ಮಾಂಸದ ಆಸೆಗೆ ಎಮ್ಮೆಗೆ ಗುಂಡಿಟ್ಟ ದುಷ್ಕರ್ಮಿಗಳು; ಆರೋಪಿಗಳಿಬ್ಬರ ಬಂಧನ, ಓರ್ವ ಪರಾರಿ

Police
Published on

ಹಾಸನ: ಮಾಂಸದ ಆಸೆಯಿಂದ ದುಷ್ಕರ್ಮಿಗಳು ಎಮ್ಮೆಯೊಂದನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಸಕಲೇಶಪುರದ ತಾಲ್ಲೂಕಿನ ಕ್ಯಾಮನಹಳ್ಳಿ ಗ್ರಾಮದ ಎಬಿಸಿ ಕಾಫಿ ಎಸ್ಟೇಟ್​ನಲ್ಲಿ ನಡೆದಿದೆ. 

ದಯಾನಿಧಿ ಎಂಬ ರೈತರಿಗೆ ಸೇರಿದ್ದ ಎಮ್ಮೆಯನ್ನು ಕಾನೂನು ಬಾಹಿರವಾಗಿ ಹೊಂದಿದ್ದ ಡಬಲ್ ಬ್ಯಾರಲ್ ಗನ್​ನಿಂದ ಹತ್ಯೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಮ್ಮದ್ (52) ಹಾಗೂ ಅಬ್ದುಲ್ ಖಾದರ್ (67) ಎಂಬುವರನ್ನು ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಾಂಸದ ಆಸೆಯಿಂದ ಎಮ್ಮೆಗೆ ಗುಂಡಿಟ್ಟಿರುವ ಘಟನೆ ಬೆಳಕಿಗೆ ಬರುತ್ತಿದ್ದಂತೆ ಮುಖ್ಯ ಆರೋಪಿ ಪರಾರಿಯಾಗಿದ್ದಾನೆ. ಸದ್ಯ ಇಬ್ಬರನ್ನು ಬಂಧಿಸಲಾಗಿದೆ. ತಲೆ ಮರೆಸಿಕೊಂಡಿರುವಾತನನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಹಾಸನ ಎಸ್​ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net