ಮದ್ಯ ಸಿಗದೇ ಖಿನ್ನನಾಗಿದ್ದ ಕೋವಿಡ್ ರೋಗಿಯೊಬ್ಬ ಮೂರನೇ ಮಹಡಿಯಿಂದ ಜಿಗಿದು ತಾಯಿಯ ಕಣ್ಣೇದುರೇ ಸತ್ತ

covid deaths
Published on

ಹೈದರಾಬಾದ್: ಖಿನ್ನತೆ ಬಳಲುತ್ತಿದ್ದ ಮದ್ಯವ್ಯಸನಿ ಕೋವಿಡ್ ರೋಗಿಯೊಬ್ಬ ಆಸ್ಪತ್ರೆಯ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಘಟನೆ ಆಂಧ್ರದ ಒಂಗೋಲ್‌ನ ರಾಜೀವ್ ಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ರಿಮ್ಸ್) ನಡೆದಿದೆ.

ಮೃತ ವ್ಯಕ್ತಿ ಮರ್ಕಪುರಂನ ದಾರಿಮಡುಗು ಗ್ರಾಮದ ನಿವಾಸಿ. ಆಗಸ್ಟ್ 8 ರಂದು ಅವರನ್ನು ಆಸ್ಪತ್ರೆಯ ಅಪಘಾತ ವಾರ್ಡ್‌ಗೆ ದಾಖಲಿಸಲಾಗಿತ್ತು.

ಅಲ್ಲಿಂದ ಬೇರೆ ವಾರ್ಡ್​​ಗೆ ಸ್ಥಳಾಂತರಗೊಳ್ಳುತ್ತಿದ್ದಾಗ ಆಸ್ಪತ್ರೆಯ ಮೂರನೇ ಮಹಡಿಯಿಂದ ಹಾರಿದ.

ಸ್ಥಳಾಂತರಗೊಳಿಸುತ್ತಿದ್ದಾಗ ವ್ಯಕ್ತಿಯು ಸ್ಟ್ರೆಚರ್ ಮೇಲೆ ಮಲಗಿದ್ದನು ಮತ್ತು ಆಸ್ಪತ್ರೆಯ ಸಿಬ್ಬಂದಿ ಅವನನ್ನು ಸುತ್ತುವರೆದಿದ್ದರು. ಈ ಸಮಯದಲ್ಲಿ, ಆತ ಸ್ಟ್ರೇಚರ್​​ನಿಂದ ಇಳಿದು ಮೂರನೇ ಮಹಡಿಯಿಂದ ಜಿಗಿದು ಸಾವನ್ನಪ್ಪಿದ್ದಾನೆ.

ಆ ವ್ಯಕ್ತಿಯ ತಾಯಿ ಕೂಡ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಗನಿಗೆ ಸೋಂಕು ದೃಢಪಟ್ಟ ಹಿನ್ನೆಲೆ ಆಕೆ ಪರೀಕ್ಷೆಗೆ ಬಂದಾಗ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸಾವಿಗೀಡಾದ ವ್ಯಕ್ತಿ ಮಾನಸಿಕ ಒತ್ತಡ ಹಾಗೂ ಖಿನ್ನತೆಯಿಂದ ಬಳಲುತ್ತಿದ್ದು, ಐಸೋಲೇಷನ್ ವಾರ್ಡ್‌ನಲ್ಲಿದ್ದಾಗ ಸ್ಯಾನಿಟೈಸರ್ ಸೇವಿಸಲು ಯತ್ನಿಸಿದ್ದ ಎಂದು ಆಸ್ಪತ್ರೆಯ ಸಿಬ್ಬಂದಿ ಆರೋಪಿಸಿದ್ದಾರೆ.

ಅವನು ಮದ್ಯ ವ್ಯವಸನಿಯಾಗಿದ್ದ ಮತ್ತು ಆತ ಅನಾರೋಗ್ಯ ಪೀಡಿತನಾಗಿದ್ದ ಎಂದು ಆತನ ತಾಯಿ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ, ಆತ ವಿವಾಹಿತನಾಗಿದ್ದರೂ ಮದ್ಯದ ಚಟದಿಂದಾಗಿ ಕುಟುಂಬವನ್ನು ನೋಡಿಕೊಳ್ಳುತ್ತಿರಲಿಲ್ಲ. ಹಳ್ಳಿಯ ಸುತ್ತಮುತ್ತಲ ಪ್ರದೇಶಗಳಲ್ಲಿ ಮದ್ಯ ಲಭ್ಯವಿಲ್ಲದಿರುವುದು ಆತನ ಖಿನ್ನತೆಗೆ ಒಂದು ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net