ಜೈಲಲ್ಲೇ ಯೂಸುಫ್ ಮೆಮೋನ್ ಸಾವು: 1993 ಮುಂಬೈ ಸರಣಿ ಸ್ಪೋಟದ ಅಪರಾಧಿ

ಮುಂಬೈ: ದೇಶಾದ್ಯಂತ ಸಂಚಲನ ಮೂಡಿಸಿದ್ದ 1993ರ ಮುಂಬೈ ಸರಣಿ ಸ್ಪೋಟದ ಅಪರಾಧಿ ಯೂಸುಫ್​ ಮೆಮೋನ್​ ಜೈಲಿನಲ್ಲೇ ಮೃತಪಟ್ಟಿದ್ದಾನೆ. ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯ ನಾಶಿಕ್ ರೋಡ್​ ಪ್ರಿಸನ್​ನಲ್ಲಿ ಸೆರೆಮನೆ ವಾಸ ಅನುಭವಿಸುತ್ತಿದ್ದ ಯೂಸುಫ್​ ಶುಕ್ರವಾರ ಮೃತಪಟ್ಟದ್ದಾಗಿ ಪೊಲೀಸ್ ಆಯುಕ್ತ ವಿಶ್ವಾಸ್​ ನಗ್ರೆ ಪಾಟೀಲ್ ಹೇಳಿದ್ದಾರೆ. ಇದೇ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಕುಖ್ಯಾತ ಪಾತಕಿ ಟೈಗರ್ ಮೆಮೊನ್​ನ ಸಹೋದರ ಈ ಯೂಸುಫ್​ ಮೆಮೋನ್​. ಮರಣ ಹೇಗೆ ಸಂಭವಿಸಿತು ಎಂಬ ಅಂಶ ಬಹಿರಂಗವಾಗಿಲ್ಲ. ಮೃತದೇಹವನ್ನು ಮಹಜರಿಗಾಗಿ ಧುಲೆಗೆ ಕಳುಹಿಸಲಾಗಿದೆ ಎಂದು ಜೈಲಿನ ಅಧಿಕಾರಿಗಳು … Continue reading ಜೈಲಲ್ಲೇ ಯೂಸುಫ್ ಮೆಮೋನ್ ಸಾವು: 1993 ಮುಂಬೈ ಸರಣಿ ಸ್ಪೋಟದ ಅಪರಾಧಿ