More

    ಬೆಳಗ್ಗೆ ನಡೆಯಬೇಕಿದ್ದ ಮದುವೆ ರಾತ್ರೋರಾತ್ರಿ ರದ್ದು, ವಧು-ವರ ಒಂದಾಗುವ ಕ್ಷಣಕ್ಕೆ ಭಂಗ ತಂದಿದ್ದೇನು?

    ಬಾಗಲಕೋಟೆ: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಂದು ಬೆಳಗ್ಗೆ ಬಳ್ಳಾರಿಯ ಗುಳೇದಗುಡ್ಡದಲ್ಲಿ ಮದುವೆ ಸಂಭ್ರಮ ಕಳೆಗಟ್ಟುತ್ತಿತ್ತು, ವಧು-ವರ ಇಬ್ಬರೂ ಇಷ್ಟೊತ್ತಿಗೆ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಡಬೇಕಿತ್ತು. ಅಷ್ಟರಲ್ಲಿ ಆವರಿಸಿದ ಕರೊನಾ ಛಾಯೆ ಎಲ್ಲವನ್ನೂ ಹಾಳುಮಾಡಿದೆ.

    ಬಳ್ಳಾರಿ ಯುವಕನ ಜೊತೆ ಗುಳೇದಗುಡ್ಡದ ಯುವತಿಯ ಮದುವೆ ಇಂದು ನಿಶ್ಚಯವಾಗಿತ್ತು. ಇತ್ತ ಮದುಮಗ ಹಾಗೂ ಸಂಬಂಧಿಕರು ಬಳ್ಳಾರಿಯಿಂದ ಬಸ್​ ಮಾಡಿಕೊಂಡು ಗುರುವಾರ ರಾತ್ರಿಯೇ ವಧುವಿನ ಊರಿಗೆ ಬಂದಿದ್ದರು. ಶುಕ್ರವಾರ ಬೆಳಗ್ಗೆ ಮೂಹೂರ್ತ ನೆರವೇರಬೇಕಿತ್ತು. ಅಷ್ಟರಲ್ಲಿ ವರನ ತಾಯಿಗೆ ಕರೊನಾ ಪಾಸಿಟಿವ್​ ಇದೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ರಾತ್ರಿಯೇ ಗ್ರಾಮಕ್ಕೆ ಭೇಟಿ ನೀಡಿದ ತಾಲೂಕು ಆಡಳಿತ ಸಿಬ್ಬಂದಿ, ಮದುವೆ ರದ್ದು ಮಾಡಿ ಸಂಬಂಧಿಕರನ್ನು ವಾಪಸ್​ ಕಳಿಸಿದರು. ಇದನ್ನೂ ಓದಿರಿ ಗರ್ಭಿಣಿಗೆ ಕರೊನಾ ಇಲ್ಲದಿದ್ದರೂ ಇದೆ ಅಂದ್ರು… 6 ದಿನದ ಹಸುಗೂಸನ್ನೇ ಬಲಿ ಪಡೆದ್ರು!

    ವರನ ತಾಯಿ ಬಳ್ಳಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಳೇದಗುಡ್ಡದ ಮರಡಿಮಠದ ಸಮೀಪ ಇರುವ ವದುವಿನ ಸ್ವಗೃಹದಲ್ಲಿ ಮದುವೆ ನಡೆಯಲಿದ್ದ ಪ್ರದೇಶವನ್ನು ಸ್ಯಾನಿಟೈಸ್​ ಮಾಡಲಾಗಿದೆ. ಸ್ಥಳಕ್ಕೆ ಬಾಗಲಕೋಟೆ ಉಪವಿಭಾಗಾಧಿಕಾರಿ ಗಂಗಪ್ಪ ಸೇರಿ ಅಧಿಕಾರಿಗಳು ಭೇಟಿ ನೀಡಿದ್ದರು. ನೂರಾರು ಕನಸುಹೊತ್ತು ಸಪ್ತಪದಿಗೆ ಹೆಜ್ಜೆ ಹಾಕುವ ಸಂಭ್ರಮದ ಕ್ಷಣಕ್ಕೂ ಕರೊನಾ ಭೀತಿ ಅಡ್ಡಿಪಡಿಸಿದೆ.

    ಕೋವಿಡ್​ನಿಂದ ದೇಶದಲ್ಲಿ ಲಕ್ಷಾಂತರ ಜನರೇನೂ ಸತ್ತಿಲ್ಲ… ಲಾಕ್​ಡೌನ್​ ಬೇಡ: ಪ್ರತಾಪ್​ಸಿಂಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts