ಅಕ್ಕಪಕ್ಕದ ಮನೆಯವರ ನಿದ್ದೆಗೆಡಿಸಿದ ಮಹಿಳೆಯ ಶವ; 18 ತಾಸು ತಳಮಳದಲ್ಲೇ ಕಾಲಕಳೆದರು..ಈಗಲೂ ಆತಂಕ

Covid 19
Published on

ಕೋಲ್ಕತ್ತ: ಕರೊನಾ ಸೋಂಕಿತ ಮಹಿಳೆಯೋರ್ವರ ಶವ ಅವರ ಮನೆಯಿರುವ ಏರಿಯಾದಾದ್ಯಂತ ಆತಂಕ ಸೃಷ್ಟಿಸಿದೆ. ಮಹಿಳೆಯ ಮನೆಯ ಸುತ್ತಲಿನ ನಿವಾಸಿಗಳು ಚಿಂತಾಕ್ರಾಂತರಾಗಿದ್ದಾರೆ.

ಕೋಲ್ಕತ್ತದ ಬೆಹಾಲಾದಲ್ಲಿ ಮನೆಯೊಂದರಲ್ಲಿ 55ವರ್ಷದ ಕರೊನಾ ಸೋಂಕಿತ ಮಹಿಳೆಯೋರ್ವರು ಮೃತಪಟ್ಟಿದ್ದರು. ಆದರೆ ಅವರ ಶವ ಸುಮಾರು 18 ತಾಸುಗಳ ಕಾಲ ಮನೆಯಲ್ಲೇ ಇತ್ತು. ಕೊವಿಡ್​-19 ಸೋಂಕಿತ ಶವಸಂಸ್ಕಾರಕ್ಕೆ ಅದರದ್ದೇ ಆದ ನಿಯಮಗಳು ಇರುವ ಕಾರಣ ಮನೆಯವರೆಲ್ಲ ಸುಮ್ಮನೆ ಕುಳಿತಿದ್ದರು. ಅವರೂ ಹೊರಗೆ ಬರುವಂತಿರಲಿಲ್ಲ. ಇದನ್ನೂ ಓದಿ: ಕರೊನಾ ತಡೆಗೆ ಅಬ್ಬಾ ಇದೆಂಥ ಕಟ್ಟುನಿಟ್ಟು; ಮೂವರಿಗೆ ಸೋಂಕು; 80 ಸಾವಿರ ಜನರ ತೆರವು ಕಾರ್ಯಾಚರಣೆ..!

ಭಾನುವಾರ ರಾತ್ರಿ 10.30ಕ್ಕೆ ಮಹಿಳೆ ಮೃತಪಟ್ಟಿದ್ದರು. ಅದು ಮರುದಿನ ಅಂದರೆ ಸೋಮವಾರ ಮಧ್ಯಾಹ್ನದವರೆಗೂ ಮನೆಯಲ್ಲೇ ಇತ್ತು. ಕೋಲ್ಕತ್ತ ಮುನ್ಸಿಪಲ್​ ಕಾರ್ಪೋರೇಶನ್​ನವರಿಗೆ ಪದೇಪದೆ ಕಾಲ್​ ಮಾಡಿದರೂ ಅವರು ಪ್ರತಿಕ್ರಿಯಿಸಲಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಇದೀಗ ಆ ಮನೆಯ ಆರು ಮಂದಿಗೆ ಕರೊನಾ ಸೋಂಕು ತಗುಲಿದ್ದು ದೃಢಪಟ್ಟಿದೆ. 18 ತಾಸು ಶವ ಮನೆಯಲ್ಲೇ ಇದ್ದ ಕಾರಣ ಅಕ್ಕಪಕ್ಕದ ಮನೆಯವರಾದ ನಮಗೂ ಆತಂಕ ಶುರುವಾಗಿದೆ ಎಂದಿದ್ದಾರೆ. ಅಷ್ಟೇ ಅಲ್ಲ, ಸಾವನ್ನಪ್ಪಿದ ಮಹಿಳೆಯ ಮನೆಯವರಿಗೆ ಮನೆಯೊಳಗೇ ಇರಲು ಒತ್ತಾಯಿಸುತ್ತಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net