

ನವದೆಹಲಿ: ಕರೊನಾ ವೈರಸ್ ಸೋಂಕಿತರ ಸಂಖ್ಯೆ ಭಾರತದಲ್ಲಿ ಕ್ಷಣಕ್ಷಣಕ್ಕೂ ಹೆಚ್ಚುತ್ತಿದ್ದು, ಕಾಲಕಾಲಕ್ಕೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡುತ್ತಿದೆ.
ಇಂದು ಬೆಳಗ್ಗೆ 10 ಗಂಟೆಯ ಹೊತ್ತಿಗೆ ಭಾರತದಲ್ಲಿ ಕರೊನಾ ರೋಗಿಗಳು 867 ಜನರಿದ್ದರು. ಆದರೆ ಈ ಸಂಖ್ಯೆ ಮಧ್ಯಾಹ್ನದ ವೇಳೆಗೆ 979ಕ್ಕೆ ಏರಿದೆ. ಇಲ್ಲಿಯವರೆಗೆ ಕರೊನಾದಿಂದ ಮೃತಪಟ್ಟವರು ಒಟ್ಟು 25 ಜನ.
ಕರೊನಾ ವೈರಸ್ನಿಂದ ಇದುವರೆಗೆ ಮಹಾರಾಷ್ಟ್ರದಲ್ಲಿ 6 ಮಂದಿ, ಗುಜರಾತ್ನಲ್ಲಿ ನಾಲ್ಕು, ಕರ್ನಾಟಕದಲ್ಲಿ ಮೂರು, ಮಧ್ಯಪ್ರದೇಶ ಮತ್ತು ದೆಹಲಿಯಲ್ಲಿ ತಲಾ ಇಬ್ಬರು, ಕೇರಳ, ತೆಲಂಗಾಣ, ತಮಿಳುನಾಡು, ಬಿಹಾರ್, ಪಂಜಾಬ್, ಪಶ್ಚಿಮಬಂಗಾಳ, ಜಮ್ಮುಕಾಶ್ಮೀರ ಮತ್ತು ಹಿಮಾಚಲ ಪ್ರದೇಶಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.
979 ಕರೊನಾ ಸೋಂಕಿತರಲ್ಲಿ 48 ಮಂದಿ ವಿದೇಶಿಗರು. ಒಟ್ಟು 86 ಜನರು ಗುಣಮುಖರಾಗಿದ್ದಾರೆ. (ಏಜೆನ್ಸೀಸ್)