More

    ಲಾಕ್​ಡೌನ್ ನಷ್ಟ ಭರಿಸೋದಕ್ಕೆ ಸಾಕಾಗುತ್ತಾ ಸ್ವಿಸ್​ಬ್ಯಾಂಕ್​ನಲ್ಲಿರೋ ಭಾರತೀಯರ ದುಡ್ಡು!

    ನವದೆಹಲಿ: ಕರೊನಾ ಸೋಂಕು ಪರಿಣಾಮ ಜಾಗತಿಕ ಅರ್ಥವ್ಯವಸ್ಥೆಯೇ ಹಿನ್ನಡೆ ಅನುಭಸಿದೆ. ಇಂತಹ ಸನ್ನಿವೇಶದಲ್ಲಿ ಸ್ವಿಸ್ ಬ್ಯಾಂಕ್​ ಹಣ ಲೆಕ್ಕಾಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಸ್ವಿಸ್​ ನ್ಯಾಷನಲ್ ಬ್ಯಾಂಕ್​ (ಎಸ್​ಎನ್​ಬಿ) ಇತ್ತೀಚೆಗೆ ಪ್ರಕಟಿಸಿದ ಡೇಟಾ ಇದಕ್ಕೆ ಕಾರಣ. ಟಾಪ್ ನೂರರ ಪಟ್ಟಿಯಲ್ಲಿ ಭಾರತದ ಸ್ಥಾನ ಎಷ್ಟನೆಯದು ಎಂಬಿತ್ಯಾದಿ ಕುತೂಹಲ ಸೃಷ್ಟಿಸಿದೆ.

    ಈ ಡೇಟಾ ಪ್ರಕಾರ, ಭಾರತ ಈ ಹಿಂದಿನ ಪಟ್ಟಿಯಲ್ಲಿರುವುದಕ್ಕಿಂತ ಮೂರು ಸ್ಥಾನ ಕೆಳಕ್ಕೆ ಕುಸಿದಿದೆ. ಅಂದರೆ ಹೊಸ ಪಟ್ಟಿಯಲ್ಲಿ ಭಾರತ 77ನೇ ಸ್ಥಾನದಲ್ಲಿದೆ. ಕಳೆದ ವರ್ಷದ ಭಾರತ ಪಟ್ಟಿಯ 74ನೇ ಸ್ಥಾನದಲ್ಲಿತ್ತು. ಬ್ಯಾಂಕಿನ ವಾರ್ಷಿಕ ವಿಶ್ಲೇಷಣಾ ವರದಿ ಇದಾಗಿದ್ದು. ಭಾರತೀಯರು ಮತ್ತು ಭಾರತೀಯ ಉದ್ಯಮಗಳು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸ್ವಿಸ್ ಬ್ಯಾಂಕ್​ನಲ್ಲಿ ಕಡಿಮೆ ಹಣ ಠೇವಣಿ ಇರಿಸಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಭಾರತೀಯ ಶಾಖೆಗಳ ಲೆಕ್ಕವೂ ಸೇರಿಸಿದರೆ ಸ್ವಿಸ್​ ಬ್ಯಾಂಕ್​ನಲ್ಲಿ ಭಾರತೀಯರ ಠೇವಣಿ ಶೇಕಡ 5.8 ಕುಸಿದಿದೆ. 2019ರಲ್ಲಿ ಲೆಕ್ಕಾಚಾರ ಪ್ರಕಾರ 899 ಸ್ವಿಸ್ ಫ್ರಾಂಕ್ಸ್​(6,625 ಕೋಟಿ ರೂಪಾಯಿ) ಮಾತ್ರ ಠೇವಣಿ ಇರಿಸಲ್ಪಟ್ಟಿದೆ.

    ನೆರೆಯ ರಾಷ್ಟ್ರಗಳ ಕಥೆಯೇನು?

