More

    ಕೊಪ್ಪಳ ಜಿಲ್ಲಾದ್ಯಂತ ಶಾಂತಿಯುತ ಮತದಾನ

    ಕೊಪ್ಪಳ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ನಡೆದ ಮತದಾನದಲ್ಲಿ ಮಹಿಳೆ, ಯುವಕರು, ವೃದ್ಧರು, ವಿಶೇಷ ಚೇತನರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರು ಒಳಗೊಂಡು ಎಲ್ಲ ಮತದಾರರು ತಮ್ಮ ಹಕ್ಕು ಚಲಾಯಿಸಿ ಸಂಭ್ರಮಿಸಿದರು.

    ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಿಯಿತು. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ 1,317 ಮತಗಟ್ಟೆಗಳಲ್ಲಿ ಮತದಾನ ನಡೆಸಲಾಯಿತು. ಬೇಸಿಗೆ ಕಾರಣ ಮತದಾರರಿಗೆ ಕುಡಿವ ನೀರು, ನೆರಳಿನ ವ್ಯವಸ್ಥೆ ಕಲ್ಪಿಸಲಾಯಿತು. 571 ಮತಗಟ್ಟೆಗಳಲ್ಲಿ ಶಾಮಿಯಾನ ಹಾಕಿದ್ದು ಕಂಡುಬಂತು. 25 ಸಖಿ, ತಲಾ ಐದು ಮಾದರಿ, ವಿಕಲಚೇತನ ಹಾಗೂ ಯುವ ಮತಗಟ್ಟೆಗಳನ್ನು ನಿರ್ಮಿಸಿ ಮಹಿಳೆ, ಯುವಕರು ಹಾಗೂ ಅಂಗವಿಕಲರಿಗೆ ಮತಹಾಕಲು ಪ್ರೇರೇಪಿಸಲಾಯಿತು. ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಸಖಿ ಮತಗಟ್ಟೆಯಲ್ಲಿ ಮತದಾರರಿಗೆ ವೆಲ್​ಕಮ್​ ಡ್ರಿಂಕ್​ ನೀಡಿ ಸ್ವಾಗತ ಕೋರಿದ್ದು ವಿಶೇಷವಾಗಿತ್ತು.

    ಜಿಲ್ಲಾಧಿಕಾರಿ ನಲಿನ್​ ಅತುಲ್​, ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ, ಎಸ್ಪಿ ಯಶೋದಾ ವಂಟಗೋಡಿ, ಎಡಿಸಿ ಸಾವಿತ್ರಿ ಕಡಿ ಮತದಾನ ಮಾಡಿದರು. ಬಳಿಕ ವಿವಿಧ ಮತಗಟ್ಟೆಗಳಿಗೆ ತೆರಳಿ ಮತದಾರರನ್ನು ಪ್ರೇರೇಪಿಸಿದರು. ಯುವ ಮತದಾರರ ಸೆಲ್ಫಿಗೆ ೋಸ್​ ನೀಡಿದರು. ಕೊಪ್ಪಳ ತಾಲೂಕಿನ ಕಾತರಕಿ&ಗುಡ್ಲಾನೂರಿನಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಕೃತಿಕಾ ನಡುವಲಮನಿ ಮತ ಚಲಾಯಿಸಿ ಪ್ರೇರಣೆಯಾದರು. ಇವರ ೋಟೋವನ್ನು ರಾಜ್ಯ ಚುನಾವಣಾ ಆಯೋಗ ಎಕ್ಸ್​ನಲ್ಲಿ ಟ್ವೀಟ್​ ಮಾಡುವ ಮೂಲಕ ಪ್ರಶಂಸೆ ವ್ಯಕ್ತಪಡಿಸಿತು. ಮತದಾನ ಜಾಗೃತಿ ರಾಯಭಾರಿಗಳಾದ ಮೆಹಬೂಬ್​ ಕಿಲ್ಲೇದಾರ, ಪೂರ್ಣಿಮಾ ಸೇರಿ ಇತರರು ಮತ ಚಲಾಯಿಸಿದರು.

    ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್​ ಕುಷ್ಟಗಿಯಲ್ಲಿ ತಮ್ಮ ತಂದೆ ಮಾಜಿ ಶಾಸಕ ಕೆ. ಶರಣಪ್ಪ ಆಶೀರ್ವಾದ ಪಡೆದು ಮತದಾನ ಮಾಡಿದರು. ಕಾಂಗ್ರೆಸ್​ ಅಭ್ಯರ್ಥಿ ರಾಜಶೇಖರ ಹಿಟ್ನಾಳ ತಮ್ಮ ಸ್ವಗ್ರಾಮ ಹಿಟ್ನಾಳದಲ್ಲಿ ಮತ ಚಲಾಯಿಸಿ ನಗೆ ಬೀರಿದರು. ಶಾಸಕ ರಾವೇಂದ್ರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ, ಜೆಡಿಎಸ್​ ಕೋರ್​ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ ಸೇರಿ ಇತರ ನಾಯಕರು ಕುಟುಂಬ ಸಮೇತ ಮತ ಚಲಾಯಿಸಿದರು.

    ಕೊಪ್ಪಳ ಜಿಲ್ಲಾದ್ಯಂತ ಶಾಂತಿಯುತ ಮತದಾನ

    ಮತದಾನ ಬಹಿಷ್ಕಾರ
    ತಾವರಗೇರಾ ಸಮೀಪದ ವಿಠಲಾಪುರದಲ್ಲಿ ಗರ್ಭಿಣಿ ಸಾವು ಪ್ರಕರಣ ಹಿನ್ನೆಲೆ ವೈದ್ಯೆ ವರ್ಗಾವಣೆಗೆ ಜನರು ಪಟ್ಟು ಹಿಡಿದರು. ಅಲ್ಲಿವರೆಗೂ ಮತದಾನ ಮಾಡುವುದಿಲ್ಲವೆಂದು ದೂರ ಉಳಿದರು. 862 ಮತದಾರರಿದ್ದು, ಯಾರೊಬ್ಬರೂ ಮತ ಚಲಾಯಿಸಲಿಲ್ಲ. ಇನ್ನು ಕುಕನೂರು ಪಟ್ಟಣದ ಗುದ್ನೆಪ್ಪನ ಮಠ ಬೂತ್​ ವ್ಯಾಪ್ತಿಯ ಮತದಾರರು ಆರಂಭದಲ್ಲಿ ಮತದಾನ ಬಹಿಷ್ಕರಿಸಿದರು. ಮಠದ ಆಸ್ತಿಯಲ್ಲಿ ಸರ್ಕಾರ ವಿವಿಧ ಕಟ್ಟಡಗಳನ್ನು ನಿರ್ಮಿಸಲು ಮುಂದಾಗಿದ್ದು, ಅದನ್ನು ಖಂಡಿಸಿದರು. ಬಳಿಕ ಅಧಿಕಾರಿಗಳು ಮನವೊಲಿಸಿ ಮತ ಹಾಕಿಸಿದರು.

    ಗವಿಶ್ರೀ, ಶತಾಯುಷಿಗಳಿಂದ ಮತದಾನ
    ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಕುವೆಂಪು ನಗರದ ಬೂತ್​ನಲ್ಲಿ ಮತ ಚಲಾಯಿಸಿದರು. ಸಾಮಾನ್ಯವಾಗಿ ಮಂಗಳವಾರ ಶ್ರೀಗಳು ಮೌನ ವ್ರತಾಚರಣೆ ಮಾಡುತ್ತಾರೆ. ಅಂದು ಹೊರ ಬರುವುದಿಲ್ಲ. ಮತದಾನ ಕಾರಣ ಆಗಮಿಸಿ ಹಕ್ಕು ಚಲಾಯಿಸಿದರು. ಇನ್ನು 102 ವರ್ಷದ ಹೊನ್ನೂರಮ್ಮ ಯಾರ ಸಹಾಯವಿಲ್ಲದೇ ಊರುಗೋಲು ಸಹಾಯದಿಂದ ಕುವೆಂಪು ನಗರದ ಮತಗಟ್ಟೆಗೆ ಆಗಮಿಸಿ ವೋಟ್​ ಮಾಡಿ ಎಲ್ಲರಿಗೆ ಮಾದರಿಯಾದರು. ಕುಣಿಕೇರಿಯಲ್ಲಿ ಶತಾಯುಷಿ ಬಸಪ್ಪ ವೀಲ್​ ಚೇರ್​ನಲ್ಲಿ ಆಗಮಿಸಿ ಮತ ಹಾಕಿದರು.

    ಕೊಪ್ಪಳ ಜಿಲ್ಲಾದ್ಯಂತ ಶಾಂತಿಯುತ ಮತದಾನ

    ಪ್ರಯಾಣಿಕರ ಪರದಾಟ
    ಚುನಾವಣಾ ಕರ್ತವ್ಯಕ್ಕೆ ಕೆಕೆಆರ್​ಟಿಸಿಯಿಂದ ಜಿಲ್ಲೆಯ ಐದು ಟಕಗಳಿಂದ 271 ಸಾರಿಗೆ ಬಸ್​ಗಳನ್ನು ಬಳಸಿಕೊಳ್ಳಲಾಗಿದೆ. ಪರಿಣಾಮ ಪ್ರಯಾಣಿಕರು ಪರದಾಡುವಂತಾಯಿತು. ಪ್ರಮುಖ ಬಸ್​ಗಳು ಹೊರತು ಪಡಿಸಿ ಇತರ ಮಾರ್ಗಗಳಿಗೆ ಬಸ್​ ಇರಲಿಲ್ಲ. ದೂರದಿಂದ ಬಂದವರು, ಅನ್ಯ ಊರುಗಳಿಂದ ಮತ ಚಲಾಯಿಸಲು ಬಂದವರು ಸಕಾಲಕ್ಕೆ ಬಸ್​ ಸಿಗದೆ ಪೇಚಾಡಿದರು. ಕೆಲವು ಖಾಸಗಿ ವಾಹನಗಳ ಮೂಲಕ ತೆರಳಿದರೆ, ಕೆಲವರು ಅನಿವಾರ್ಯವಾಗಿ ಬಸ್​ ಬರುವವರೆಗೆ ಕಾದಿದ್ದು, ತೆರಳಿದರು.

    ಕೊಪ್ಪಳ ಜಿಲ್ಲಾದ್ಯಂತ ಶಾಂತಿಯುತ ಮತದಾನ

    ಪೋಸ್ಟ್​ ವೈರಲ್​, ಸಂಗಣ್ಣ ಕಿಡಿ
    ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮದಲ್ಲಿ ಮತದಾರರ ಚೀಟಿಯಲ್ಲಿ ಬಿಜೆಪಿ ಅಭ್ಯರ್ಥಿ ಭಾವಚಿತ್ರ ಸಮೇತ ವಿತರಿಸದ ಟನೆ ನಡೆಯಿತು. ಇದರಿಂದ ಕಾರ್ಯಕರ್ತರಲ್ಲಿ ಕೆಲ ಕಾಲ ಗೊಂದಲ ಉಂಟಾಯಿತು. ಮಾದಿರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆಂದು ಕಾಂಗ್ರೆಸ್​ ಕಾರ್ಯಕರ್ತರು ಆರೋಪಿಸಿದರು. ಮತ್ತೊಂದೆಡೆ ಮಾಜಿ ಸಂಸದ ಸಂಗಣ್ಣ ಕರಡಿ ಕಾಂಗ್ರೆಸ್​ ಸೇರಿದ್ದು, ಅವರ ಹೆಸರಿನ ಪೋಸ್ಟ್​ ಬಿಜೆಪಿಗೆ ಮತಹಾಕುವಂತೆ ಮನವಿ ಮಾಡಿದ ರೀತಿಯಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ವೈರಲ್​ ಆಗಿದೆ. ಇದು ವಿಪಕ್ಷದವರ ಕುತಂತ್ರ ಎಂದು ಕಿಡಿಕಾರಿದ ಸಂಗಣ್ಣ, ಬೇಕೆಂದು ಗೊಂದಲ ಸೃಷ್ಟಿಸಲು ಹೀಗೆ ಮಾಡಿದ್ದಾರೆ. ಕಾರ್ಯಕರ್ತರು ಗೊಂದಲಕ್ಕೀಡಾಗಬಾರದೆಂದು ಮನವಿ ಮಾಡಿ ಸ್ಪಷ್ಟನೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts