿಸಲಾಗಿದ್ದು ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts