More

    ‘ತಿನ್ನಲ್ಲ, ತಿನ್ನೋಕೂ ಬಿಡಲ್ಲ’ ಎನ್ನುವ ಮೋದಿ ಅಕ್ಕಪಕ್ಕದಲ್ಲೇ ಇದ್ದಾರೆ ತಿನ್ನೋರು!: ಖರ್ಗೆ

    ಶಿವಮೊಗ್ಗ: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷಗಳ ನಡುವೆ ವಾಗ್ದಾಳಿ ಮುಂದುವರಿದಿದ್ದು, ಪಕ್ಷಗಳ ನಾಯಕರ ರೋಷಾವೇಶದ ಹೇಳಿಕೆಗಳು ಎಲ್ಲೆಡೆಯಿಂದ ಕೇಳಿ ಬರಲಾರಂಭಿಸಿವೆ. ಇಂದು ಸೊರಬ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಪರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಚಾರ ಮಾಡಿದರು.

    ಆನವಟ್ಟಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಪಾಲ್ಗೊಂಡ ಅವರು, ಇದು ಕಾಂಗ್ರೆಸ್‌ ಪಾಲಿಗೆ ಮಹತ್ವದ ಚುನಾವಣೆ. ನಾನು ಅನೇಕ ಚುನಾವಣೆ ಸಭೆಯಲ್ಲಿ ಭಾಗವಹಿಸಿದ್ದೇನೆ. ರಾಹುಲ್‌ ಗಾಂಧಿಯ ಭಾರತ ಜೋಡೋ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದೆ. ಲಕ್ಷಾಂತರ ಸಂಖ್ಯೆಯಲ್ಲಿ ಜನರು ಎಲ್ಲೆಡೆ ಸೇರುವುದನ್ನು ಕಂಡಿದ್ದೇನೆ. ಇದು ಕಾಂಗ್ರೆಸ್‌ ಬಲವರ್ಧನೆಗೊಳ್ಳುತ್ತಿರುವುದರ ಸಂಕೇತ ಎಂದು ಹೇಳಿದರು.

    ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆ ನೀಡಲು ಹೋಗಿದ್ದ ಸಹೋದರಿಯರಿಬ್ಬರ ಸಾವು!

    ಕಾಂಗ್ರೆಸ್‌ ಪಕ್ಷ ಜನರ ಪಕ್ಷ. ಭೂ ಸುಧಾರಣೆ, ವಸತಿ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದೆ. ಇಂದು ಬಿಜೆಪಿ ಗುಡಿ ಕಟ್ಟುವುದರಲ್ಲಿ ನಿರತವಾಗಿದೆ. ಆದರೆ ಕಾಂಗ್ರೆಸ್‌ ಕಾಲದಲ್ಲಿ ಈ ಹಿಂದೆಯೇ ಆರಾಧನಾ ಯೋಜನೆಯನ್ನು ಬಂಗಾರಪ್ಪ ಜಾರಿಗೆ ತಂದಿದ್ದರು. ಬಿಜೆಪಿಯವರು ವೋಟ್​ಗಾಗಿ ಗುಡಿ ಕಟ್ಟಿದ್ದರೆ ಕಾಂಗ್ರೆಸ್‌ ಜನರನ್ನು ಒಂದೆಡೆ ಸೇರಲು ಗುಡಿ ಕಟ್ಟುತ್ತಿದ್ದಾರೆ ಎಂದು ಖರ್ಗೆ ಹೇಳಿದರು.

    ಇದನ್ನೂ ಓದಿ: ಭ್ರಷ್ಟ ಅಧಿಕಾರಿಗೆ 15 ವರ್ಷಗಳ ಬಳಿಕ 2 ವರ್ಷ ಸಜೆ, 60 ಲಕ್ಷ ರೂ. ದಂಡ!

    ಈ ಸರ್ಕಾರ ಬಂದ ಮೇಲೆ ಜನರು ಹಾಗೂ ಗುತ್ತಿಗೆದಾರರು ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಬಹಿರಂಗವಾಗಿ ಆರೋಪ ಮಾಡಿದ್ದಾರೆ. ಶೇ.40 ಕಮಿಷನ್ ಕೊಡದೆ ಯಾವ ಕೆಲಸವೂ ಆಗುವುದಿಲ್ಲ. ಈ ಬಗ್ಗೆ ರಾಷ್ಟ್ರಪತಿ, ಲೋಕಾಯುಕ್ತ, ರಾಜ್ಯಪಾಲರಿಗೆ ಪತ್ರ ಬರೆದಿದ್ದರೂ ಏನೂ ಪ್ರಯೋಜನ ಆಗಿಲ್ಲ. ಅದೇ ಬೇರೆಯವರಿಗಾದರೆ ಸಿಬಿಐ, ಇಡಿ ಮುಂತಾದವುಗಳ ಮೂಲಕ ಧಮ್ಕಿ ಹಾಕುತ್ತಾರೆ. ನ ಖಾವೂಂಗಾ, ನಾ ಖಾನೆ ದೂಂಗಾ (ತಿನ್ನಲ್ಲ, ತಿನ್ನೋಕೂ ಬಿಡಲ್ಲ) ಎಂದು ಮೋದಿ ಹೇಳುತ್ತಾರೆ. ಆದರೆ ತಿನ್ನುವವರೇ ಅವರ ಅಕ್ಕಪಕ್ಕದಲ್ಲಿ ಕುಳಿತಿದ್ದಾರೆ. ಸ್ವಲ್ಪ ನಿಮ್ಮ ಅಕ್ಕಪಕ್ಕ ಇರುವ ಬೊಮ್ಮಾಯಿ ಕಡೆಯೂ ನೋಡಿ ಎಂದು ಖರ್ಗೆ ಹೇಳಿದರು.

    ಇದನ್ನೂ ಓದಿ: ಸಂಬಂಧಿಯಿಂದಲೇ ಭೀಕರ ಕೃತ್ಯ: ಅಣ್ಣನ ಹೆಂಡತಿ ಹಾಗೂ ಮಗನನ್ನು ಹೊಡೆದು ಕಡಿದು ಕೊಂದ

    ನೀವು ಬಂದ ಮೇಲೆ ರಾಜ್ಯಕ್ಕೆ ಏನು ತಂದಿದ್ದೀರಾ? ಎಲ್ಲ ಆಗಿರುವುದು ನೆಹರು-ಕಾಂಗ್ರೆಸ್‌ ಆಡಳಿತದಲ್ಲಿ ಹೊರತು ನಿಮ್ಮ ಆಡಳಿತದಲ್ಲಿ ಅಲ್ಲ. ವರ್ಷಕ್ಕೆ 2 ಕೋಟಿಯ ಉದ್ಯೋಗ ಸೃಷ್ಟಿ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ನೀಡುವ ನಿಮ್ಮ ಭರವಸೆ ಈಡೇರಿಲ್ಲ. ರಾಜ್ಯದಲ್ಲಿ 2.5 ಕೋಟಿ, ದೇಶದಲ್ಲಿ 30 ಲಕ್ಷ ಹುದ್ದೆ ಖಾಲಿ ಇದ್ದರೂ ಅದನ್ನು ಏಕೆ ಭರ್ತಿ ಮಾಡಿಲ್ಲ? ಎಂದು ಖರ್ಗೆ ಪ್ರಶ್ನಿಸಿದ್ದಾರೆ.

    ನಾವು ಸಂವಿಧಾನ ರಕ್ಷಣೆ ಮಾಡಿದ್ದೇವೆ, ಪ್ರಜಾಪ್ರಭುತ್ವ ರಕ್ಷಿಸಿದ್ದೇವೆ. ಅದರ ಫಲವನ್ನು ನೀವು ಅನುಭವಿಸುತ್ತಿದ್ದೀರಿ. ಮೈಸೂರು ಬೆಂಗಳೂರು ನಡುವಿನ ರಸ್ತೆ ನಿರ್ಮಾಣದ ಯೋಜನೆ ನಾವೇ ರೂಪಿಸಿದ್ದರೂ ಬಿಜೆಪಿಯವರು ಇದು ನಮ್ಮ ಸಾಧನೆ ಅಂದುಕೊಳ್ಳುತ್ತಿದ್ದಾರೆ. ಅದೇ ರೀತಿ ಐಟಿ-ಬಿಟಿ ಕ್ಷೇತ್ರದಲ್ಲಿ ಸಾಧನೆ ಆಗಿದ್ದು ಕಾಂಗ್ರೆಸ್‌ ಅವಧಿಯಲ್ಲಿ ಎಂದು ಹೇಳಿದರು.

    ಇದನ್ನೂ ಓದಿ: ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ಜನರು ಬೆವರು ಸುರಿಸಿ ದುಡಿದ ಪ್ರಾವಿಡೆಂಡ್ ಹಣವನ್ನು ಅದಾನಿಗೆ ಸಾಲ ಕೊಡಲಾಗಿದೆ. ಅದೇ ರೀತಿ ರಸ್ತೆ, ಬಂದರು, ಏರ್​ಪೋರ್ಟ್​ ಸೇರಿ ಪ್ರತಿಯೊಂದನ್ನು ಅದಾನಿಗೆ ಕೊಡಲಾಗಿದೆ. ಅದರ ಪರಿಣಾಮ ಅದಾನಿ ಆಸ್ತಿ ಎರಡೂವರೆ ವರ್ಷದಲ್ಲಿ 12.5 ಲಕ್ಷ ಕೋಟಿಯಷ್ಟು ಹೆಚ್ಚಾಗಿದೆ. ಮೋದಿ ಹೋದಲೆಲ್ಲ ಹೋಗುವ ಅದಾನಿಗೆ ಸಹಾಯ ಮಾಡುವಂತೆ ಪ್ರಧಾನಿಯೇ ಹೇಳುತ್ತಾರೆ. ಅದೇ ರೀತಿಯಲ್ಲಿ ವಿದೇಶಗಳಿಗೂ ಹೋಗಿ ಅದಾನಿ ಲಾಭ ಪಡೆಯುತ್ತಿದ್ದಾರೆ ಎಂದು ಖರ್ಗೆ ಆರೋಪಿಸಿದರು.

    ನೀವೆಷ್ಟು ಕೇಳ್ತೀರೋ ಅಷ್ಟು ಹಾಡುತ್ತೇನೆ, ನೀವು ಹೇಳಿದಷ್ಟು ಡ್ಯಾನ್ಸ್ ಮಾಡುತ್ತೇನೆ: ನಟ ಶಿವರಾಜಕುಮಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts