More

    ಅಂತಾರಾಷ್ಟ್ರೀಯ ವಿಮಾನ ಹಾರಾಟ ಜುಲೈ 15 ರ ತನಕ ಇಲ್ಲ

    ನವದೆಹಲಿ: ಕರೊನಾ ಸೋಂಕು ಹರಡುವಿಕೆ ಪ್ರಮಾಣ ತೀವ್ರಗೊಂಡ ಬೆನ್ನಿಗೆ ಅಂತಾರಾಷ್ಟ್ರೀಯ ವಿಮಾನ ಹಾರಾಟ ಇನ್ನೂ 20 ದಿನಗಳ ಇರಲ್ಲ ಎಂದು ಕೇಂದ್ರ ಸರ್ಕಾರ ಶುಕ್ರವಾರ ಘೋಷಿಸಿದೆ. ನಾಗರಿಕ ವಿಮಾನ ಯಾನ ಕಚೇರಿಯ ಡೈರೆಕ್ಟರ್​ ಜನರಲ್ ಪ್ರಕಟಿಸಿರುವ ಸುತ್ತೋಲೆ ಪ್ರಕಾರ, ಇಂಟರ್​ನ್ಯಾಷನಲ್ ಕಮರ್ಷಿಯಲ್ ಪ್ಯಾಸೆಂಜರ್​ ಫ್ಲೈಟ್​ಗಳ ಹಾರಾಟವನ್ನು ಜುಲೈ 15ರ ಮಧ್ಯರಾತ್ರಿ ತನಕ ಅಮಾನತುಗೊಳಿಸಲಾಗಿದೆ.

    ಈ ಆದೇಶಕ್ಕೆ ಸಂಬಂಧಿಸಿ ಸ್ಪಷ್ಟೀಕರಣವನ್ನೂ ಪ್ರಕಟಿಸಿರುವ ಇಲಾಖೆ, ಸದರಿ ಆದೇಶ ಕೇವಲ ಪ್ರಯಾಣಿಕ ವಿಮಾನಗಳಿಗೆ ಮಾತ್ರವೇ ಅನ್ವಯ. ಎಲ್ಲ ರೀತಿಯ ಕಾರ್ಗೊ ವಿಮಾನಗಳು ಎಂದಿನಂತೆಯೇ ಹಾರಾಟ ಮುಂದುವರಿಸಲಿವೆ ಎಂದು ಹೇಳಿದೆ.

    ಇದನ್ನೂ ಓದಿ: ಬೆಳಗ್ಗೆ ನಡೆಯಬೇಕಿದ್ದ ಮದುವೆ ರಾತ್ರೋರಾತ್ರಿ ರದ್ದು, ವಧು-ವರ ಒಂದಾಗುವ ಕ್ಷಣಕ್ಕೆ ಭಂಗ ತಂದಿದ್ದೇನು?

    ಪ್ರಯಾಣಿಕ ವಿಮಾನ ಹಾರಾಟದ ನಿರ್ಬಂಧವನ್ನು ಕೆಲವು ಮಾರ್ಗಗಳಲ್ಲಿ ಸಡಿಲಿಸಲಾಗಿದೆ. ಈ ಸಂಬಂಧದ ನಿರ್ಧಾರವನ್ನು ಆಯಾ ಅಧಿಕಾರಿಗಳು ಸಮಯ ಸಂದರ್ಭಕ್ಕೆ ತಕ್ಕಂತೆ ವಿವೇಚನಾಯುಕ್ತವಾಗಿ ತೆಗೆದುಕೊಳ್ಳಲಿದ್ದಾರೆ ಎಂದು ಸುತ್ತೋಲೆ ತಿಳಿಸಿದೆ. (ಏಜೆನ್ಸೀಸ್)

    ಥೂ, ಇವರೆಂಥ ಜನ! ಕರೊನಾ ಇಲ್ಲದಿದ್ರೂ ಪುಟ್ಟಕಂದನಿಗೆ ಹೀಗಾ ಮಾಡೋದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts