More

    ಜೈಲಲ್ಲೇ ಯೂಸುಫ್ ಮೆಮೋನ್ ಸಾವು: 1993 ಮುಂಬೈ ಸರಣಿ ಸ್ಪೋಟದ ಅಪರಾಧಿ

    ಮುಂಬೈ: ದೇಶಾದ್ಯಂತ ಸಂಚಲನ ಮೂಡಿಸಿದ್ದ 1993ರ ಮುಂಬೈ ಸರಣಿ ಸ್ಪೋಟದ ಅಪರಾಧಿ ಯೂಸುಫ್​ ಮೆಮೋನ್​ ಜೈಲಿನಲ್ಲೇ ಮೃತಪಟ್ಟಿದ್ದಾನೆ. ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯ ನಾಶಿಕ್ ರೋಡ್​ ಪ್ರಿಸನ್​ನಲ್ಲಿ ಸೆರೆಮನೆ ವಾಸ ಅನುಭವಿಸುತ್ತಿದ್ದ ಯೂಸುಫ್​ ಶುಕ್ರವಾರ ಮೃತಪಟ್ಟದ್ದಾಗಿ ಪೊಲೀಸ್ ಆಯುಕ್ತ ವಿಶ್ವಾಸ್​ ನಗ್ರೆ ಪಾಟೀಲ್ ಹೇಳಿದ್ದಾರೆ.

    ಇದೇ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಕುಖ್ಯಾತ ಪಾತಕಿ ಟೈಗರ್ ಮೆಮೊನ್​ನ ಸಹೋದರ ಈ ಯೂಸುಫ್​ ಮೆಮೋನ್​. ಮರಣ ಹೇಗೆ ಸಂಭವಿಸಿತು ಎಂಬ ಅಂಶ ಬಹಿರಂಗವಾಗಿಲ್ಲ. ಮೃತದೇಹವನ್ನು ಮಹಜರಿಗಾಗಿ ಧುಲೆಗೆ ಕಳುಹಿಸಲಾಗಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾಗಿ ವರದಿಯಾಗಿದೆ.

    ಇದನ್ನೂ ಓದಿ: ಬೆಳಗ್ಗೆ ನಡೆಯಬೇಕಿದ್ದ ಮದುವೆ ರಾತ್ರೋರಾತ್ರಿ ರದ್ದು, ವಧು-ವರ ಒಂದಾಗುವ ಕ್ಷಣಕ್ಕೆ ಭಂಗ ತಂದಿದ್ದೇನು?

    ಸರಣಿ ಬಾಂಬ್ ಸ್ಫೋಟದ ಪಿತೂರಿಯನ್ನು ದಾವೂದ್ ಇಬ್ರಾಹಿಂ ಜತೆಗೂಡಿ ನಡೆಸಿದ ಟೈಗರ್​ಮೆಮೋನ್​ ಈ ಕೃತ್ಯದ ಮಾಸ್ಟರ್ ಮೈಂಡ್​ ಎಂದು ಆರೋಪಿಸಲಾಗುತ್ತಿದೆ. ಈ ಭಯೋತ್ಪಾದನಾ ಕೃತ್ಯಗಳಿಗೆ ಮುಂಬೈನಲ್ಲಿರುವ ಅಲ್ ಹುಸೇನಿ ಬಿಲ್ಡಿಂಗ್​ನ ಗ್ಯಾರೇಜ್​ ಮತ್ತು ತನ್ನ ಫ್ಲ್ಯಾಟ್​ ಅನ್ನು ಬಿಟ್ಟುಕೊಟ್ಟ ಆರೋಪದಂತೆ ಯೂಸುಫ್ ಬಂಧನವಾಗಿತ್ತು. ಕೃತ್ಯಗಳಲ್ಲಿ ಆತ ಭಾಗಿಯಾಗಿರುವುದು ಖಚಿತವಾಗಿ ಸಜೆ ಆಗಿತ್ತು. ವಿಶೇಷ ಟಾಡಾ ಕೋರ್ಟ್​ ಯೂಸುಫ್​ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

    ಟೈಗರ್ ಮೆಮೋನ್​ನ ಇನ್ನೊಬ್ಬ ಸಹೋದರ ಯಾಕುಬ್ ಮೆಮೋನ್​ ನ್ನು ಇದೇ ಕೇಸ್​ನಲ್ಲಿ ಬಂಧಿಸಲಾಗಿತ್ತು. ಅಪರಾಧ ಸಾಬೀತಾದ ಕಾರಣ 2015ರಲ್ಲಿ ಈತನನ್ನು ಮರಣದಂಡನೆ ಶಿಕ್ಷೆಗೆ ಒಳಪಡಿಲಸಾಗಿತ್ತು. 1993ರ ಮಾರ್ಚ್​ 12ರಂದು ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 12 ಬಾಂಬ್​ಗಳು ಬೇರೆ ಬೇರೆ ಸ್ಥಳಗಳಲ್ಲಿ ಸ್ಫೋಟಿಸಿದ್ದು ಕನಿಷ್ಠ 250 ಜನ ಮೃತಪಟ್ಟು ನೂರಾರು ಜನ ಗಾಯಗೊಂಡಿದ್ದರು. (ಏಜೆನ್ಸೀಸ್​)

    ಅಂತಾರಾಷ್ಟ್ರೀಯ ವಿಮಾನ ಹಾರಾಟ ಜುಲೈ 15 ರ ತನಕ ಇಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts