More

    ಮಹಿಳೆಯರು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು

    ಕೊಪ್ಪ: ಸಮಾಜದ ಯಾವುದೇ ಮೂಲೆಯಲ್ಲಿ ಹೆಣ್ಣಿಗೆ ಅನ್ಯಾಯವಾದಾಗ ಎಲ್ಲ ಮಹಿಳೆಯರೂ ಒಂದಾಗಿ ಅನ್ಯಾಯದ ವಿರುದ್ಧ ಹೋರಾಟ ನಡೆಸಬೇಕು ಎಂದು ಎನ್.ಆರ್.ಪುರ ಶಾಶ್ವತಿ ಮಹಿಳಾ ಸಂಘದ ಅಧ್ಯಕ್ಷೆ ಶ್ಯಾಮಲಾ ಸತೀಶ್ ತಿಳಿಸಿದರು.

    ಗುರುವಾರ ಒಕ್ಕಲಿಗರ ಮಹಿಳಾ ಸಂಘದಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪುರಾಣಗಳಲ್ಲಿ ಹೆಣ್ಣನ್ನು ತ್ಯಾಗಮಯಿ, ಶಾಂತಿ, ಸಹಬಾಳ್ವೆಯ ಪ್ರತೀಕವಾಗಿ ವರ್ಣಿಸಿದ್ದಾರೆ. 21ನೇ ಶತಮಾನದಲ್ಲಿ ಮಹಿಳಾ ಸಮಾಜದಲ್ಲಿ ಪುರುಷರ ಹಸ್ತಕ್ಷೇಪ ಕಡಿಮೆಯಾಗಿದ್ದರೂ ಮಹಿಳೆ ಮೇಲೆ ಕೆಲ ಸಂಸ್ಥೆಗಳಲ್ಲಿ ಹಿಂಸೆ, ದೌರ್ಜನ್ಯ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
    ಪುಷ್ಪಾ ರಾಜೇಗೌಡ ಮಾತನಾಡಿ, ದೇಶದಲ್ಲಿ ಮಹಿಳೆಯರು ಉನ್ನತ ಸಾಧನೆ ಮಾಡಿದ್ದಾರೆ. ಸಂವಿಧಾನ ಅದಕ್ಕೆ ಅವಕಾಶ ಮಾಡಿಕೊಟ್ಟಿದೆ. ಪ್ರಧಾನಮಂತ್ರಿ, ರಾಷ್ಟ್ರಪತಿ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದು ತಿಳಿಸಿದರು.
    ರಾಜ್ಯ ಸರ್ಕಾರ ಹೆಣ್ಣು ಮಕ್ಕಳಿಗೆ ಧ್ವನಿಯಾಗುವ ಕೆಲಸ ಮಾಡಿದೆ. ಸರ್ಕಾರ ಗ್ಯಾರಂಟಿ ಯೋಜನೆಗಳಾದ ಶಕ್ತಿ ಯೋಜನೆ, ಗೃಹ ಲಕ್ಷ್ಮಿ ಯೋಜನೆಗಳು ಮಹಿಳೆಯನ್ನು ಆರ್ಥಿಕವಾಗಿ ಶಕ್ತವಾಗಲು ಕಾರಣವಾಗುತ್ತಿವೆ ಎಂದು ಹೇಳಿದರು.
    ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ಶ್ರೀನಿಧಿ ದಿನೇಶ್ ಮಾತನಾಡಿ, ಮಹಿಳಾ ಸಂಘದಿಂದ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಮಹಿಳೆಯರನ್ನು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಲು ಸಂಘ ಶ್ರಮಿಸುತ್ತಿದೆ. ಕುಟುಂಬ ನಿರ್ವಹಣೆ ಒತ್ತಡದಲ್ಲಿರುವ ಮಹಿಳೆಯರು ಸಂಘದ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
    ಜಾನಪದ ಗೀತೆ ಸ್ಪರ್ಧೆ ಮತ್ತು ಜಾನಪದ ನೃತ್ಯ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ತೀರ್ಥಹಳ್ಳಿ, ಕೊಪ್ಪ, ಬಾಳೆಹೊನ್ನೂರು, ಶೃಂಗೇರಿ, ಎನ್.ಆರ್.ಪುರ, ಮೂಡಿಗೆರೆ, ಚಿಕ್ಕಮಗಳೂರಿನ ಮಹಿಳಾ ಒಕ್ಕಲಿಗರ ಸಂಘಗಳ ಪದಾಧಿಕಾರಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
    ಸಂಘದ ಉಪಾಧ್ಯಕ್ಷೆ ವಾಣಿ ಸತೀಶ್, ಕಾರ್ಯದರ್ಶಿ ಶ್ರುತಿ ಮಿತ್ರಾ, ಸುಧಾ, ಖಜಾಂಚಿ ವೀಣಾ, ನಿರ್ದೇಶಕಿಯರಾದ ರತ್ನಮ್ಮ, ಗೀತಾ ನಾಗೇಶ್, ಸತ್ಯವತಿ, ಸುನಂದಾ, ಮಧುರಾ, ಶಶಿರೇಖಾ, ಕವಿತಾ, ಶ್ವೇತಾ, ಶಿಲ್ಪಾ ಅರುಣ್, ಅನ್ವಿತಾ, ಅನ್ನಪೂರ್ಣ ನರೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts