VIDEO | ಕಸ್ಟಡಿಯಿಂದ ಪರಾರಿಯಾಗಲು ಆರೋಪಿ ಯತ್ನ; ಕೈ-ಕಾಲು ಕಟ್ಟಿ ಎಳೆದೊಯ್ದ ಮಹಿಳಾ ಪೊಲೀಸರು

Untitled-design-2023-10-21T181946.991
Published on

ಜಾರ್ಖಂಡ್: ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯನ್ನು ಇಬ್ಬರು ಮಹಿಳಾ ಪೊಲೀಸರು ಸೆರೆಹಿಡಿದು ಆಕೆಯ ಕೈ-ಕಾಲು ಕಟ್ಟಿ ರಸ್ತೆಯ ಮಧ್ಯೆ ಎಳೆದುಕೊಂಡು ಬಂದ ದೃಶ್ಯ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಮೊಬೈಲ್​ ಕಳ್ಳತನ ಮಾಡಿದ್ದ ಆರೋಪದಡಿ ಪೊಲೀಸರು ಮಹಿಳೆ ಮತ್ತು ಆಕೆಯ ಪತಿಯನ್ನು ಬಂಧಿಸಿದ್ದರು. ಕಸ್ಟಡಿಯಲ್ಲಿದ್ದ ಮಹಿಳಾ ಆರೋಪಿ​ ಕಸ್ಟಡಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾಳೆ. ಇದನ್ನು ಅರಿತ ಬೆನ್ನಲ್ಲೇ ಬೊಕಾರೊ ಪೊಲೀಸ್‌ ಠಾಣೆಯ ಲೇಡಿ ಪೊಲೀಸರು ಆಕೆಯನ್ನು ಚೇಸ್​ ಮಾಡಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಯ ಕೈ ಮತ್ತು ಕಾಲನ್ನು ಕಟ್ಟಿದ ಪೊಲೀಸರು, ಆಕೆಯನ್ನು ರಸ್ತೆಯ ಮಧ್ಯೆ ಎಳೆದೊಯ್ದ ದೃಶ್ಯ ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದೆ. ಈ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net