More

    ಒಳಚರಂಡಿಯಲ್ಲೂ ಕರೊನಾ ವೈರಸ್ ಪತ್ತೆ!

    ಅಹಮದಾಬಾದ್​: ದೇಶಾದ್ಯಂತ ದಿನೇದಿನೇ ಹೆಚ್ಚುತ್ತಿರುವ ಕೊರನಾ ಸೋಂಕಿನ ಆತಂಕದ ನಡುವೆ ಇನ್ನೊಂದು ಕಳವಳಕಾರಿ ಸುದ್ದಿ ಬಹಿರಂಗವಾಗಿದೆ. ಗುಜರಾತ್​ನ ಒಳಚರಂಡಿ ನೀರಿನ ಸ್ಯಾಂಪಲ್​ಗಳನ್ನು ಪರಿಶೀಲನೆಗೊಳಪಡಿಸಿದಾಗ ಕರೊನಾ ವೈರಸ್​ ಇರುವಿಕೆ ಪತ್ತೆಯಾಗಿದೆ!

    ಸಾರ್ಸ್​ ಸಿಒವಿ-2 ವೈರಸ್​ಗಳು ಗುಜರಾತ್​ನ ಒಳಚರಂಡಿ ಸ್ಯಾಂಪಲ್​ನಲ್ಲಿ ಕಂಡುಬಂದಿದ್ದು, ಆತಂಕ ಸೃಷ್ಟಿಸಿದೆ. ಇದೇ ವೈರಸ್​ಗಳು ಕೋವಿಡ್ 19 ಸೋಂಕಿಗೆ ಕಾರಣವಾಗಿರುವಂಥದ್ದು. ಕೇಂದ್ರ ಸರ್ಕಾರದ ಆದೇಶ ಪ್ರಕಾರ ಸೋಂಕು ಹರಡದಂತೆ ತಡೆಯಲು ತೀವ್ರ ನಿಗಾವಹಿಸಲು ಎಲ್ಲ ರಾಜ್ಯ ಸರ್ಕಾರಗಳೂ ಮುಂದಾಗಿವೆ. ಇದರೊಂದಿಗೆ ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್​(ಎನ್​ಸಿಡಿಸಿ) ಎಲ್ಲಡೆ ಒಳಚರಂಡಿಗಳ ಕಲುಷಿತ ನೀರಿನ ಸ್ಯಾಂಪಲ್​ಗಳನ್ನು ಲ್ಯಾಬ್​ಗೆ ತರಿಸಿಕೊಂಡು ಪರಿಶೀಲನೆ ನಡೆಸಲಾರಂಭಿಸಿದೆ. ಇದರ ಫಲಿತಾಂಶದಲ್ಲಿ ಗುಜರಾತ್​ನ ಒಳಚರಂಡಿಯಲ್ಲಿ ವೈರಸ್​ ಇರುವಿಕೆ ದೃಢಪಟ್ಟಿದೆ.

    ಇದನ್ನೂ ಓದಿ: ಅಂತಾರಾಷ್ಟ್ರೀಯ ವಿಮಾನ ಹಾರಾಟ ಜುಲೈ 15 ರ ತನಕ ಇಲ್ಲ

    ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ಸೋಂಕು ಹರಡುವ ಮೂಲಗಳನ್ನು ಪತ್ತೆಹಚ್ಚುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ. ಇದೇ ಕಾರಣಕ್ಕೆ ಒಳಚರಂಡಿ ನೀರನ್ನು ಪರಿಶೀಲನೆಗೊಳಪಡಿಸುವ ಚಿಂತನೆ ಹುಟ್ಟಿಕೊಂಡಿತ್ತು. ಈಗ ಗುಜರಾತ್​ನ ಒಳಚರಂಡಿಯಲ್ಲಿ ವೈರಸ್ ಕಂಡುಬಂದ ಕಾರಣ ಈಗ ಉಳಿದ ರಾಜ್ಯಗಳಲ್ಲೂ ಈ ಬಗ್ಗೆ ನಿಗಾವಹಿಸಲು ಸರ್ಕಾರ ಸೂಚನೆ ನೀಡಲಿದೆ. ಎನ್​ಸಿಡಿಸಿ ಕೂಡ ಉಳಿದ ರಾಜ್ಯಗಳ ಒಳಚರಂಡಿ ನೀರುಗಳ ತಪಾಸಣೆ ಮುಂದುವರಿಸಲಿದೆ. ವಿಶ್ವ ಆರೋಗ್ಯ ಸಂಸ್ಥೆಯೂ ಈ ಬಗ್ಗೆ ಸಲಹೆಗಳನ್ನು ನೀಡಿದ್ದು, ನಿಯತವಾಗಿ ಒಳಚರಂಡಿಗಳ ನೀರನ್ನು ಪರಿಶೀಲನೆಗೊಳಪಡಿಸುವಂತೆ ಹೇಳಿದೆ. ವೈರಸ್ ಪತ್ತೆಯಾದರೆ ಅವುಗಳ ನಾಶಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದಿದೆ.

    ಬಯಲು ಶೌಚಕ್ಕೆ ಹೋಗುವವರು ಇನ್ನೂ ಎಚ್ಚರದಿಂದ ಇರಬೇಕಾಗುತ್ತದೆ. ಅದೇ ರೀತಿ ಶೌಚಗೃಹ ಬಳಸುವವರೂ ಹೆಚ್ಚಿನ ಶುಚಿತ್ವದ ಕಡೆಗೆ ಗಮನಹರಿಸಬೇಕು. ಇಲ್ಲದಿದ್ದರೆ ವೈರಸ್​ ದಾಳಿಗೆ ಈಡಾಗುವುದು ಖಚಿತ ಎಂದು ಅಧಿಕಾರಿಗಳು, ಪರಿಣತರು ಎಚ್ಚರಿಸಿದ್ದಾರೆ. (ಏಜೆನ್ಸೀಸ್)

    2000ದ ಸನಿಹದಲ್ಲಿದೆ ಬೆಂಗಳೂರಿನಲ್ಲಿ ಕೋವಿಡ್​ ಕೇಸ್​: ರಾಜ್ಯದಲ್ಲಿ 445 ಹೊಸ ಕೇಸ್​ ದೃಢ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts