More

    ಉಪ್ಪುನೀರಿನಲ್ಲಿ ಬಾಯಿ ಮುಕ್ಕಳಿಸಿದ್ರೆ ಕರೊನಾ ದೂರಾಗುತ್ತಾ?

    ಕೋವಿಡ್​ 19 ಸೋಂಕು ತಡೆಯುವುದಕ್ಕೆ ನಾನಾ ರೀತಿಯ ಪ್ರಯತ್ನಗಳು ನಡೆದಿವೆ. ಇದರಲ್ಲಿ ರೋಗ ಪ್ರತಿರೋಧ ಶಕ್ತಿ ಹೆಚ್ಚಿಸುವ ಪ್ರಯತ್ನದಲ್ಲಿ ಉಪ್ಪು ನೀರು ಬಳಕೆಯೂ ಒಂದು. ನಮ್ಮ ದೇಶದಲ್ಲಿ ಈಗಾಗಲೇ ಅನೇಕರು, ಲಿಂಬೆ ರಸ ಮತ್ತು ಉಪ್ಪು ಮಿಶ್ರಿತ ನೀರನ್ನು ಕುಡಿಯುವುದು, ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸಿ, ಗಂಟಲು ಸ್ವಚ್ಛಗೊಳಿಸುವ ಕಾರ್ಯ ಮಾಡುತ್ತಿದ್ದಾರೆ. ಈ ಪ್ರಯತ್ನ ಈಗ ಜಗತ್ತಿನ ಗಮನಸೆಳೆದಿದ್ದು, ಕೋವಿಡ್​ 19 ಸೋಂಕು ತಡೆಯುವ ನಿಟ್ಟಿನಲ್ಲಿ ಉಪ್ಪು ನೀರು ರಾಮಬಾಣವಾ ಎಂಬ ಪ್ರಶ್ನೆಯೊಂದಿಗೆ ಒಂದು ಅಧ್ಯಯನವೇ ಶುರುವಾಗಿದೆ.

    ಜನರ ನಂಬಿಕೆ ನೋಡಿ ಸೈಂಟಿಸ್ಟ್​ಗಳಿಗೆ ಎಲ್ಲಿಲ್ಲದ ಕುತೂಹಲ. ಹೀಗಾಗಿ ಎಡಿನ್​ಬರ್ಗ್​ ಯೂನಿವರ್ಸಿಟಿಯ ಪರಿಣತರ ತಂಡ ಈ ಕುರಿತು ಅಧ್ಯಯನ ನಡೆಸುವುದಕ್ಕೆ ಮುಂದಾಗಿದೆ. ಈ ಅಧ್ಯಯನದಲ್ಲಿ ಭಾಗಿಯಾಗಲು ಸಾರ್ವಜನಿಕರನ್ನು ಕೋರಿಕೊಂಡಿದೆ ಕೂಡ. ಬ್ರಿಟನ್​ನಲ್ಲಿ ಕೋವಿಡ್​ 19 ಸೋಂಕು ತಡೆಗೆ ಎನ್​ಎಚ್​ಎಸ್​ ಈಗಾಗಲೇ ಎರಡು ಆ್ಯಂಟಿ ವೈರಲ್​ ಔಷಧಗಳೆಂದು ಸ್ಟಿರೋಯ್ಡ್​ ಡೆಕ್ಸಾಮೀಥಾಸೋನ್​ ಮತ್ತು ಆ್ಯಂಟಿ ಎಬೋಲಾ ಡ್ರಗ್​ ರೆಮ್ಡೆಸಿವಿರ್​ ಅನ್ನು ಬಳಸಲು ಒಪ್ಪಿಗೆ ನೀಡಿದೆ. ಆದಾಗ್ಯೂ ಈ ಔಷಧಗಳಿಂದ ರೋಗ ವಾಸಿಯಾಗುತ್ತದೆ ಎಂಬ ಭರವಸೆ ಇಲ್ಲ.

    ಇದನ್ನೂ ಓದಿ: ಜೈಲಲ್ಲೇ ಯೂಸುಫ್ ಮೆಮೋನ್ ಸಾವು: 1993 ಮುಂಬೈ ಸರಣಿ ಸ್ಪೋಟದ ಅಪರಾಧಿ

    ಮೈಲ್ಡ್​ ಆಗಿ ರೋಗ ಲಕ್ಷಣ ಇರುವಂಥವರಿಗೆ ಉಪ್ಪುನೀರಿನಲ್ಲಿ ಬಾಯಿ ಮುಕ್ಕಳಿಸಿ, ಗಂಟಲು ಸ್ವಚ್ಛಗೊಳಿಸುವ ಸಲಹೆಯನ್ನು ಅಲ್ಲಿನ ಸೈಂಟಿಸ್ಟ್​ಗಳು ಈಗ ನೀಡಲಾರಂಭಿಸಿದ್ದಾರೆ. ಇದರ ಪರಿಣಾಮ ಏನೆಂಬುದನ್ನು ಅರಿಯುವ ಪ್ರಯತ್ನವನ್ನೂ ಅವರು ಮಾಡಿದ್ದಾರೆ. ಈ ಅಧ್ಯಯನಕ್ಕೆ ಎಡಿನ್​​ಬರ್ಗ್​ ಆ್ಯಂಡ್​ ಲೊಥಿಯಾನ್ಸ್​ ವೈರಲ್ ಇಂಟರ್​ವೆನ್ಶನ್​ ಸ್ಟಡಿ (ಇಎಲ್​ವಿಐಎಸ್​) ಎಂದು ಹೆಸರಿಡಲಾಗಿದೆ. ಕಳೆದ ವರ್ಷ ನಡೆಸಿದ ಇದೇ ಮಾದರಿ ಅಧ್ಯಯನದಲ್ಲಿ ಈ ಪ್ರಯೋಗ ಮಾಡಿದವರಲ್ಲಿ ಕಫ, ಕೆಮ್ಮು ಮತ್ತು ನೆಗಡಿ ಎಲ್ಲವೂ ಕಡಿಮೆ ಇತ್ತು. ಅಲ್ಲದೆ ರಕ್ಷಸಂಚಯವೂ ಕಡಿಮೆ ಇತ್ತು. (ಏಜೆನ್ಸೀಸ್)

    ಒಳಚರಂಡಿಯಲ್ಲೂ ಕರೊನಾ ವೈರಸ್ ಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts