More

    2000ದ ಸನಿಹದಲ್ಲಿದೆ ಬೆಂಗಳೂರಿನಲ್ಲಿ ಕೋವಿಡ್​ ಕೇಸ್​: ರಾಜ್ಯದಲ್ಲಿ 445 ಹೊಸ ಕೇಸ್​ ದೃಢ

    ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕೋವಿಡ್ 19 ಸೋಂಕು ಭಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದ್ದು, ಇಂದು (ನಿನ್ನೆ ಸಂಜೆ 5 ಗಂಟೆಯಿಂದ ಇಂದು ಸಂಜೆ 5 ಗಂಟೆ ತನಕದ ಅವಧಿಯಲ್ಲಿ) ಹೊಸದಾಗಿ 144 ಕೇಸ್​ಗಳು ದೃಢಪಟ್ಟಿವೆ. ಇದರೊಂದಿಗೆ ರಾಜ್ಯ ರಾಜಧಾನಿಯಲ್ಲಿ ಕೋವಿಡ್ ಕೇಸ್​ಗಳ ಪ್ರಮಾಣ 1935ಕ್ಕೆ ತಲುಪಿದೆ. ರಾಜ್ಯದಲ್ಲಿ ಇಂದು ಹೊಸದಾಗಿ 445 ಕೇಸ್​ಗಳು ಖಚಿತವಾಗಿದ್ದು, ಒಟ್ಟು ಕೇಸ್​ಗಳ ಸಂಖ್ಯೆ 11,005ಕ್ಕೆ ತಲುಪಿದೆ.

    ಇಂದು ಒಟ್ಟು ಸಕ್ರಿಯವಾಗಿರುವ ಪ್ರಕರಣಗಳ ಸಂಖ್ಯೆ 3,905 ಆಗಿದ್ದು, ಮೃತಪಟ್ಟವರ ಸಂಖ್ಯೆ 10. ಸಾವಿನ ಪ್ರಕರಣಗಳ ಪೈಕಿ ಮೂರು ಪ್ರಕರಣಗಳು ಬೆಂಗಳೂರಿನಲ್ಲೇ ವರದಿಯಾಗಿವೆ. ಅದರಲ್ಲಿ ಒಂದು ಪ್ರಕರಣದಲ್ಲಿ 45 ವರ್ಷದ ವ್ಯಕ್ತಿಗೆ ಎದೆನೋವಿ ಕಾಣಿಸಿಕೊಂಡಿತ್ತು. ಅವರಿಗೆ ಇನ್​ಫ್ಲುಯೆನ್ಜಾ ಲೈಕ್ ಇಲ್​ನೆಸ್​ ಲಕ್ಷಣಗಳಿದ್ದವು. ಕಲಬುರಗಿ, ಬಳ್ಳಾರಿ, ಬೀದರ್​, ಬಾಗಲಕೋಟೆ, ಶಿವಮೊಗ್ಗ, ಧಾರವಾಡ, ಕೋಲಾರಗಳಲ್ಲಿ ತಲಾ ಒಂದು ಸಾವು ಸಂಭವಿಸಿದೆ. ಇದರೊಂದಿಗೆ ಕೋವಿಡ್​ 19 ಸೋಂಕು ತಗುಲಿದ ಬಳಿಕ ಮೃತಪಟ್ಟವರ ಸಂಖ್ಯೆ 180 ತಲುಪಿದೆ. ಈ ಪೈಕಿ ನಾಲ್ಕು ಪ್ರಕರಣಗಳಲ್ಲಿ ಅನ್ಯಕಾರಣಗಳಿಗೆ ಸಾವು ಸಂಭವಿಸಿದೆ.

    ಇದನ್ನೂ ಓದಿ: ಬೆಳಗ್ಗೆ ನಡೆಯಬೇಕಿದ್ದ ಮದುವೆ ರಾತ್ರೋರಾತ್ರಿ ರದ್ದು, ವಧು-ವರ ಒಂದಾಗುವ ಕ್ಷಣಕ್ಕೆ ಭಂಗ ತಂದಿದ್ದೇನು?

    ಆಸ್ಪತ್ರೆಯಿಂದ ಇಂದು ಬಿಡುಗಡೆಯಾದವರ ಸಂಖ್ಯೆ 246 ಆಗಿದೆ. ಇದುವರೆಗೆ ಒಟ್ಟು 6916 ಜನ ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ. ಐಸಿಯುನಲ್ಲಿ 178 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದಿನ ಕೇಸ್​ಗಳ ಪೈಕಿ 21 ಅಂತಾರಾಷ್ಟ್ರೀಯ ಪ್ರಯಾಣದ ಹಿನ್ನೆಲೆ, 65 ಅಂತಾರಾಜ್ಯ ಪ್ರಯಾಣದ ಹಿನ್ನೆಲೆಯವರದ್ದು ಇದೆ.

    ಇನ್ನು ಜಿಲ್ಲೆಗಳ ವಿವರ ಗಮನಿಸಿದರೆ ಬೆಂಗಳೂರು ನಗರ ಕಳೆದ ಕೆಲವು ದಿನಗಳಿಂದ ನಂಬರ್ 1 ಸ್ಥಾನದಲ್ಲಿದೆ. ಇಂದು ಬೆಂಗಳೂರಿನಲ್ಲಿ 144, ಬಳ್ಳಾರಿ 47, ಕಲಬರುಗಿ 42, ಕೊಪ್ಪಳ 36, ದಕ್ಷಿಣ ಕನ್ನಡ 33 ಪ್ರಕರಣಗಳೊಂದಿಗೆ ಟಾಪ್ 5ರ ಪಟ್ಟಿಯಲ್ಲಿವೆ. ಒಟ್ಟು ಕೇಸ್​ಗಳ ಲೆಕ್ಕ ಗಮನಿಸಿದರೆ ಬೆಂಗಳೂರು 1935, ಕಲಬುರಗಿ 1331, ಉಡುಪಿ 1125, ಯಾದಗಿರಿ 916, ಬಳ್ಳಾರಿ 602 ಕೇಸ್​ಗಳೊಂದಿಗೆ ಟಾಪ್​ 5ರ ಪಟ್ಟಿಯಲ್ಲಿವೆ. ಉಳಿದ ವಿವರಗಳಿಗೆ ಕೆಳಗೆ ಇರುವ ಗ್ಯಾಲರಿ ಗಮನಿಸಿ.

    ಸ್ವಿಸ್​ ಬ್ಯಾಂಕ್​ನಲ್ಲೆಷ್ಟಿದೆ ಭಾರತದ ಹಣ?: ಏನಂತಿದೆ ಹೊಸ ಲೆಕ್ಕಾಚಾರ?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts