More

    ಕರೊನಾ ತಡೆಗೆ ಅಬ್ಬಾ ಇದೆಂಥ ಕಟ್ಟುನಿಟ್ಟು; ಮೂವರಿಗೆ ಸೋಂಕು; 80 ಸಾವಿರ ಜನರ ತೆರವು ಕಾರ್ಯಾಚರಣೆ..!

    ನವದೆಹಲಿ: ಕರೊನಾ ವ್ಯಾಪಿಸುವುದನ್ನು ತಡೆಯಲು ದೇಶದಲ್ಲಿ ಇನ್ನಿಲ್ಲದ ಯತ್ನಗಳನ್ನು ನಡೆಸಲಾಗುತ್ತಿದೆ. ಆದರೂ ನಿಯಂತ್ರಣಕ್ಕೆ ತರಲಾಗುತ್ತಿಲ್ಲ. ಲಾಕ್​ಡೌನ್​ ಮಾಡಿದರೂ ಪ್ರಯೋಜನವಿಲ್ಲವೆಂದು ಒಂದೊಂದಾಗಿ ನಿರ್ಬಂಧಗಳನ್ನು ಸಡಿಲಿಸಲಾಗುತ್ತದೆ.

    ಆದರೆ, ಇದಕ್ಕೆ ವಿರುದ್ಧವೆಂಬಂತೆ ಕೇವಲ ಮೂವರಲ್ಲಿ ಹೊಸದಾಗಿ ಸೋಂಕು ಕಂಡುಬಂದ ಹಿನ್ನೆಲೆಯಲ್ಲಿ 80 ಸಾವಿರ ಜನರನ್ನು ತೆರವುಗೊಳಿಸುತ್ತಿದೆ. ಇಷ್ಟಕ್ಕೂ ಇಡೀ ದೇಶದಲ್ಲಿರುವ ಈವರೆಗೆ ಕೇವಲ 420 ಜನರಲ್ಲಷ್ಟೇ ಸೋಂಕು ಕಂಡು ಬಂದಿದೆ. ಕೋವಿಡ್​ನಿಂದ ಯಾವುದೇ ಸಾವು ಸಂಭವಿಸಿಲ್ಲ.

    ಇದನ್ನೂ ಓದಿ; ಕಾಂಗ್ರೆಸ್​ ಜತೆ ಬಿಎಸ್​ಪಿ ವಿಲೀನ ಪ್ರಶ್ನಿಸಿದ್ದ ಬಿಜೆಪಿಗೆ ಮುಖಭಂಗ; ನಿಟ್ಟುಸಿರು ಬಿಟ್ಟ ಸಿಎಂ ಅಶೋಕ್​ ಗೆಹ್ಲೋಟ್​ 

    ದಕ್ಷಿಣ ಏಷ್ಯಾದ ವಿಯಟ್ನಾಂ ದೇಶದಲ್ಲಿ ಇಷ್ಟೊಂದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಇಲ್ಲಿ ದನಾಂಗ್​ ಪ್ರದೇಶ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಸದ್ಯ ವಿದೇಶಿ ಪ್ರವಾಸಿಗರಿಗೆ ಪ್ರವೇಶವಿಲ್ಲ. ಕರೊನಾ ಕಾರಣದಿಂದಾಗಿ ವಿಮಾನ ಯಾನ ಅಗ್ಗವಾಗಿದ್ದು, ರೆಸಾರ್ಟ್​ಗಳಲ್ಲಿ ವಾಸ್ತವ್ಯದ ಬೆಲೆಯೂ ಭಾರಿ ಇಳಿಕೆಯಾಗಿದೆ. ಹೀಗಾಗಿ ಸ್ಥಳೀಯರೇ ಹೆಚ್ಚಾಗಿ ಇಲ್ಲಿಗೆ ಆಗಮಿಸಿದ್ದಾರೆ.

    ಇಲ್ಲಿಗೆ ಬಂದವರನ್ನು ತೆರವುಗೊಳಿಸಲು ಕನಿಷ್ಠ ನಾಲ್ಕು ದಿನಗಳಾದರೂ ಬೇಕು ಎಂದು ಅಂದಾಜಿಸಲಾಗಿದೆ. ವಿಮಾನಗಳು ಪ್ರತಿದಿನ ನೂರಕ್ಕೂ ಹೆಚ್ಚು ಹಾರಾಟ ನಡೆಸಲಿವೆ. ಇಲ್ಲಿಂದ ದೇಶದ 11 ನಗರಗಳಿಗೆ ತೆರಳಲಿವೆ. ಇಲ್ಲಿಂದ ತೆರಳಿದವರಿಗೂ ಕನಿಷ್ಠ 14 ದಿನಗಳ ಹೋಂ ಕ್ವಾರಂಟೈನ್​ ಕಡ್ಡಾಯಗೊಳಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

    ಇದನ್ನೂ ಓದಿ; ಕರೊನಾ ಸಂಕಷ್ಟದಲ್ಲಿ ಖುಲಾಯಿಸಿದ ಅದೃಷ್ಟ; ಒಂದೇ ಮೀನಿಗೆ 20 ಲಕ್ಷ ರೂಪಾಯಿ..! ಏನಿದರ ವಿಶೇಷ? 

    ಈ ನಡುವೆ ಮಾಸ್ಕ್​ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಇದಲ್ಲದೇ, ದೇಶಕ್ಕೆ ಅಕ್ರಮವಾಗಿ ನುಸುಳಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪ್ರಧಾನಿ ನ್ಯೂಯೇನ್​ ಕ್ಸುವಾ ಹೇಳಿದ್ದಾರೆ.

    ಕರೊನಾ ಲಸಿಕೆಯಿಂದ ಡಿಎನ್​ಎ ಬದಲಾವಣೆ; 7 ಲಕ್ಷ ಜನರಿಗೆ ಅಡ್ಡ ಪರಿಣಾಮ; ಇಲ್ಲಿದೆ ಫ್ಯಾಕ್ಟ್​ ಚೆಕ್​….!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts