ಚಿಕ್ಕಬಳ್ಳಾಪುರ, ಹಾಸನಕ್ಕೆ "ಮಹಾ" ಕಂಟಕ- ರಾಜ್ಯದಲ್ಲಿ 105 ಕರೊನಾ ಹೊಸ ಪ್ರಕರಣ!

covid 19
Published on

ಬೆಂಗಳೂರು: ನಿನ್ನೆ ಸಂಜೆ 5 ಗಂಟೆಯಿಂದ ಇಂದು ಮಧ್ಯಾಹ್ನ 12 ಗಂಟೆಯವರೆಗೆ ರಾಜ್ಯದಲ್ಲಿ ಕರೊನಾ ಸೋಂಕಿತರು 105 ಮಂದಿ ಹೊಸದಾಗಿ ಪತ್ತೆಯಾಗಿದ್ದಾರೆ. ಇವರ ಪೈಕಿ 84 ಮಂದಿ ಮಹಾರಾಷ್ಟ್ರದಿಂದ ಬಂದವರೇ ಆಗಿದ್ದಾರೆ. ಇವರಲ್ಲಿ ಚಿಕ್ಕಬಳ್ಳಾಪುರ ಒಂದರಲ್ಲಿಯೇ 45 ಪ್ರಕರಣಗಳು ಪತ್ತೆಯಾಗಿವೆ.

ಈ ಮೂಲಕ ರಾಜ್ಯದಲ್ಲಿ ಸೊಂಕಿತರ ಸಂಖ್ಯೆ 1080ಕ್ಕೆ ಏರಿದೆ. ಈಗಾಗಲೇ 588 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 41 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ಹೊಸದಾಗಿ ಪತ್ತೆಯಾಗಿರುವ 105 ಪ್ರಕರಣಗಳಲ್ಲಿ ಶೇ.90ರಷ್ಟು ಮಂದಿ 40 ವರ್ಷ ವಯಸ್ಸಿನ ಒಳಗಿನವರು ಎನ್ನುವುದು ಕೂಡ ಆತಂಕಕ್ಕೆ ಕಾರಣವಾಗಿದೆ. ಈ ಪೈಕಿ ಮಕ್ಕಳು ಕೂಡ ಅಧಿಕ ಸಂಖ್ಯೆಯಲ್ಲಿ ಇದ್ದಾರೆ.

ಹೊಸದಾಗಿ ಪತ್ತೆಯಾಗಿರುವ ಪ್ರಕರಣಗಳ ಅಂಕಿ ಅಂಶ ಇಂತಿದೆ:

ಚಿಕ್ಕಬಳ್ಳಾಪುರ- 45, ಹಾಸನ 14, ತುಮಕೂರು- 8, ಬೀದರ್​-6, ಚಿಕ್ಕಮಗಳೂರು- 5, ಬೆಂಗಳೂರು ಗ್ರಾಮಾಂತರ- 4, ಬೆಂಗಳೂರು ನಗರ- 4, ದಾವಣಗೆರೆ-3, ಮಂಡ್ಯ- 3, ಧಾರವಾಡ-2, ಹಾವೇರಿ-3, ವಿಜಯಪುರ-2, ಬಾಗಲಕೋಟೆ-1, ಚಿತ್ರದುರ್ಗ-1, ಬೆಳಗಾವಿ-1

ನಿಜಾಮುದ್ದೀನ್‌ ಮರ್ಕಜ್‌ ಮಸೀದಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿರುವ ಪ್ರತಿಯೊಬ್ಬರೂ ಉಚಿತ ಆರೋಗ್ಯ ಸಹಾಯವಾಣಿ 080-29711171 ಸಂಪರ್ಕಿಸುವಂತೆ ಸರ್ಕಾರ ಸೂಚಿಸಿದೆ.

ಸೋಂಕಿತರ ಪ್ರಯಾಣದ ಮಾಹಿತಿ ಬೇಕಿದ್ದರೆ www.karnataka.gov.in. ಮೊಬೈಲ್‌ ಅಪ್ಲಿಕೇಷ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಸರ್ಕಾರದ ಪ್ರಕಟಣೆ ತಿಳಿಸಿದೆ. ಕರೊನಾ ವೈರಸ್‌ ಉಚಿತ ಆರೋಗ್ಯ ಸಹಾಯವಾಣಿ ಸಂಖ್ಯೆ: 104/ 9745697456.

ಸಂಪೂರ್ಣ ವಿವರ ಇಲ್ಲಿದೆ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net