VIDEO| ವೀಲಿಂಗ್​ ಮಾಡುವಾಗ ಕೆಳಗೆ ಬಿದ್ದ ಜೋಡಿ; ಪೊಲೀಸರು ಮಾಡಿದ ಜನಜಾಗೃತಿಗೆ ನೆಟ್ಟಿಗರು ಫಿದಾ

Bike Wheeling
Published on

ನವದೆಹಲಿ: ಜೋಡಿಗಳಿಬ್ಬರು ಜನನಿಬಿಡ ಪ್ರದೇಶದಲ್ಲಿ ಅಪಾಯಕಾರಿ ವೀಲಿಂಗ್​ ಮಾಡುತ್ತ ಗಂಭೀರವಾಗಿ ಗಾಯಗೊಮಡಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಪೊಲೀಸರು ಈ ವಿಡಿಯೋವನ್ನು ಹಂಚಿಕೊಂಡಿದ್ಧಾರೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಜೋಡಿಗಳಿಬ್ಬರು ವೀಲಿಂಗ್​ ಮಾಡುತ್ತ ಚಲಿಸುತ್ತಿರುವುದು ಕಂಡು ರುತ್ತದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಇಬ್ಬರು ಕೆಳಗೆ ಬಿದ್ದು ಗಂಭೀರವಾಗಿ ಗಾಯಮಾಡಿಕೊಳ್ಳುತ್ತಾರೆ. ಈ ವಿಡಿಯೋವನ್ನು ದೆಹಲಿ ಪೊಲೀಸರು ಟ್ವೀಟ್​ ಮಾಡಿದ್ದು, ಜನಪ್ರಿಯ ಹಿಂದಿ ಹಾಡೊಂದನ್ನು ಬಳಸಿಕೊಂಡಿದೆ.

ಅಪಾಯಕಾರಿ ವಾಹನ ಚಾಲನೆ ಕುರಿತು ದೆಹಲಿ ಪೊಲೀಸರು ಅನುಸರಿಸಿರುವ ಮಾರ್ಗದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ನೆಟ್ಟಿಗರು ಈ ರೀತಿ ಮಾಡುವವರನ್ನು ಜೈಲಿಗೆ ಹಾಕಬೇಕು ಎಂದು ಆಗ್ರಹಿಸಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net