    ಸ್ವಿಸ್​ ಬ್ಯಾಂಕ್​ನಲ್ಲಿ ಭಾರತದ ನೆರೆ ರಾಷ್ಟ್ರಗಳು ಹಣ ಇರಿಸಿಲ್ಲವೇ? ಅವುಗಳ ಶ್ರೇಣಿ ಏನೆಂಬ ಕುತೂಹಲ ಸಹಜವೇ. ಹೊಸ ಪಟ್ಟಿ ಪ್ರಕಾರ, ಪಾಕಿಸ್ತಾನ (99), ಬಾಂಗ್ಲಾದೇಶ (85), ನೇಪಾಳ (118), ಮ್ಯಾನ್ಮಾರ್​(186), ಭೂತಾನ್ (196)ನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಈ ರಾಷ್ಟ್ರಗಳ ಶ್ರೇಣಿಯೂ ಕುಸಿದಿದೆ.

    ಟಾಪ್ 50 ಪಟ್ಟಿಯಲ್ಲಿದ್ದ ಕಾಲವಿತ್ತು

    ಭಾರತದ ಕೆಲವು ಉದ್ಯಮಿಗಳು, ರಾಜಕಾರಣಿಗಳು, ಧನಿಕರು ತೆರಿಗೆ ವಂಚಿಸಿ ಕಾಳಧನವನ್ನು ಸ್ವಿಸ್ ಬ್ಯಾಂಕ್​ನಲ್ಲಿ ಠೇವಣಿಸಿ ಇರಿಸುತ್ತಿದ್ದ ಕಾಲ 1996-2007. ಆ ಅವಧಿಯಲ್ಲಿ ಭಾರತ ಟಾಪ್ 50ರ ಪಟ್ಟಿಯೊಳಗೆ ಕಾಣಿಸಿಕೊಂಡಿತ್ತು. 2008ರಿಂದೀಚೆಗೆ ಪಟ್ಟಿಯಲ್ಲಿ ಭಾರತ ಕುಸಿಯುತ್ತ ಸಾಗಿದೆ. 2008ರಲ್ಲಿ 55, 2009ರಲ್ಲಿ 59, 2010ರಲ್ಲೂ 59, 2011ರಲ್ಲಿ ಮತ್ತೆ 55, 2012ರಲ್ಲಿ 71ನೇ ಸ್ಥಾನ, 2013ರಲ್ಲಿ 58ನೇ ಸ್ಥಾನದಲ್ಲಿತ್ತು.

    ಪಟ್ಟಿಯಲ್ಲಿ ಬ್ರಿಟನ್ ಅಗ್ರಸ್ಥಾನದಲ್ಲಿದ್ದು ಸ್ವಿಸ್ ಬ್ಯಾಂಕ್​ನಲ್ಲಿ 2019ರ ಕೊನೆಯ ಲೆಕ್ಕಾಚಾರದ ಪ್ರಕಾರ ವಿದೇಶಿ ಹಣದ ಶೇಕಡ 27 ಪಾಲು ಈ ದೇಶದ್ದಿದೆ. ಟಾಪ್ ಐದರ ಪಟ್ಟಿಯಲ್ಲಿ ಬ್ರಿಟನ್ ಹೊರತಾಗಿ, ಅಮೆರಿಕ, ವೆಸ್ಟ್​ಇಂಡೀಸ್​, ಫ್ರಾನ್ಸ್ ಮತ್ತು ಹಾಂಕಾಂಗ್​ಗಳಿವೆ. ಈ ಐದು ರಾಷ್ಟ್ರಗಳ ಪಾಲು ಸ್ವಿಸ್​ಬ್ಯಾಂಕ್ ವಿದೇಶಿ ಹಣದ ಶೇಕಡ 50ರಷ್ಟಿದೆ. ಇದೇ ಲೆಕ್ಕಾಚಾರ ಟಾಪ್​ 10 ರಾಷ್ಟ್ರಗಳಿಗೆ ನೋಡಿದರೆ ಮೂರನೇ ಎರಡಂಶ ಈ ರಾಷ್ಟ್ರಗಳ ಪಾಲಿದೆ. ಟಾಪ್ ಹತ್ತರ ಪಟ್ಟಿಯಲ್ಲಿ ಜರ್ಮನಿ, ಲಕ್ಸಂಬರ್ಗ್​, ಬಹಮಾಸ್, ಸಿಂಗಾಪುರ, ಕೇಮನ್ ಐಲ್ಯಾಂಡ್ಸ್​ ಸೇರಿವೆ. 15ರ ಪಟ್ಟಿ ತೆಗೆದುಕೊಂಡರೆ ಶೇಕಡ 75, ಟಾಪ್ 30 ರಾಷ್ಟ್ರಗಳ ಪಟ್ಟಿ ನೋಡಿದರೆ ವಿದೇಶಿ ಹಣದ ಶೇಕಡ 90 ಪಾಲು ಹೊಂದಿವೆ.

    ಇದನ್ನೂ ಓದಿ: ಬೆಳಗ್ಗೆ ನಡೆಯಬೇಕಿದ್ದ ಮದುವೆ ರಾತ್ರೋರಾತ್ರಿ ರದ್ದು, ವಧು-ವರ ಒಂದಾಗುವ ಕ್ಷಣಕ್ಕೆ ಭಂಗ ತಂದಿದ್ದೇನು?

    ಕನಿಷ್ಠ ಪಾಲು ಹೊಂದಿರುವ ರಾಷ್ಟ್ರಗಳು: ಸ್ವಿಸ್​ಬ್ಯಾಂಕ್​ನಲ್ಲಿರುವ ಒಟ್ಟು ವಿದೇಶಿ ಹಣದಲ್ಲಿ ಕನಿಷ್ಠ ಪಾಲು ಹೊಂದಿದ ರಾಷ್ಟ್ರಗಳೆಂದರೆ ಚೀನಾ, ಜೆರ್ಸಿ, ರಷ್ಯಾ, ಸೌದಿ ಅರೇಬಿಯಾ, ಆಸ್ಟ್ರೇಲಿಯಾ, ಪನಾಮಾ, ಇಟೆಲಿ, ಸಿಪ್ರಸ್​, ಯುಎಇ, ನೆದರ್ಲೆಂಡ್ಸ್​, ಜಪಾನ್​, ಗುರೆನ್ಸೆಗಳು ಸೇರಿ 22 ಇವೆ. ಇವುಗಳ ಪಾಲು ಶೇಕಡ 1ಕ್ಕಿಂತಲೂ ಕಡಿಮೆ ಇದೆ.

    ಭಾರತಕ್ಕಿಂತ ಹೆಚ್ಚಿನ ಪಾಲು ಹೊಂದಿರುವ ರಾಷ್ಟ್ರಗಳು: ಸ್ವಿಸ್​ಬ್ಯಾಂಕ್​ನಲ್ಲಿರುವ ಒಟ್ಟು ವಿದೇಶಿ ಹಣದಲ್ಲಿ ಭಾರತಕ್ಕಿಂತ ಹೆಚ್ಚಿನ ಪಾಲು ಹೊಂದಿರುವ ರಾಷ್ಟ್ರಗಳೆಂದರೆ ಕೆನ್ಯಾ (74), ಮಾರಿಷಸ್​(68), ನ್ಯೂಜಿಲೆಂಡ್​(67), ವೆನಿಜುವೆಲಾ(61), ಉಕ್ರೇನ್​(58), ಫಿಲಿಪ್ಪೀನ್ಸ್​(51), ಮಲೇಷ್ಯಾ(49), ಸೆಚೆಲ್ಲೆಸ್​(45), ಇಂಡೋನೇಷ್ಯಾ (44), ಸೌತ್​ ಕೊರಿಯಾ(41), ಥಾಯ್ಲೆಂಡ್​(37), ಕೆನಡಾ (36), ಇಸ್ರೇಲ್​​ (28), ಟರ್ಕಿ (26), ಮೆಕ್ಸಿಕೋ (26), ತೈವಾನ್ (24), ಸೌದಿ ಅರೇಬಿಯಾ (19), ಆಸ್ಟ್ರೇಲಿಯಾ (18), ಇಟೆಲಿ(16), ಯುಎಇ(14), ನೆದರ್ಲೆಂಡ್ಸ್​(13), ಜಪಾನ್​ (12), ಗುರೆಸ್ನೇ (11) ನೇ ಸ್ಥಾನದಲ್ಲಿವೆ.

    ಜೈಲಲ್ಲೇ ಯೂಸುಫ್ ಮೆಮೋನ್ ಸಾವು: 1993 ಮುಂಬೈ ಸರಣಿ ಸ್ಪೋಟದ ಅಪರಾಧಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts