ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿ ನಟ ದರ್ಶನ್ ಗೆಳತಿ ಪವಿತ್ರಾ ಗೌಡ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯ ತೀರ್ಪನ್ನು ಕೋರ್ಟ್ ಆಗಸ್ಟ್ 31ಕ್ಕೆ ಮುಂದೂಡಿದೆ.
ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪವಿತ್ರಾ ಗೌಡ ಪರ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್ ಜಾಮೀನು ಅರ್ಜಿ ಸಲ್ಲಿಸಿದ್ದು, ಸಿಸಿಎಚ್ 57 ರಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆದಿದೆ.
ನಿನ್ನೆ (ಆಗಸ್ಟ್ 27) ನಡೆದ ಜಾಮೀನು ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ಕೋರ್ಟ್ ಎಸ್ಪಿಪಿ ಪ್ರಸನ್ನ ಕುಮಾರ್ ಅವರಿಗೆ ವಾದ ಮಂಡಿಸುವಂತೆ ಸೂಚಿಸಿತ್ತು. ಅದರಂತೆ ಇಂದು (ಆಗಸ್ಟ್ 28) ವಾದ ಮಂಡಿಸಿದ ಪ್ರಸನ್ನ ಕುಮಾರ್ ಜಾಮೀನು ನೀಡಬಾರದು ಎನ್ನುವುದಕ್ಕೆ ಕಾರಣಗಳನ್ನೂ ನೀಡಿದ್ದಾರೆ.
ಇದನ್ನೂ ಓದಿ: ಭಾರತದಲ್ಲೂ ಜನರು ಪ್ರಧಾನಿ ಮೋದಿ ಮನೆಗೆ ನುಗ್ಗುವ ದಿನ ದೂರವಿಲ್ಲ: ಕಾಂಗ್ರೆಸ್ ಶಾಸಕ ಜಿ. ಎಸ್. ಪಾಟೀಲ್
ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದು ಶೆಡ್ಗೆ ಬಂದವರ ಎಲ್ಲರ ಗುರುತು ಪತ್ತೆಯಾಗಿದ್ದು, ಶೆಡ್ನ ವಾಚ್ಮ್ಯಾನ್ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ಆತ ಎಲ್ಲರನ್ನು ಗುರುತು ಪತ್ತೆ ಮಾಡಿದ್ದಾನೆ. FSL ವರದಿ ಕೂಡ ತನಿಖಾ ತಂಡದ ಕೈ ಸೇರಿದ್ದು, ಆರೋಪಿಗಳು ಭಾಗಿಯಾಗಿರುವ ಬಗ್ಗೆ ಸಾಕ್ಇಗಳು ದೊರೆತಿವೆ. ಸ್ಕಾರ್ಫಿಯೋ ಕಾರಿನಲ್ಲಿ ದರ್ಶನ್ , ಪವಿತ್ರಾ ಶೆಡ್ ಗೆ ಬಂದಿರುವುದು ಕೂಡಾ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ ಎನ್ನಲಾಗಿದೆ. ತನಿಖೆ ಇನ್ನೂ ಪ್ರಗತಿಯಲ್ಲಿದೆ. ಆರೋಪಿಗಳು ಕೃತ್ಯ ನಡೆಸಿರೋದು ಬಯಲಾಗಿದೆ.
ಪವಿತ್ರಾ ಗೌಡ ಕೇವಲ ಮಹಿಳೆ ಅನ್ನೋ ಕಾರಣಕ್ಕೆ ಜಾಮೀನು ನೀಡಲು ಅಗಲ್ಲ. ಆಕೆ ಕೃತ್ಯದಲ್ಲಿ ಭಾಗಿಯಾಗಿರೋ ಬಗ್ಗೆ ಸಾಕಷ್ಟು ಸಾಕ್ಷ್ಯಗಳು ಇವೆ. ಮಹಿಳೆಯರು ಕೂಡ ಘೋರ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಅನೇಕ ನಿದರ್ಶನಗಳು ನಮ್ಮ ಮುಂದಿವೆ. ಅದೇ ರೀತಿ ಈ ಕೇಸ್ ಕೂಡ ತುಂಬಾ ಗಂಭೀರವಾದ ಪ್ರಮಾಣದ್ದಾಗಿದೆ ಎಂದು ಎಸ್ಪಿಪಿ ಪ್ರಸನ್ನಕುಮಾರ್ ಆಕ್ಷೇಪಣೆ ಸಲ್ಲಿಸಿದ್ದಾರೆ.
ವಾದ-ಪ್ರತಿವಾದವನ್ನು ಸುದೀರ್ಘವಾಗಿ ಆಲಿಸಿದ ನ್ಯಾಯಾಧೀಶರು ತೀರ್ಪನ್ನು ಆಗಸ್ಟ್ 31ಕ್ಕೆ ಕಾಯ್ದಿರಿಸಿದ್ದು, ಪವಿತ್ರಾಗ ಜೈಲಾ-ಬೇಲಾ ಎಂದು ಕಾದು ನೋಡಬೇಕಿದೆ.