VIDEO| ಸಿಎಂ ವಿರುದ್ಧ ಪೋನ್​ಪೇ ಅಭಿಯಾನ ಆರಂಭಿಸಿ ಪೇಚಿಗೆ ಸಿಲುಕಿದ ಕಾಂಗ್ರೆಸ್​

Phone Pe Poster
Published on

ಭೋಪಾಲ್​: ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿರುವ ಮಧ್ಯಪ್ರದೇಶದಲ್ಲಿ ರಾಜಕೀಯ ಚಟುವಟಿಕೆ ರಂಗೇರಿದ್ದು, ಆಡಳಿತರೂಢ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್​ ನಡುವೆ ಆರೋಪ-ಪ್ರತ್ಯಾರೋಪಗಳು ಜೋರಾಗಿ ನಡೆಯುತ್ತಿವೆ.

ಆಡಳಿತರೂಢ ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್​ ಪಕ್ಷ ಪೇಚಿಗೆ ಸಿಲುಕಿದ್ದು, ಕಾನೂನು ಕ್ರಮವನ್ನು ಎದುರಿಸುವ ಭೀತಿಯಲ್ಲಿದೆ. ಕರ್ನಾಟಕದಲ್ಲಿ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್​ ಪೇಸಿಎಂ ಅಭಿಯಾನ ಮಾಡಿದಂತೆ ಮಧ್ಯಪ್ರದೇಶದಲ್ಲಿ ಪೋನ್ ಪೇನಲ್ಲಿ ಹೆಸರಿನಲ್ಲಿ ಬಿಜೆಪಿ ವಿರುದ್ಧ ಸಮರ ಸಾರಿದೆ.

ಏನಿದು ಪೋನ್​ ಪೇ ಅಭಿಯಾನ

ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್​ ಹಾಗೂ ಬಿಜೆಪಿ ನಡುವೆ ಪೋಸ್ಟರ್​ ಸಮರ ಜೋರಾಗಿ ನಡೆಯುತ್ತಿದ್ದು, ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ರನ್ನು ಗುರಿಯಾಗಿಸಿ ಪೋನ್​ಪೇ ಲೋಗೋ(ಚಿಹ್ನೆ) ಇರುವ ಭಿತ್ತಿಪತ್ರಗಳನ್ನು ರಾಜ್ಯದಾದ್ಯಂತ ಅಂಟಿಸಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್​ ಪಕ್ಷಕ್ಕೆ ಕಾನೂನು ಕ್ರಮದ ಎಚಚ್ರಿಕೆಯನ್ನು ನೀಡಲಾಗಿದೆ.

ಪೋಸ್ಟರ್​ನಲ್ಲಿ ಪೋನ್​ಪೇ ಲೋಗೋ ಬಳಸಿರುವುದನ್ನು ಖಂಡಿಸಿರುವ ಕಂಪನಿಯೂ ರಾಜಕೀಯ ಅಥವಾ ರಜಕೀಯೇತರಕ್ಕೆ ಸಂಬಂಧಿಸಿದ ಮೂರನೇ ವ್ಯಕ್ತಿಯಿಂದ ಬ್ರ್ಯಾಂಟ್​ನ ಚಿಹ್ನೆಯನ್ನು ಬಳುಸುವುದನ್ನು ಆಕ್ಷೇಪಿಸಲಾಗಿದೆ. ನಿಗದಿತ ಅವಧಿಯೊಳಗೆ ಪೋಸ್ಟರ್​ಗಳನ್ನು ತೆರವುಗೊಳಿಸದಿದ್ದರೆ ಕಾನೂನು ಕ್ರಮವನ್ನು ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಪೋನಗ್​ಪೇ ಚಿಹ್ನೆಯೂ ಕಂಪನಿಯ ನೋಂದಾಯಿತ ಟ್ರೇಡ್​ ಮಾರ್ಕ್​ ಆಗಿದ್ದು, ಅನಧಿಕೃತವಾಗಿ ಬಳಸಿದ್ದಲ್ಲಿ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ. ನಾವು ಮಧ್ಯಪ್ರದೇಶ ಕಾಂಗ್ರೆಸ್​ಅನ್ನು ಈ ಮೂಲಕ ಕೇಳುವುದೇನೆಂದರೆ ನಿಗದಿತ ಅವಧಿಯೊಳಗೆ ಪೋಸ್ಟರ್​ಗಳನ್ನು ತೆಗೆದು ಹಾಕಿ ಎಂದು ಟ್ವೀಟ್​ ಮಾಡಿ ಪ್ರತಿಕ್ರಿಯಿಸಿದೆ.

ಹೊಲಸು ರಾಜಕೀಯ

ಪೋನ್​ಪೇ ಅಭಿಯಾನದ ಕುರಿತು ಪ್ರತಿಕ್ರಿಯಿಸಿರುವ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್​ ಮಿಶ್ರಾ ಕಾಂಗ್ರೆಸ್​ ಈ ರೀತಿಯ ಹೊಲಸು ರಾಜಕೀಯ ಮಾಡುತ್ತದೆ ಎಂದುಕೊಂಡಿರಲಿಲ್ಲ. ಜನತೆಗೆ ಗೊತ್ತಿದೆ ಅವರ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್​ನವರು ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದ್ದಾರೆಂದು.

ಈ ಸಂಬಂಧ FIR ದಾಖಲಾಗಿದ್ದು, ಕಾಂಗ್ರೆಸ್​ ನಾಯಕರ ವಿರುದ್ಧ ಕಠಿಣ ಕ್ರಮವನ್ನು ಜರುಗಿಸಲಾಗುವುದು ಎಂದು ಗೃಹ ಸಚಿವ ನರೋತ್ತಮ್​ ಮಿಶ್ರಾ ತಿಳಿಸಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net